ಬಿಗ್‍ಬಾಸ್ ವಿನ್ನರ್ ಒಳ್ಳೆಯ ಹುಡುಗ ಪ್ರಥಮ್ ಹಾಗೂ ರನ್ನರ್ ಅಪ್ ಕಿರಿಕ್ ಕೀರ್ತಿ (ಕೀರ್ತಿ ಶಂಕರಘಟ್ಟ) ಸಖತ್ ಸ್ಟೆಪ್ ಹಾಕಿದ್ದಾರೆ. ಹಾಡು ಕೂಡ ಸಖತ್ ಆಗಿದೆ.. ಇವರ ಸ್ಟೆಪ್ ಕೂಡ ಸೂಪರ್..! ಇವ್ರಿಬ್ರೇ ಅಲ್ಲ ನಿರ್ದೇಶಕ ಓಂ ಪ್ರಕಾಶ್ ರಾವ್, ಇಂದ್ರಜಿತ್ ಲಂಕೇಶ್ ಕೂಡ ಹೆಜ್ಜೆ ಹಾಕಿದ್ದಾರೆ..!
ನರೇಶ್ ನಿರ್ದೇಶನದ ಗುರುನಂದನ್ ಅಭಿನಯದ ‘ರಾಜು ಕನ್ನಡ ಮೀಡಿಯಂ’ ಚಿತ್ರದ ‘ಸೀದಾಸಾದ ಇದ್ದ ಹಳ್ಳಿ ಹೈದ..’ಎಂಬ ಹಾಡಿಗೆ ಇವ್ರುಗಳು ಸ್ಟೆಪ್ ಹಾಕಿದ್ದಾರೆ.
ಈ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅತಿಥಿಪಾತ್ರ ಮಾಡ್ತಿರೋದು ಸಖತ್ ಸುದ್ದಿ ಮಾಡಿತ್ತು. ಈಗ ಸೀದಾಸಾದಾ ಹಾಡನ್ನು ಯೂಟ್ಯೂಬ್‍ನಲ್ಲಿ ಬಿಟ್ಟಿರುವ ಚಿತ್ರತಂಡ ಸಿನಿಪ್ರಿಯರ ನಿರೀಕ್ಷೆಯನ್ನ ಹೆಚ್ಚಿಸಿದೆ. ಸೀದಾಸಾದ ಹಾಡಲ್ಲಿ ಕಿರಿಕ್ ಕೀರ್ತಿ ಮತ್ತು ಪ್ರಥಮ್ ಹೆಂಗ್ ಕುಣಿದಿದ್ದಾರೆ ಗೊತ್ತಾ..?! ಅದನ್ನ ಹೇಳೋಕಾಗುತ್ತಾ..? ನೀವು ನೋಡ್ಲೇ ಬೇಕು..!