ಬಡವರಿಗಾಗಿ ವಿಮಾನ ಖರೀದಿಸಿದ ನಿವೃತ್ತ ಇಂಜಿನಿಯರ್..! ವಿಮಾನ ಕೊಳ್ಳಲು ಭೂಮಿಯನ್ನೇ ಮಾರಿದರು..!

Date:

ನೀವೂ ಕೂಡ ಚಿಕ್ಕವರಿರುವಾಗ ವಿಮಾನದಲ್ಲಿ ಹಾರಾಡುವ ಕನಸನ್ನು ಕಂಡಿರುತ್ತೀರಿ..! ಈಗ ಆ ಕನಸು ನನಸಾಗಿರಬಹುದು.. ಅಥವಾ ಸಧ್ಯದಲ್ಲೇ ನನಸಾಗಲೂಬಹುದು..! ಆದರೆ ಪಟ್ಟಣವನ್ನೇ ಕಾಣದ ಬಡ ಮಕ್ಕಳ ಕನಸು..? ಆಕಾಶದಲ್ಲಿ ಹಾರುವ ವಿಮಾನವನ್ನು ನೋಡಿ ಹೇ..ವಿಮಾನ.. ವಿಮಾನ ಅಂತ ಕೂಗಾಡಿ ಸಂಭ್ರಮಿಸುವಾಗ ನಾವೂ ಕೂಡ ಆ ವಿಮಾನದಲ್ಲಿ ಹಾರಾಡಬೇಕೆಂಬ ಆಸೆ ಎಲ್ಲಾ ಮಕ್ಕಳಿಗೂ ಇರುತ್ತೆ..! ಮಕ್ಕಳ ಕನಸು ನನಸಾಗಬಹುದು..! ಆದರೆ ಐಷಾರಾಮಿ ಬಸ್ಸಿನಲ್ಲೇ ಕೂರಲಾಗದ ಬಡಮಕ್ಕಳ ವಿಮಾನ ಹತ್ತುವ ಕನಸು ನನಸಾಗುವುದು ದೂರದ ಮಾತು..! ಆ ದಿನಕ್ಕಾಗಿ ಅವರು ಕಾಯಲೇ ಬೇಕು..! ಕಷ್ಟಪಟ್ಟು ಹಣಗಳಿಸಿ. ಸಮಾಜದಲ್ಲಿ ಆ ಮಟ್ಟಕ್ಕೆ ಬೆಳೆಯಲೇಬೇಕು..! ಆಗ ಮಾತ್ರ ಆ ಮಕ್ಕಳ ಕನಸು ಮುಂದೊಂದು ದಿನ ನನಸಾಗಬಹುದು..! ಆಗದೇನೇ ಇರಬಹದು..!
ನಮ್ಮ ದೇಶದಲ್ಲಿ ಅದೆಷ್ಟೋ ಶ್ರೀಮಂತ ಹೃದಯಗಳು ಬಡವರಿಗಾಗಿ ಮಿಡಿಯುತ್ತಿವೆ..! ವಿಮಾನವನ್ನೇರುವ ಬಡಮಕ್ಕಳ ಕನಸನ್ನು ನನಸು ಮಾಡಿರುವ ನಿವೃತ್ತ ಇಂಜಿನಿಯರ್ “ಬಹದ್ದೂರ್ ಚಂದ್ ಗುಪ್ತ”..ಕೂಡ ಅಂತವರಲ್ಲಿ ಒಬ್ಬರು..!

“ಬಹದ್ದೂರ್ ಚಂದ್ ಗುಪ್ತ” ನಿವೃತ್ತ ಇಂಜಿನಿಯರ್. ಇವರು 2003ರಲ್ಲಿ ಸ್ಥಗಿತಗೊಂಡಿದ್ದ `ಏರ್ಬಸ್-300’ಅನ್ನು 6,00,000 ರೂಪಾಯಿಗಳನ್ನು ನೀಡಿ ಖರೀದಿಸಿದ್ದಾರೆ. ಈ ಏರ್ ಬಸ್ ಹಾರಾಡುವುದಿಲ್ಲ..! ಆದರೆ ಅದನ್ನೇರಿ ಬಡಮಕ್ಕಳು ಸಂಭ್ರಮಿಸಬಹುದು..! ಈ ವಿಮಾನವನ್ನು ದೆಹಲಿಯ ಹೊರವಲಯದಲ್ಲಿ ಪಾರ್ಕ್ ಮಾಡಿದ್ದಾರೆ.

ಎಂದೂ ವಿಮಾನವನ್ನು ನೋಡದ, ಹತ್ತದ, ಲೆಕ್ಕವಿಲ್ಲದಷ್ಟು ಅನಾಥ ಮಕ್ಕಳು, ನಾಗರಿಕರು ಈ ವಿಮಾನವನ್ನೇರಿ ಖುಷಿ ಪಡುತ್ತಿದ್ದಾರೆ. ಎಲ್ಲಾ ಪ್ರಯಾಣಿಕರಿಗೆ ಉಚಿತ ಊಟದ ವ್ಯವಸ್ಥೆಯೂ ಇದೆ..! ತರ್ತು ಸಂದರ್ಭದಲ್ಲಿ ವಿಮಾನದಿಂದ ಯಾವರೀತಿಯಾಗಿ ಹೊರ ಬರಬಹುದೆಂದು ಕೂಡ ಪ್ರಾಯೋಗಿಕ ರೀತಿಯಲ್ಲೇ ತೋರಿಸುತ್ತಾರೆ.! ಇದು ಮಕ್ಕಳಿಗಂತೂ ಜಾರುಬಂಡಿ ಆಡಿದಂತಹ ಅನುಭವವನ್ನು ಕೊಡುತ್ತೆ..!
ನಿವೃತ್ತ ಇಂಜಿನಿಯರ್ ಗುಪ್ತರವರು ಏರ್ ಲೈನ್ಸ್ ನಲ್ಲಿ ಕೆಲಸಮಾಡ್ತಾ ಇದ್ದವರು..! ಒಮ್ಮೆ ಇವರ ಹಳ್ಳಿಯ ಗೆಳೆಯರೆಲ್ಲಾ ನಮ್ಮನ್ನೂ ವಿಮಾನವನ್ನೇರಿಸೆಂದು ಬೇಡಿಕೆಯನ್ನಿತ್ತಿದ್ದರು..! ಪಾಪ, ಒಮ್ಮೆ ಬಡ ಸ್ನೇಹಿತರೊಬ್ಬರನ್ನು ಇವರು ವಿಮಾನ ಹತ್ತಿಸಿದಾಗ ಅಧಿಕಾರಿಗಳು ಹಿಡಿದು ಪ್ರಶ್ನಿಸಿದ್ದರಂತೆ..! ಆ ನಂತರ ಇವರು ತಮ್ಮ ಭೂಮಿಯನ್ನು ಮಾರಿ ಏರ್ ಬಸ್ ಕೊಂಡುಕೊಂಡಿದ್ದಾರೆ..! ಇದರಿಂದ ಎಷ್ಟೋ ಬಡವರಿಗೆ, ಅನಾಥರಿಗೆ ವಿಮಾನ ಏರುವ ಕನಸನ್ನು ನನಸು ಮಾಡಿದ್ದಾರೆ..! ಬಡವರಿಗಾಗಿ ವಿಮಾನ ಖರೀದಿಸಿರುವಂತಹ “ಬಹದ್ದೂರ್ ಚಂದ್ ಗುಪ್ತ” ಬಡವರ ಕನಸೊಂದರ ಸಾಕಾರಮೂರ್ತಿ..!

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ನಾಲ್ಕನೇ ತರಗತಿಯಲ್ಲೇ ಪ್ರೀತಿಸಿದ್ದ ಜೋಡಿಹಕ್ಕಿಗಳು..! ಇಂಥಾ ಲವ್ ಸ್ಟೋರಿಯನ್ನು ನೀವೆಲ್ಲೂ ಕೇಳಿಲ್ಲ..ನೋಡಿಲ್ಲ.. ಓದಿಲ್ಲ..!

ಮೊದಲ ಮಗುವಿಗೂ ಎರಡನೇ ಮಗುವಿಗೂ ಅಂತರ ಕೇವಲ ನಾಲ್ಕೇ ತಿಂಗಳು..!

ಅಜ್ಜ, ಅಜ್ಜಿ, ಜೀವಂತ ಶವದಂತಿರುವ ಮಗ..! ಕಲ್ಲು ಹೃದಯವನ್ನೂ ಕರುಗಿಸುವ ರಿಯಲ್ ಸ್ಟೋರಿ..!

ಆ ನಾಯಿಯಿಂದ ಅವನಿಗೆ ಅವನ ಹುಡುಗಿ ಸಿಕಿದ್ಲು..! ಈ ನಾಯಿ ಅದೆಂತಾ ಐನಾತಿ ಗೊತ್ತಾ..?

ಗಂಡ ಸತ್ತರೂ ಅವನ ಮೇಲೆ “ವರದಕ್ಷಿಣೆ ಕಿರುಕುಳದ” ಆರೋಪ..! ಐಪಿಸಿ ಸೆಕ್ಷನ್ 498ಎ ಮಿಸ್ ಯೂಸ್ ಆಗ್ತಿದೆಯೇ..?

ಆ ಸಿನಿಮಾ ರಿಲೀಸ್ ಆಗಿ ಇವತ್ತಿಗೆ 20 ವರ್ಷ..! ಇಪ್ಪತ್ತು ವರ್ಷದ ನಂತರ ಶಾರುಖ್-ಕಾಜೋಲ್ ಮಾತುಕತೆ..

ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!

ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..

ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!

ಇತಿಹಾಸದಲ್ಲಿ ಇಂತಹ ಕ್ರೂರ ಹೆಣ್ಣು ಎಲ್ಲೂ ಇಲ್ಲ..!

Share post:

Subscribe

spot_imgspot_img

Popular

More like this
Related

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...