ಯಾವಾಗಲೂ ನಮ್ಮ ಜೊತೆಯಲ್ಲೇ ಇರುತ್ತಿದ್ದ ಪ್ರೀತಿಪಾತ್ರರು ನಮ್ಮಿಂದ ದೂರಾದಾಗ ಅವರ ನೆನಪು ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ..! ನಿಮಗೂ ಅಂತಹದ್ದೇ ಅನುಭವ ಆಗಿರಬಹದು..!? ಅವರ ನೆನಪು ಎಷ್ಟೊಂದು ಗಟ್ಟಿಯಾಗಿ ನಮ್ಮ ಮನಸ್ಸಿನಲ್ಲಿ ಬೇರೂರಿಯತ್ತೆ ಅಂದ್ರೆ ಅವರು ನಮ್ಮೊಡನೆ ಇಲ್ಲದೇ ಇದ್ದರೂ ಜೊತೆಯಲ್ಲೇ ಇದ್ದಾರೇನೋ.. ಅನ್ನೋ ಭ್ರಮೆ ಇರುತ್ತೆ..! ಅವರ ನೆನಪಿನಲ್ಲೇ ಕಾಲಕಳೆಯುತ್ತೇವೆ..! ಅವರ ಸ್ಥಾನ ತುಂಬಲು ಯಾರಿಂದಲೂ ಸಾಧ್ಯ ಆಗಲ್ಲ..! ಯಾರೋ ಮಾಡಿದ ತಪ್ಪಿಗೆ ನಾವು ನಮ್ಮವರನ್ನು ಕಳೆದುಕೊಂಡು ಬಿಡ್ತೀವಿ..! ತಪ್ಪು ಮಾಡಿದವರಿಗೆ ಆ ನೋವು ಗೊತ್ತೇ ಆಗಲ್ಲ..ಆ ನೋವನ್ನು ಅನುಭವಿಸುವವರು ಪ್ರೀತಿ ಪಾತ್ರರನ್ನು ಕಳೆದುಕೊಂಡ ನಾವುಗಳು..!
ಇಲ್ಲೊಂದು ವೀಡೀಯೋ ಇದೆ ಮಿಸ್ ಮಾಡ್ದೇ ನೋಡಿ.. ಇಲ್ಲೊಬ್ಬ ಪುಟ್ಟ ಹುಡುಗು ಅಕ್ಕನ ನೆನಪಿನಲ್ಲಿದ್ದಾನೆ..! ಕಾರ್ ಡ್ರೈವಿಂಗ್ ಮಾಡ್ತಾ ಚ್ಯಾಟಿಂಗ್ ನಲ್ಲಿ ಬ್ಯುಸಿ ಆಗಿದ್ದ ಯಾವಳೋ ಒಬ್ಬಳು ಮಾಡಿದ ತಪ್ಪಿಗೆ ಈ ಹುಡುಗ ತನ್ನ ಅಕ್ಕನನ್ನು ಕಳೆದು ಕೊಂಡಿದ್ದಾನೆ..! ಅವಳು ಇಲ್ಲ ಅಂತ ಗೊತ್ತಿದ್ದರೂ… ಅವಳಿದ್ದಾಳೇ.. ಎಂಬ ಭ್ರಮೆ ಈ ಹುಡುಗನಿಗೆ..! ಅಕ್ಕನ ಜೊತೆ ಕಾಲಕಳೆದ ಆ ಸವಿಕ್ಷಣಗಳ ನೆನಪಲ್ಲೇ ಕಾಲ ಕಳೆಯುತ್ತಿದ್ದಾನೆ..! ಆತನ ಅಕ್ಕ ದೇವತೆ..! ಅವಳು ದೇವತೆ ಹೇಗಾದಳು ಗೊತ್ತಾ..? ಅಕ್ಕನ ನೆನಪು ಈ ಪುಟ್ಟ ತಮ್ಮನಿಗೆ ಎಷ್ಟೊಂದು ಕಾಡ್ತಾ ಇದೆ ಗೊತ್ತಾ..? ಆ ಹೋದ ಜೀವ ಮತ್ತೆ ಬರುವುದೇ..?! ಮನಮುಟ್ಟುವ ವೀಡಿಯೋ…ನೋಡಿ ತಿಳಿಯಬೇಕಾಗಿದ್ದು ಬಹಳಷ್ಟಿದೆ..
Video :