ನೀವು ಇ-ಮೇಲ್ ಬಳಕೆ ಮಾಡೇ ಮಾಡ್ತೀರಿ..ಆದ್ದರಿಂದ ಇದನ್ನು ಓದಲೇ ಬೇಕು…!

0
53

ಬೋಸ್ಟನ್ : ಇವತ್ತು ಇ-ಮೇಲ್ ಬಳಕೆ ಮಾಡದೇ ಇರುವವರು ತೀರಾ ಕಡಿಮೆ ಮಂದಿ. ಅಧಿಕೃತ ಕೆಲಸಗಳು, ದಾಖಲೆ ವಿನಮಯ ಇತ್ಯಾದಿ ಇತ್ಯಾದಿಗಳಿಗೆ ಇ-ಮೇಲ್ ತೀರಾ ಅವಶ್ಯಕ. ನೀವು ಪತ್ರ ಕಳುಹಿಸಿಕೊಡಿ ಎಂದು ಹೇಳುತ್ತಿದ್ದ ಕಾಲ ಈಗಿಲ್ಲ. ಬದಲಾಗಿ ಇ-ಮೇಲ್ ಮಾಡಿ ಎನ್ನುವುದು ಸಾಮಾನ್ಯ. ನೀವೂ ಕೂಡ ಇ-ಮೇಲ್ ಬಳಕೆದಾರರಾಗಿದ್ದಲ್ಲಿ ಇದನ್ನು ಓದಿ…


ಎಚ್ಚರ..! ಹಾಗಂತ ಎಲ್ಲಾ ಇ-ಮೇಲ್ ಬಳಕೆದಾರರು ಗಾಬರಿ ಪಡಬೇಕಿಲ್ಲ. ಯಾಹೂ ಖಾತೆ ಹೊಂದಿರೋರು ಸ್ವಲ್ಪ ಯೋಚನೆ ಮಾಡಬೇಕು..! ಏಕೆಂದರೆ ಯಾಹೂ ಸೇವೆಯಲ್ಲಿದ್ದ ಎಲ್ಲಾ 3 ಶತಕೋಟಿ ಖಾತೆದಾರರ ಖಾಸಗಿ ಮಾಹಿತಿ ಕಳ್ಳತನವಾಗಿತ್ತು..!ಸ ಹೀಗಂತ ಸ್ವತಃ ಯಾಹೂ ಒಪ್ಪಿಕೊಂಡಿದೆ ಕೂಡ..! ಘಟನೆ ನಡೆದಿದ್ದು ನಿನ್ನೆ ಮೊನ್ನೆಯಲ್ಲ..! 2013ರಲ್ಲಿ.


2013 ಆಗಸ್ಟ್‍ನಲ್ಲಿ ಕಳವಾದ ಎಲ್ಲಾ ಖಾತೆಗಳಿಗೆ ಎಚ್ಚರಿಕೆ ಸಂದೇಶವನ್ನೂ ಕಳುಹಿಸಿರುವುದಾಗಿ ಯಾಹೂ ಕಂಪನಿ ಹೇಳಿಕೊಂಡಿದೆ..!


ಕಂಪನಿ ಈ ಹಿಂದೆ ಡಿಸೆಂಬರ್‍ನಲ್ಲಿ ಈ ವಿಷಯ ಬಹಿರಂಗಪಡಿಸಿ, 1ಸಾವಿರ ಶತಕೋಟಿ ಬಳಕೆದಾರರ ಮಾಹಿತಿ ಕಳವಾಗಿದೆ ಎಂದು ಹೇಳಿತ್ತು. ಇದೀಗ ಅಷ್ಟೂ ಬಳಕೆದಾರರ ಮಾಹಿತಿ ಕಳ್ಳತನವಾಗಿದೆ ಎಂದು ಹೇಳಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here