ಚಾಕೊಲೇಟ್ ಹಿರೋ ಶಾಹಿದ್ ಕಪೂರ್ ಬಾಲಿವುಡ್‍ಗೆ ಕಾಲಿಟ್ಟಿದ್ದೆ ಬಣ್ಣದ ಲೋಕದಲ್ಲಿ ಹೊಸ ಸಂಚಲನವೇ ಕ್ರಿಯೇಟ್ ಆಯ್ತು. ಹೆಂಗಳೆಯರ ಮನ ಕದ್ದು ಫ್ಲರ್ಟ್‍ಕಿಂಗ್ ಅಂತಾನೆ ಹೆಸ್ರು ಮಾಡಿದ್ದ ರಸಿಕ ಅಂದ್ರೆ ಅದು ಶಾಹಿದ್ ಕಪೂರ್. ಕಲರ್‍ಫುಲ್ ಲೋಕದಲ್ಲಿ ಕಲರ್ ಫುಲ್ ಜರ್ನಿ ಇದ್ದೇ ಇರುತ್ತೆ. ಆ ಕಾಲಕ್ಕೆ ಲವ್, ಡೇಟಿಂಗ್, ರೋಮ್ಯಾನ್ಸ್ ಸ್ವಲ್ಪ ಮಟ್ಟಿಗೆ ಹೊರ ಜಗತ್ತಿಗೆ ಗೊತ್ತಾಗದಂತೆ ನಡೀತಾ ಇತ್ತು. ಆದ್ರೆ ಶಾಹಿದ್ ಕಪೂರ್ ಅನ್ನೊ ಫ್ಲರ್ಟ್‍ಕಿಂಗ್ ಕಾಲಿಟ್ಟಿದ್ದೆ ಬಾಲಿವುಡ್‍ನಲ್ಲೆಲ್ಲಾ ಖುಲ್ಲಂ ಖುಲ್ಲಾ ಶುರುವಾಗೋಯ್ತು.
ಕಲರ್-ಕಲರ್ ಹಕ್ಕಿಗಳಿಗೆ ಕಾಳ್ ಹಾಕೊಂಡು, ರೊಮ್ಯಾನ್ಸ್ ಮಾಡ್ಕೊಂಡು ಊರೆಲ್ಲಾ ಸುತ್ತಾಡೊದು ಕಾಮನ್ ಅನ್ನೋ ಜಾಯ್ಮಾನವನ್ನ ಕ್ರಿಯೇಟ್ ಮಾಡಿದ್ದೆ ಈ ಶಾಹಿದ್ ಕಪೂರ್. ಫ್ಲರ್ಟ್ ಕಿಂಗ್ ಅಂದ್ಮೇಲೆ ಕೇಳ್ಬೆಕಾ ಸ್ವಾಮಿ.. ಇವತ್ತು ಸುತ್ತಾಡಿದವಳ ಜೊತೆ ನಾಳೆ ಸುತ್ತಾಡ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ಈ ವಿಚಾರವಾಗಿ ಶಾಹಿದ್ ಬಾಲಿವುಡ್‍ನಲ್ಲಿ ಸಖತ್ ಸುದ್ದಿಯಾಗಿದಂತೂ ಅಪ್ಪಟ ಸತ್ಯ ಬಿಡಿ. ಹಾಗಾದ್ರೆ ಶಾಹಿದ್ ಬರೀ ಬಾಲಿವುಡ್ ಬೆಡಗಿರನ್ನ ಮಾತ್ರ ತನ್ ಬುಟ್ಟಿಗೆ ಹಾಕೊಕೊಂಡಿದ್ರಾ..? ಯಾರ್ಯಾರು ಇವನ ಬಲೆಗೆ ಸಿಗಾಕೊಂಡಿದ್ರು..? ಎಂಬೆಲ್ಲಾ ಪ್ರಶ್ನೆಗಳಿದ್ರೆ ಅದಕ್ಕೆ ಉತ್ರ ನಾವ್ ಕೊಡ್ತೀವಿ ನೋಡಿ. ಅಷ್ಟಕ್ಕೂ ಫ್ಲರ್ಟ್‍ಕಿಂಗ್ ಶಾಹಿದ್ ಕಪೂರ್ ಕೇವಲ ಸಿನಿಮಾ ನಟಿಯರಿಗೆ ಮಾತ್ರ ಚಳ್ಳೆ ಹಣ್ಣು ತಿನ್ಸಿರ್ಲಿಲ್ಲ.. ಬದ್ಲಾಗಿ ಓರ್ವ ಸ್ಟಾರ್ ಕ್ರಿಡಾಪಟುವಿಗೂ ಫ್ಲರ್ಟ್ ಮಾಡಿದ್ದಾನೆ ಎಂಬ ಸುದ್ದಿ ಈಗಲ್ಲ ಅನಾದಿ ಕಾಲದಿಂದ್ಲೂ ಇದೆ. ಅದ್ಯಾವ ಕ್ರಿಡಾಪಟು ಅಂತ ಕೇಳ್ತಿರಾ..?
ಈಕೆ ಭಾರತದ ನಂ.1 ಟೆನಿಸ್ ತಾರೆ. ಬಣ್ಣದ ಲೋಕದ ಯಾವ ಸುಂದ್ರಿಗೂ ಈಕೆ ಕಡಿಮೆ ಇರ್ಲಿಲ್ಲ ಬಿಡಿ. ಟೆನಿಸ್‍ನಲ್ಲಿ ತನ್ನದೇ ಆದ ಚಾಪು ಮೂಡಿಸಿದ್ದ ಈಕೆ ಯಾವ ಹೀರೋಗಳ ಕಾಳಿಗೂ ಬಿದ್ದಿರ್ಲಿಲ್ಲ. ತಾನಾಯ್ತು ತನ್ನ ಆಟವಾಯ್ತು ಅಂತ ಇದ್ದ ಆ ಟೈಮ್ನಲ್ಲಿ ಈಕೆಯ ಮನ ಕದ್ದವನು ಇದೇ ಶಾಹಿದ್ ಕಪೂರ್. ಈ ಫ್ಲರ್ಟ್‍ಕಿಂಗ್ ಮನಗೆದ್ದ ಚೆಲುವೆ ಬೇರ್ಯಾರು ಅಲ್ಲ ಟೆನಿಸ್ ತಾರೆ ಸಾನಿಯಾ ಮಿರ್ಜಾ..!
ಇದೇ 8ವರ್ಷಗಳ ಹಿಂದೆ ಕಪೂರ್ ಜೊತೆ ಸಾನಿಯಾ ಲವ್ವಿ ಡವ್ವಿ ಶುರು ಮಾಡ್ಕೊಂಡಿದ್ಲಂತೆ ಅನ್ನೋ ಗಾಸಿಫ್‍ಗಳು ಇವತ್ತಿಗೂ ಬಾಲಿವುಡ್‍ನಲ್ಲಿ ಹರಿದಾಡ್ತಿದೆ. ಆದ್ರೆ ಸಾನಿಯಾ ಮಾತ್ರ ಈ ಸತ್ಯವನ್ನು ಒಪ್ಪಿಕೊಳ್ಳೋಕೆ ತಯಾರಿಲ್ಲ. ಶಾಹಿದ್ ಹಾಗೂ ನಿಮ್ಮ ಜೊತೆಗಿನ ಒಡನಾಟದ ಬಗ್ಗೆ ಪ್ರಶ್ನೆ ಕೇಳಿದ್ರೆ ಸಾಕು, ಅದ್ರಿಂದ ಹೇಗಾದ್ರು ಮಾಡಿ ತಪ್ಪಿಸ್ಕೊಳ್ಳೋಕೆ ಪ್ಲಾನ್ ಮಾಡ್ತಾಳೆ ಸಾನಿಯಾ. ಇದಕ್ಕೆ ಸೂಕ್ತ ಉದಾಹರಣೆ ಹೇಳ್ಬೇಕು ಅಂದ್ರೆ ಇತ್ತೀಚಿಗೆ ಕಾಫಿ ವಿತ್ ಕರಣ್ ಶೋನಲ್ಲಿ ಕರಣ್ ಜೋಹರ್ ಸಾನಿಯಾರಿಂದ ಸತ್ಯ ಬಾಯ್ಬಿಡಿಸುವ ಪ್ರಯತ್ನ ಮಾಡಿದ್ರು ನೋಡಿ. ಎಂಟು ವರ್ಷಗಳ ಹಿಂದೆ ನಿಮಗೂ ಹಾಗೂ ಶಾಹಿದ್‍ರ ನಡುವೆ ಡೇಟಿಂಗ್ ನಡೆದಿತ್ತು ಅದು ನಿಜಾನಾ..? ಎಂದು ಪ್ರಶ್ನೆ ಕೇಳಿದ್ದ ಕರಣ್‍ಗೆ ಸಾನಿಯಾ ಇಲ್ಲ ಎನ್ನುವ ಬದಲಿಗೆ ಇದು ಎಂಟು ವರ್ಷಗಳ ಹಳೆಯದಾದ್ದರಿಂದ ನನಗೆ ಯಾವುದೂ ನೆನಪಿಗೆ ಬರ್ತಾ ಇಲ್ಲ ಎಂಬ ಉತ್ತರವನ್ನು ನೀಡಿದ್ದಾಳೆ. ಅಲ್ಲಿಗೆ ಸಾನಿಯಾ ಹಾಗೂ ಶಾಹಿದ್ ನಡುವೆ ನಿಜ್ವಾಗ್ಲೂ ಸಂಬಂಧ ಇತ್ತ ಇಲ್ವಾ..? ಅನ್ನೋದು ನೀವೆ ಕಲ್ಪನೆ ಮಾಡ್ಕೊಳ್ಳಿ. ಇನ್ನೂ ಮುಂದೆಕ್ಕೆ ಹೋದ ಕರಣ್ ಜೋಹರ್ ಶಾಹಿದ್ ಕಪೂರ್, ರಣವೀರ್ ಸಿಂಗ್, ರಣಬೀರ್ ಕಪೂರ್ ಈ ಮೂವರಲ್ಲಿ ಯಾರನ್ನು ಮದುವೆಯಾಗಲು, ಯಾರನ್ನು ಕೊಲ್ಲಲು, ಯಾರನ್ನು ಅಂಟಿಕೊಂಡಿರಲು ಇಷ್ಟಪಡುತ್ತೀರ ಎಂದು ಶೋನಲ್ಲಿ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ನಗುತ್ತಲೆ ಉತ್ತರ ಕೊಟ್ಟ ಸಾನಿಯಾ ರಣಬೀರ್‍ರನ್ನು ಮದ್ವೆಯಾಗಲೂ, ರಣವೀರ್ ಜೊತೆ ಅಂಟಿಕೊಂಡಿರಲು ಇಷ್ಟಪಡುತ್ತೇನೆ, ಕೊನೆಯದಾಗಿ ಶಾಹಿದ್ ಕಪೂರ್‍ರನ್ನು ಕೊಲ್ಲುತ್ತೇನೆ ಎನ್ನುವುದರ ಮೂಲಕ ಹಿಂದೆ ಡೇಟಿಂಗ್, ರೊಮ್ಯಾನ್ಸ್ ನಡೆದಿದ್ದು ಕೊನೆಗೆ ಬ್ರೇಕ್ ಅಪ್ ಆಗಿದೆ ಎಂದು ಇನ್‍ಡೈರೆಕ್ಟಾಗಿ ಹೇಳಿದ್ದಾರೆ.. ಒಟ್ನಲ್ಲಿ ಶಾಹಿದ್ ಟೆನಿಸ್ ತಾರೆನೂ ಬಿಟ್ಟಿಲ್ಲ ಅನ್ನೋದು ಸತ್ಯದ ಮಾತು..
- ಹಾಲೆಶ್ ಎಂ.ಎಸ್ ಹುಣಸನಹಳ್ಳಿ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಪ್ರಥಮ್- ರಿಷಿಕಾ ಲಾಂಗ್ ಡ್ರೈವ್ ವೇಳೆ ಸ್ಮಾಲ್ ಆಕ್ಸಿಡೆಂಟ್..! ಮುಂದೇನಾಯ್ತು..?
ಆಡಿದ್ದು 72 ಬಾಲ್ ಗಳಿಸಿದ್ದು 300 ರನ್..! ಲಾರಿ ಚಾಲಕನ ಮಗನ ಬ್ಯಾಟಿಂಗ್ ಕಮಾಲ್..
ಈ ನಟನ ಪ್ರತಿ ತಿಂಗಳ ಖರ್ಚು 13.5 ಕೋಟಿ ಅಂತೆ
ನನ್ನನ್ನು ಸಿಎಂ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಿದ್ರು: ಪನ್ನೀರ್ ಸೆಲ್ವಂನ ಹೊಸ ಬಾಂಬ್..!