ಬೆಂಗಳೂರು : ಎಲ್‍ಪಿಜಿ ಹಾಗೂ ದಿನಸಿ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಮಾಡಿದ್ದು ಓಕೆ..! ಆದ್ರೆ, ವ್ಯಂಗ್ಯ ಮಾಡಲು ಹೋಗಿ ತೊಂದರೆಗೆ ಸಿಲುಕಿದ್ದು.. ಬೇಸರದ ಸಂಗತಿ..!
ನಗರದ ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ ಯುವಕಾಂಗ್ರೆಸ್ ಅಧ್ಯಕ್ಷ ರಘುವೀರ ಗೌಡ ನೇತೃತ್ವದದಲ್ಲಿ ಪ್ರತಿಭಟನೆ ಮಾಡಿದ್ರು ಯುವ ಕಾಂಗ್ರೆಸ್ ಕಾರ್ಯಕರ್ತರು. ಆದ್ರೆ, ಮಾಡ್ತಾ ಮಾಡ್ತಾ ಗ್ಯಾಸ್ ಏರಿಕೆ ಬಗ್ಗೆ ವ್ಯಂಗ್ಯ ಮಾಡಲು ರಸ್ತೆ ಮಧ್ಯೆ ಅಡುಗೆ ಮಾಡೋಕೆ ಅಂತ ಕಟ್ಟಿಗೆ ಒಲೆ ಮಾಡ್ಕೊಂಡು ಬೆಂಕಿ ಹಚ್ಚಿದ್ರು. ಈ ವೇಳೆ ಸುಮಂತಾ ಎಂಬುವವರ ಬಟ್ಟೆಗೆ ಬೆಂಕಿ ತಗುಲಿ ಮುಖಕ್ಕೆ ಗಂಭೀರ ಗಾಯಗಳಾಗಿವೆ.
ಇಷ್ಟಾದ್ರು ಪ್ರತಿಭಟನೆ ನಿಲ್ಲಿಸಲಿಲ್ಲ. ಸ್ಥಳದಲ್ಲಿ ಗಲಿಬಿಲಿ ಉಂಟಾಯ್ತು. ವರದಿಗಾಗರಿಗೆ ಕೆಲಸಕ್ಕೆ ಅಡ್ಡಿಪಡಿಸಿದ್ರು. ಜೊತೆಗೆ ಕ್ಯಾಮರವನ್ನು ಒಡೆಯಲು ಮುಂದಾದ್ರು.
ಪ್ರತಿಭಟನೆ ಮಾಡ್ಲಿ, ಮಾಡೋದ್ ಬೇಡ ಅಂತ ಯಾರೂ ಹೇಳಲ್ಲ.. ಅತಿರೇಖಕ್ಕೆ ಹೋದ್ರೆ ಹಿಂಗೆ ಕಷ್ಟ ಆಗೋದ್. ಸುಮಂತಾ ಅವ್ರು ಬೇಗ ಗುಣಮುಖಲಾಗ್ಲಿ ಅಂತ ಹಾರೈಸೋಣ.