ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ಅಷ್ಟೇ ಅಲ್ಲದೆ ವಿರೋಧಿಗಳು ಸಹ ಇರೋದು ಗೊತ್ತಿರುವ ವಿಷಯವೇ..! ಆದರೆ, ಇವರನ್ನು ಮದುವೆಯಾಗಬೇಕು ಎಂದು ಹಠ ಹಿಡಿದ ಮಹಿಳೆಯ ಬಗ್ಗೆ ಗೊತ್ತೇ?
`ನನಗೆ ಮೋದಿಯನ್ನು ಭೇಟಿಯಾಗಲು ನನಗೆ ಬಿಡುವುದಿಲ್ಲ..! ಅವ್ರೂ ಕೂಡ ನನ್ನಂತೇ ಒಂಟಿಯಾಗಿದ್ದಾರೆ..! ಅವರಿಗೆ ಸಹಾಯ ಬೇಕಿದೆ. ಅದಕ್ಕಾಗಿ ನಾನು ಅವರನ್ನು ಮದುವೆಯಾಗಬೇಕು’’ಎಂದು ಓರ್ವ ಮಹಿಳೆ ಧರಣಿ ನಡೆಸುತ್ತಿದ್ದಾರೆ..!
ಮೋದಿ ವಿವಾಹಿತರಾಗಿದ್ದರೂ ಸಾಂಸರಿಕ ಜೀವನಕ್ಕಿಂತ ಹೆಚ್ಚಾಗಿ ದೇಶದ ಜನ ನೀಡಿರುವ ಜವಬ್ದಾರಿಯನ್ನು ನಿಭಾಯಿಸಲು ತಮ್ಮ ಅಷ್ಟೂ ಸಮಯವನ್ನು ಮೀಸಲಿಟ್ಟಿದ್ದಾರೆ. ಹೀಗಿದ್ದರೂ ಮೋದಿಯನ್ನು ಮದುವೆಯಾಗಬೇಕು ಎಂದು ಹಠ ಹಿಡಿದಿರುವ ಈ ಮಹಿಳೆ ದೆಹಲಿಯ ಜಂತರ್ ಮಂತರ್‍ನಲ್ಲಿ ಕಳೆದ 1 ತಿಂಗಳಿಂದ ಧರಣಿ ಕುಳಿತಿದ್ದಾರೆ..!
ರಾಜಸ್ಥಾನ ಮೂಲದ ಓಂ ಶಾಂತಿ ಶರ್ಮಾ ಎಂಬ 40 ವರ್ಷದ ವಿಚ್ಛೇದಿತ ಮಹಿಳೆ ಮೋದಿಯ ಪತ್ನಿಯಾಗಬೇಕು ಎಂದು ಪ್ರತಿಭಟನೆ ನಡೆಸುತ್ತಿರುವವರು.
ಈಕೆಯೇ ಹೇಳಿಕೊಂಡಿರುವಂತೆ ಇವರಿಗೆ ಹಿಂದೆ ಮದುವೆಯಾಗಿತ್ತು. ಆ ಸಂಬಂಧಗಟ್ಟಿಯಾಗಿ ಉಳಿದಿಲ್ಲ..! ಈಗ ಒಂಟಿಯಾಗಿದ್ದಾರಂತೆ. ಸಿಕ್ಕಾಪಟ್ಟೆ ಮದುವೆ ಪ್ರಸ್ತಾಪಗಳು ಬಂದ್ರೂ ಇವರು ರಿಜೆಕ್ಟ್ ಮಾಡಿದ್ದಾರಂತೆ..! ಇದೀಗ ನರೇಂದ್ರ ಮೋದಿ ಅವರನ್ನು ಮದುವೆ ಆಗಬೇಕು ಎಂದು ಸೆಪ್ಟೆಂಬರ್ 8ರಿಂದ ಧರಣಿ ನಡೆಸುತ್ತಿದ್ದಾರೆ..!
ಜಂತರ್ ಮಂತರ್‍ನ ಸಾರ್ವಜನಿಕ ಶೌಚಾಲಯ ಬಳಸುತ್ತಿದ್ದಾರೆ. ಗುರುದ್ವಾರ ಹಾಗೂ ದೇವಸ್ಥಾನಗಳಲ್ಲಿ ಊಟ ಮಾಡುತ್ತಿದ್ದಾರೆ.
ಈಕೆ ಮೊದಲ ಪತಿಯಿಂದ ಪಡೆದ 20 ವರ್ಷ ಮಗಳೂ ಕೂಡ ಇದ್ದಾಳೆ..! ಅವರ ಭವಿಷ್ಯದ ಬಗ್ಗೆ ಸ್ವಲ್ಪೂ ಚಿಂತೆ ಇಲ್ಲವಂತೆ..! ಜೈಪುರದಲ್ಲಿ ಇವರಿಗೆ ಸಿಕ್ಕಾಪಟ್ಟೆ ಭೂಮಿ ಇದೆಯಂತೆ…! ಬೇಕಾದಷ್ಟು ದುಡ್ಡು ಕೂಡ ಇದೆಯಂತೆ..! ಸ್ವಲ್ಪ ಜಮೀನನ್ನು ಮಾರಿ ಪ್ರಧಾನಿ ನರೇಂದ್ರ ಮೋದಿಯರಿಗೆ ಉಡುಗೊರೆ ಕೊಡಬೇಕೆಂದು ಕೊಂಡಿದ್ದಾರಂತೆ..! ಮದುವೆ ಇವರನ್ನು ಭೇಟಿ ಆಗುವ ತನಕ ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ ಎಂದು ಶಪತ ಮಾಡಿಬಿಟ್ಟಿದ್ದಾರೆ ಈಕೆ.