ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರು ಎಲ್ಲಂದ್ರಲ್ಲಿ ನಿದ್ರೆ ಮಾಡೋದ್ ಯಾರಿಗೂ ಗೊತ್ತಿಲ್ದೆ ಇರೋ ವಿಷ್ಯವಲ್ಲ. ನಮ್ ಸಿಎಂ ಅನೇಕ ಸಭೆ ಸಮಾರಂಭಗಳಲ್ಲಿ ವೇದಿಕೆ ಮೇಲೆ ನಿದ್ರೆಗೆ ಜಾರಿದ್ದಾರೆ. ಎಷ್ಟೋ ಸಲ ಇವ್ರು ಭಾಗಿಯಾದ ಕಾರ್ಯಕ್ರಮದಲ್ಲಿ ‘ನಿದ್ರೆ’ಯೇ ದೊಡ್ಡ ಸುದ್ದಿ ಆಗಿದ್ದಿದೆ. ಟ್ರೋಲ್‍ಪೇಜ್‍ಗಳಿಗಂತೂ ಸಿಎಂ ಸಾಹೆಬ್ರ ನಿದ್ರೆ ರುಚಿ ರುಚಿ ಆಹಾರ..!
ಹೀಗೆ ಎಲ್ಲಾಯ್ತಾ ಅಲ್ಲಿ ನಿದ್ರೆ ಮಾಡಿ ಟೀಕೆ ಮಾಡೋರ, ತಮಾಷೆ ಮಾಡೋರ ಬಾಯಿಗೆ ಆಹಾರವಾಗ್ತಿದ್ದ ಸಿದ್ದರಾಮಯ್ಯ ಅವ್ರು ಇತ್ತೀಚೆಗೆ ಸುಧಾರಿಸಿದಂತಿದೆ..! ಅಷ್ಟಾಗಿ ಯಾವ ಸಾರ್ವಜನಿಕ ಸಮಾರಂಭಗಳಲ್ಲಿ ನಿದ್ರೆಗೆ ಜಾರಿದಂತಿಲ್ಲ..! ಈ ನಿದ್ರೆ ಹಿಂದೆ ಇರೋ ಸತ್ಯವನ್ನ ಸ್ವತಃ ಸಿಎಂ ಅವ್ರೇ ಬಿಚ್ಚಿಟ್ಟಿದ್ದಾರೆ.
‘ವಿಜಯ ಕರ್ನಾಟಕ’ ದಿನಪತ್ರಿಕೆ ಹಮ್ಮಿಕೊಂಡಿದ್ದ ಸಂವಾದದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿಗಳು ತಮ್ಮ ನಿದ್ರೆ ಸಮಸ್ಯೆಗೆ ಕಾರಣ ಏನೂ ಅಂತ ಮುಕ್ತವಾಗಿ ಹಂಚಿಕೊಂಡಿದ್ದು, ವರದಿಯಾಗಿದೆ.
ಕಳೆದ ಹತ್ತು ವರ್ಷದಿಂದ ಸಿದ್ದರಾಮಯ್ಯ ಅವ್ರಿಗೆ ಆಮ್ಲಜನಕದ ಕೊರತೆ ಕಾಡ್ತಾ ಇತ್ತಂತೆ. ಎಷ್ಟೋ ಸಂದರ್ಭಗಳಲ್ಲಿ ಬಾಯಿ ಮೂಲಕ ಉಸಿರಾಟ ಆಗ್ತಿಂತೆ. ಅದಕ್ಕಾಗಿ ಎಲ್ಲಂದ್ರಲ್ಲಿ ನಿದ್ರೆ ಬರ್ತಿತ್ತು. ಸ್ಲೀಪ್ ಆಪ್ನಿಯಾ ಎಂಬ ಹೆಸರಿನ ಕಾಯಿಲೆಯಂತೆ ಅದು. ಈಗ ಅದ್ಕೆ ಮಾಸ್ಕ್ ಕೊಟ್ಟಿದ್ದಾರಂತೆ. ಹಾಗಾಗಿ ಸಮಸ್ಯೆ ದೂರಾಗಿದೆ ಅಂತ ಮುಖ್ಯಮಂತ್ರಿಗಳು ಹೇಳಿದ್ದಾರೆ.
ಅನೇಕ ಜನ್ರಿಗೆ ಇದೊಂದು ಪ್ರಶ್ನೆ ಕಾಡ್ತಾ ಇತ್ತೇನೋ..? ಸಿಎಂ ಅವ್ರು ಯಾಕ್ ಕಂಡ್ ಕಂಡಲ್ಲಿ ನಿದ್ರೆ ಮಾಡ್ತಾರೆ ಅಂತ. ಈಗ ಇದಕ್ಕೆ ಅವ್ರಿಂದಲೇ ಉತ್ತರ ಸಿಕ್ಕಿದೆ. ಈಗ ಸಿಎಂ ಅವ್ರೂ ಸಹ ಸಮಸ್ಯೆಯಿಂದ ಹೊರಬಂದಿದ್ದಾರೆ ಅನ್ನೋದು ಖುಷಿಯ ವಿಚಾರ.