ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿ ಬಳಗ ಬಹಳ ದೊಡ್ಡದು. ಇವರನ್ನು ಮಾತನಾಡಿಸಬೇಕು, ಜೊತೆಗೊಂದು ಫೋಟೋ ತೆಗೆಸಿಕೊಂಡು ಫೇಸ್‍ಬುಕ್ ಗೋಡೆಯಲ್ಲಿ ಅಂಟು ಹಾಕಿ ಒಂದಿಷ್ಟು ಲೈಕು, ಕಾಮೆಂಟ್ ನೋಡಿ ಖುಷಿ ಪಡೋದು ಪ್ರತಿಯೊಬ್ಬ ಅಭಿಮಾನಿಗೂ ಇಷ್ಟ.
ದರ್ಶನ್ ಮತ್ತು ಸುದೀಪ್ ಅಭಿಮಾನಿಗಳು ಅಂದ್ರೆ ಜನ ಸಾಮಾನ್ಯರು ಮಾತ್ರ ಇಲ್ಲ. ನಟ-ನಟಿಯರೂ ಕೂಡ ಈ ಲೀಸ್ಟ್ ನಲ್ಲಿ ಅಗ್ರಪಂಕ್ತಿಯಲ್ಲೇ ಇದ್ದಾರೆ. ಇವರುಗಳಲ್ಲಿ ನಟಿ ಅರ್ಚನಾ ಕೂಡ ಒಬ್ಬರು.
ಅರ್ಚನಾ ಅವರಿಗೆ ಸುದೀಪ್ ಮತ್ತು ದರ್ಶನ್ ಇಷ್ಟವಂತೆ. ಅಕಸ್ಮಾತ್ ದರ್ಶನ್ ಮತ್ತು ಸುದೀಪ್ ಜೊತೆ ಲಿಫ್ಟ್‍ನಲ್ಲಿ ಅರ್ಚನಾ ಸಿಕ್ಕಾಕಿ ಕೊಂಡ್ರೆ ಸುದೀಪ್ ಕೆನ್ನೆಗೆ ಮುತ್ತು ಕೊಡ್ತಾರಂತೆ..! ದರ್ಶನ್ ಅವರನ್ನು ತಬ್ಬಿಕೊಳ್ತಾರಂತೆ..!
ಅಕುಲ್ ಬಾಲಜಿ ನಡೆಸಿಕೊಡುವ ಸೂಪರ್ ಟಾಕ್ ಟೈಮ್ ನಲ್ಲಿ ಅರ್ಚನಾ ಅಕುಲ್ ಅವರು ಕೇಳಿದ ಪ್ರಶ್ನೆ ಒಂದಕ್ಕೆ ಹೀಗೆ ಉತ್ತರಿಸಿದ್ದಾರೆ.