ಗಂಡ ಸತ್ತರೂ ಅವನ ಮೇಲೆ "ವರದಕ್ಷಿಣೆ ಕಿರುಕುಳದ" ಆರೋಪ..! ಐಪಿಸಿ ಸೆಕ್ಷನ್ 498ಎ ಮಿಸ್ ಯೂಸ್ ಆಗ್ತಿದೆಯೇ..?

Date:

ಆತ್ಮಹತ್ಯೆ ಮಾಡಿಕೊಂಡ ಬಳಿಕ “ವರದಕ್ಷಿಣೆ ಕಿರುಕುಳ” ನೀಡಿದ್ದನೆಂದು ಪತ್ನಿಯಿಂದಲೇ ದೂರು ದಾಖಲು..!
ಮರಣಹೊಂದಿದ ಮೇಲೆ “ವರದಕ್ಷಿಣೆ ಕಿರುಕುಳ”ದ ದೂರು ದಾಖಲು..!

ಬಿ.ಟೆಕ್ ಮುಗಿಸಿದ್ದು ಐಐಟಿಯಲ್ಲಿ. ಮಾಸ್ಟರ್ ಆಫ್ ಫೈನಾಸಿಯಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದು “ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ಹಾಸ್ ಸ್ಕೂಲ್ ಆಫ್ ಬ್ಯುಸನೆಸ್ನಲ್ಲಿ…”! ಸಿಎಫ್ಎ( ಚಾರ್ಟೆಡ್ ಫೈನಾಸಿಯಲ್ ಅನಾಲಿಸ್ಟ್)..!
ಫೈನಾಸಿಯಲ್ ಸೇವೆ (ಹಣಕಾಸು ಸೇವೆ)ಯಲ್ಲಿ ಆರು ವರ್ಷದ ಅನುಭವ..! ಎಂಎಫ್ಇ( ಮಾಸ್ಟರ್ ಆಫ್ ಫೈನಾಸಿಯಲ್ ಇಂಜಿನಿಯರಿಂಗ್ನಲ್ಲಿ ನಾಲ್ಕು ವರ್ಷದ ಅನುಭವ..! ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 3ವರ್ಷದ ಅನುಭವ..!

ಕೌಶಲ ಅಥವಾ ಸ್ಕಿಲ್ :
ಉತ್ಪನ್ನಗಳಿಗೆ ಸಂಬಂಧಿಸಿದಂತೆ.., ಬೆಲೆ ಆಯ್ಕೆ ಮತ್ತು ಸಿದ್ಧಾಂತ..! ಸ್ಟಾಕೆಸ್ಟಿಕ್ ಕ್ರೆಡಿಟ್ ರಿಸ್ಕ್ ಮಾಡೆಲಿಂಗ್..! ದರಗಳು, ಕರೆನ್ಸಿಗಳು, ಸರಕು, ಸೂಚ್ಯಂಕಗಳು, ರಫ್ತು..! ಮ್ಯಾಟ್ರಿಕ್ಸ್ ಲೈಬ್ರೈರಿ..ಇವೇ ಮೊದಲಾದವುಗಳಲ್ಲಿ ವಿಶೇಷ ಪರಿಣಿತಿ ಮತ್ತು ಕೌಶಲ್ಯವಿದೆ..!
ಇಷ್ಟೆಲ್ಲಾ ಅರ್ಹತೆಗೆ ತಕ್ಕಂತೆ ತಿಂಗಳಿಗೆ ಎರಡು ಲಕ್ಷ ರೂಪಾಯಿ ಸಂಬಳವಿದೆ..!

ಪ್ರಸ್ತುತ ಸ್ಥಾನಮಾನ : ಆತ್ಮಹತ್ಯೆ ಮಾಡಿಕೊಂಡಿದ್ದಾರೆ..! ಈಗ ಈ ವ್ಯಕ್ತಿ ನಮಗೆ ಸಿಗಲಾರ..!
ಇಷ್ಟೆಲ್ಲಾ ಅರ್ಹತೆಯಿದ್ದೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ “ರಾಕೇಶ್ ಪಿಳನೈ”..! ಈ ವ್ಯಕ್ತಿ ಸೂಸೈಡ್ ಯಾಕ್ ಮಾಡ್ಕೊಂಡ ಅನ್ನೋದು ವಿಷಯವಲ್ಲ..! ವಿಷಯ ಏನಪ್ಪಾ ಅಂತ ಕೇಳಿದ್ರೆ ನೀವು ಅಚ್ಚರಿ ಪಡ್ತೀರಿ..! ಅದೇನಪ್ಪಾ ಅಂದ್ರೆ.., ಬದುಕಿರುವಾಗ ಇವನ ಮೇಲಿಲ್ಲದ “ವರದಕ್ಷಿಣೆ ಅಪವಾದ ಈಗ ಈ ಸತ್ತ ಮೇಲೆ ವ್ಯಕ್ತಿಯನ್ನು ಸುತ್ತಿಕೊಂಡಿದೆ..! ರಾಕೇಶರ ಮರಣ ನಂತರ ಅವರ ಹೆಂಡತಿಯೇ “ವರದಕ್ಷಿಣೆ ಕಿರುಕುಳ” ಕೊಡ್ತಾ ಇದ್ದರೆಂದು ಕೇಸ್ ದಾಖಲಿಸಿದ್ದಾರೆ..! ಈ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ…!

ಮೂವತ್ತು ವರ್ಷದ ರಾಕೇಶ್ ಪಿಳನೈ ಅಕ್ಟೋಬರ್ 05ರಂದು ಗುರ್ ಗಾಂವ್ ನ ಅಪ್ ಮಾರ್ಕೆಟ್ ನಲ್ಲಿನ ಅಪಾರ್ಟ್ ಮೆಂಟಿನ 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ..! ವಿಚಿತ್ರವೆಂದರೆ ಇವರ ಮರಣ ನಂತರ ಇವರ ಹೆಂಡತಿ ವರದಕ್ಷಿಣೆ ಕಿರುಕುಳ ನೀಡ್ತಾ ಇದ್ದಾರೆಂದು ಕಂಪ್ಲೆಂಟ್ ಕೊಟ್ಟಿದ್ದಾರೆ..! ಪೊಲೀಸರು ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ..!
ರಾಕೇಶ್ ಮತ್ತು ಅವರ ಕುಟುಂಬ ವರದಕ್ಷಿಣೆತಂದುಕೊಡೆಂದು ಕಿರು ಕುಳ ಕೊಡ್ತಾ ಇದ್ದಾರೆಂದು ರಾಕೇಶ್ ಹೆಂಡತಿ ದೂರು ನೀಡಿದ್ದಾರೆ..! ಇನ್ನೂ ಅಚ್ಚರಿ ಅಂದ್ರೆ ಗುರ್ ಗಾಂವ್ ಠಾಣೆಯಲ್ಲಿ ದೂರು ನೀಡೋ ಬದಲು ಆಕೆ ಅವಳ ತವರು ಪಟ್ಟಣ ಹಾಪುರ್ ಠಾಣೆಯಲ್ಲಿ ದೂರು ನೀಡಿದ್ದಾರೆ..! ರಾಕೇಶ್ ಮಾನಸಿಕ ಸ್ಥಿಮಿತತೆ ಕಳೆದು ಕೊಂಡಿದ್ದರು.., ಹತ್ತು ಲಕ್ಷ ವರದಕ್ಷಿಣೆಗಾಗಿ ಕಿರುಕುಳ ಕೊಡ್ತಾ ಇದ್ದರೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿಕೊಂಡಿದ್ದಾರಂತೆ..!
ಇದೇ ರಾಕೇಶ್ ಅವರ ಸಾವಿಗೆ ಕಾರಣಬವೆಂದು ಹೇಳಲು ಸಾಧ್ಯವಿಲ್ಲ..! ಯಾಕಂದ್ರೆ ಪೊಲೀಸರು ಎಫ್ಐಆರ್ ದಾಖಲಿಸುವ ಮೊದಲೇ ರಾಕೇಶ್ ಆತ್ಮಹತ್ಯೆ ಮಾಡಿಕೊಂಡಿದ್ದರು..! ಈ ಪ್ರಕರಣ ಬೇಧಿಸುವುದು ಪೊಲೀಸರಿಗೂ ತಲೆನೋವಾಗಿದೆ..! ಈ ಪ್ರಕಣದ ಸುತ್ತ ನಮಗೆ ಕಾಡೋ ಪ್ರಶ್ನೆಗಳೆಂದರೆ..
1. ರಾಕೇಶ್ ಒಳ್ಳೆಯ, ಶಿಕ್ಷಣ ಮತ್ತು ಕೆಲಸದ ದಾಖಲೆಯನ್ನು ಹೊಂದಿದ್ದರು..! ಅವರಲ್ಲಿ ವಿದೇಶದಲ್ಲಿ ಕೆಲಸ ಮಾಡಿದ ಅನುಭವವೂ ಇತ್ತು..! ಹೀಗಿರುವಾಗ ಅವರು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆಂದು ಹೇಗೆ ಹೇಳಲು ಸಾಧ್ಯ…?
2. ವರದಕ್ಷಿಣೆ ಕಿರುಕುಳದ ದೂರು ದಾಖಲಿಸಲು ರಾಕೇಶರ ಹೆಂಡತಿ ಅವರ ಸಾವಿನವರೆಗೂ ಏಕೆ ಕಾದಿದ್ದರು..!

3. ಒಂದು ವೇಳೆ ಎಲ್ಲರೂ ಹೇಳುವಂತೆ ರಾಕೇಶ್ ವರದಕ್ಷಿಣೆ ಕಿರುಕುಳದ ಕೇಸ್ ಅನ್ನು ಎದುರಿಸಬೇಕಾಗುತ್ತೆ ಅನ್ನೋ ಭಯದಲ್ಲೇ ಸೂಸೈಡ್ ಮಾಡಿಕೊಂಡಿದ್ದಾರೆಂದರೆ.. ಅವರ ಹೆಂಡತಿ ಯಾವ ರೀತಿ ಬ್ಲಾಕ್ಮೇಲ್ ಮಾಡಿರಬಹುದು..! ದೋಷಪೂರಿತವಾಗಿರೊ ಐಪಿಸಿ ಸೆಕ್ಷನ್ 498ಎ ಯಿಂದ ಬಹಳಷ್ಟು ಜನ ಗಂಡಂದಿರು ಸಾಯ್ತಾ ಇದ್ದಾರೆ..! ಪತ್ನಿಯ ಟಾರ್ಚರ್ ಇದ್ದರೂ ಎಷ್ಟೋಜನ ಗಂಡಸರು ಮತ್ತು ಅವರ ಕುಟುಂಬದವರು ಈ ಸೆಕ್ಷನ್ ದೆಸೆಯಿಂದ ಸಿಕ್ಕಾಪಟ್ಟೆ ನೋವನ್ನು ಅನುಭವಿಸ್ತಾ ಇದ್ದಾರೆ..! ಈ ಸೆಕ್ಷನ್ ಗೆ ತಿದ್ದುಪಡಿ ತರಲು ಇನ್ನೂ ಎಷ್ಟು ಜನ ಸಾಯಬೇಕೋ…! ಕೆಲವು ಹೆಂಗಸರು ಇದೇ ಸೆಕ್ಷನ್ ಅನ್ನು ಮಾನದಂಡವಾಗಿಸಿಕೊಂಡು ಗಂಡ ಮತ್ತು ಆತನ ಕುಟುಂಬಕ್ಕೆ ಬ್ಲಾಕ್ ಮೇಲ್ ಮಾಡ್ತಾ ಚಿತ್ರಹಿಂಸೆ ಕೊಡ್ತಾ ಇದ್ದಾರೆ..! ಇದಕ್ಕೆ ಕೊನೆಯೆಂದೋ..?
ಏನೇ ಆಗಲಿ ಕಾಮಿಡಿ ಅಂದ್ರೆ ವ್ಯಕ್ತಿಯ ಮರಣ ನಂತರ ವರದಕ್ಷಿಣೆ ಕಿರುಕುಳದ ದೂರು ದಾಖಲಾಗಿದ್ದು..!

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಆ ಸಿನಿಮಾ ರಿಲೀಸ್ ಆಗಿ ಇವತ್ತಿಗೆ 20 ವರ್ಷ..! ಇಪ್ಪತ್ತು ವರ್ಷದ ನಂತರ ಶಾರುಖ್-ಕಾಜೋಲ್ ಮಾತುಕತೆ..

ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!

ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..

ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!

ಇತಿಹಾಸದಲ್ಲಿ ಇಂತಹ ಕ್ರೂರ ಹೆಣ್ಣು ಎಲ್ಲೂ ಇಲ್ಲ..!

ಈ ನಮ್ಮ ಕನ್ನಡದ ಆಟೋಡ್ರೈವರ್ “ಪ್ರಾಮಾಣಿಕ” ಶ್ರೀಮಂತ..! ಕನ್ನಡದ ಈ ಆಟೋಡ್ರೈವರ್ ಗೊಂದು ದೊಡ್ಡ ಸಲಾಂ..!

ಸುಖ-ದುಃಖಗಳನ್ನು ಹಂಚಿಕೊಳ್ಳುವುದರಲ್ಲೇ ಸಂತೋಷವಿದೆ..! ಸಣ್ಣ ವೀಡಿಯೋ ಹೇಳುವ ದೊಡ್ಡ ಕಿವಿಮಾತು..!

`ಫೋರ್ಬ್ಸ್’ ನಿಯತಕಾಲಿಕೆ ಬಿಡುಗಡೆ ಮಾಡಿರೋ “ಯೂಟ್ಯೂಬ್” ಶ್ರೀಮಂತರು..!

ಹಸಿದವನಿಗೆ ಮಾತ್ರ ಗೊತ್ತು ಅನ್ನದ ಬೆಲೆ..! ಈ ವೀಡಿಯೋ ನೋಡಿದ್ರೆ ನೀವು ಖಂಡಿತಾ ಅನ್ನವನ್ನು ವೇಸ್ಟ್ ಮಾಡಲ್ಲ..!

ಚಿಕ್ಕ ಹುಡುಗ ಕಾಲಿಗೆ ಬಿದ್ರೂ ಚಿಲ್ಲರೆ ಕೊಡಲ್ಲ..! ಆದ್ರೆ ಹುಡುಗಿ ತಂದ ಖಾಲಿ ಡಬ್ಬಕ್ಕೆ ನೋಟ್ ಹಾಕ್ತಾರೆ..!

ಕನ್ನಡದ ಸ್ಟಾರ್ಸ್ ಅಂದ್ರೆ ಇವರಿಗೆ ಲೆಕ್ಕಕ್ಕೇ ಇಲ್ವಾ..? ಕರ್ನಾಟಕದಲ್ಲಿ ಬಿಸ್ನೆಸ್, ಕನ್ನಡದ ಸ್ಟಾರ್ಸ್ ಅಂದ್ರೆ ಕೇರ್ ಲೆಸ್..!

ಕರ್ನಾಟಕದ ಮೊಟ್ಟಮೊದಲ ಮಹಿಳಾ ಬಸ್ ಡ್ರೈವರ್ “ಪ್ರೇಮ”…! ಅಷ್ಟಕ್ಕೂ ಇವರು ಬಸ್ ಡ್ರೈವರ್ ಆಗಿದ್ದು ಯಾಕೆ ಗೊತ್ತಾ..?

ಈ ಕನ್ನಡದ ಹಾಡು ನಿಮ್ಮ ಮೈಜುಮ್ಮೆನಿಸುತ್ತೆ..! ಅನುಮಾನವೇ ಇಲ್ಲ..!

ನೀವು ವಾಟ್ಸಾಪ್ ಗ್ರೂಪ್ ಅಡ್ಮಿನ್ನಾ..? ನೀವು ಜೈಲಿಗೆ ಹೋದ್ರೂ ಹೋಗ್ಬೋದು..!

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...