ರೀ.. ವಿದ್ಯಾರ್ಥಿನಿಯರು ಹಿಡಿದಿದ್ದು ಕೇಸರಿ ಧ್ವಜ…ಐಸಿಸ್ ಧ್ವಜ ಅಲ್ಲ..!

Date:

ಕಾಲೇಜ್ ಸ್ಟೂಡೆಂಟ್ಸ್ ಅವ್ರ ಪಾಡಿಗ್ ಅವ್ರು ಇರುವಾಗ ಅನಗತ್ಯವಾಗಿ ವಿವಾದಕ್ಕೆ ಸಿಲುಕಿಸಿ ತಮ್ಮ ಬೇಳೆ ಬೇಯ್ಸಿಕೊಳ್ಳೋ ಮಂದಿಗೇನು ಇಲ್ಲಿ ಕಡಿಮೆ ಇಲ್ಲ..! ಕಾಲೇಜುಗಳಲ್ಲಿ ನಡೆಯುವ ಸಾಂಸ್ಕೃತಿಕ ‌ಕಾರ್ಯಕ್ರಮಗಳ ಟೈಮಲ್ಲಿ ಮಾಡೋ ನೃತ್ಯ, ನಾಟಕಗಳಾಗಿರ್ಬೋದು ಯಾವುದ್ರಲ್ಲೂ ಸಾಮಾನ್ಯವಾಗಿ ವಿದ್ಯಾರ್ಥಿಗಳು ಉದ್ದೇಶಪೂರ್ವಕವಾಗಿ ಒಂದ್ ಧರ್ಮಕ್ಕೆ ಜೋತುಬಿದ್ದವರಂತೆ ಬಿಂಬಿಸಿಕೊಳ್ಳೋದಾಗ್ಲಿ ಅಥವಾ ಇನ್ನೊಂದು ಧರ್ಮ-ಸಂಸ್ಕೃತಿಯನ್ನು ವಿರೋಧ ಮಾಡೋದಾಗ್ಲಿ ದೇವ್ರಾಣೆಗೂ ಮಾಡಲ್ಲ ಕಣ್ರಿ..! ಆ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ಎಲ್ರೂ ಒಟ್ಟಾಗಿ ಕುಣಿದು ಕುಪ್ಪಳಿಸಿರ್ತಾರೆ..! ಹೀಗಿರುವಾಗ ಮಾಡಕ್ಕೆ ಕ್ಯಾಮೆ ಇಲ್ದೆ ಇರೋ ಕಮಂಗಿಗಳು ಅದಕ್ಕೆ ಧರ್ಮದ ಬಣ್ಣ ಕಟ್ಟಿ ಮೈ ಮೇಲೆ ದೈವ ಮೆತ್ಕೊಂಡೋರ್ ಥರಾ ಆಡ್ತಾರೆ..! ಈ ಎಡಬಿಡಂಗಿಗಳಿಂದ ಕಾಲೇಜಿನ ವಾತಾವರಣ, ವಿದ್ಯಾರ್ಥಿಗಳ ನಡುವಿನ ಸೌಹಾರ್ಧತೆ ಹಾಳಾಗುತ್ತೆ ಬಿಟ್ರೆ ಅವ್ರರ್ಯಾರಪ್ಪನ ಗಂಟು ಕಳ್ದೊಗಲ್ಲ..!
ಇಷ್ಟೆಲ್ಲ ಪೀಠಿಕೆ ಹಾಕೋಕೆ ಕಾರಣ ಮೊನ್ನೆ ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀಮತಿ ಇಂದಿರಾಗಾಂಧಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ಸಾಂಸ್ಕೃತಿಕ ‌ಕಾರ್ಯಕ್ರಮದ ಕುರಿತು ಪ್ರಯೋಜನವಿಲ್ದೆ ಹುಟ್ಟುಹಾಕಿರೋ ವಿವಾದ..!
ಈ ಕಾಲೇಜಲ್ಲಿ ಮೊನ್ನೆ ಕ್ರೀಡಾ, ಸಾಂಸ್ಕøತಿಕ, ಎನ್‍ಸಿಸಿ, ಎನ್‍ಎಸ್‍ಎಸ್ ಮತ್ತಿತರ ಚಟುವಟಿಕಗಳ ಉದ್ಘಾಟನಾ ಸಮಾರಂಭದ ಬಳಿಕ ನಡೆದ ಸಾಂಸ್ಕೃತಿಕ ‌ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಕೇಸರಿ ಶಾಲು ಧರಿಸಿ ಕೇಸರಿ ಬಾವುಟ ಬೀಸುತ್ತ ಡ್ಯಾನ್ಸ್ ಮಾಡಿದ್ದನ್ನೇ ದೊಡ್ಡ ಭಯೋತ್ಪಾದನಾ ಚಟುವಟಿಕೆ ನಡೆದಿದೆ ಎಂಬಂತೆ ಮಾಡಕ್ಕೆ ಕೆಲಸ ಇಲ್ದೆ ಇರೋ ಜನ್ರು ತರ್ಲೆ ತೆಗೆದಿದ್ದಾರೆ..!
ವಿದ್ಯಾರ್ಥಿನಿಯರು ಕೇಸರಿ ಶಾಲುಧರಿಸಿ, ಬಾವುಟ ಹಿಡಿದು ಡ್ಯಾನ್ಸ್ ಮಾಡಿದ್ದನ್ನ, ಕೇವಲ ಆ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ ಎಂದು ಸಾಂಸ್ಕೃತಿಕ ‌ ದೃಷ್ಠಿಕೋನದಲ್ಲಿ, ಮನಸ್ಥಿತಿಯಲ್ಲಿ ನೋಡುವ ಬದಲು ಅದಕ್ಕೆ ಹಿಂದುತ್ವದ ಬಣ್ಣ ಬಳೀತಾ ಇರೋದ್ ಯಾವ್ ಪುರುಷಾರ್ಥಕ್ಕೆ ಅಂತ ಮಾತ್ರ ಗೊತ್ತಾಗ್ತಿಲ್ಲ..!
ಕಾಲೇಜನಲ್ಲಿ ಹಿಂದುತ್ವ ಸಂಚಲ ಮೂಡಿಸಿದ್ದಾರೆ ಅಂತ ವಿವಾದ ಸೃಷ್ಠಿಸುತ್ತಿರೋರ್ ಒಂದ್ ಅರ್ಥಮಾಡಿಕೊಳ್ಳಬೇಕು.. ಅಲ್ಲಿ ಹುಡುಗಿಯರು ಡ್ಯಾನ್ಸ್ ಮಾಡಿದ್ದನ್ನು ಯಾವನೂ ವಿರೋಧಿಸಿರ್ಲಿಲ್ಲ..! ಎಲ್ಲಾ ಸ್ಟೂಡೆಂಟ್ಸ್ ಚಪ್ಪಾಳೆ ತಟ್ಟಿದ್ದಾರೆ..! ಯಾಕಂದ್ರೆ ಅವ್ರಲ್ಲಿ ಧರ್ಮ, ಹಿಂದುತ್ವ, ಉಗ್ರವಾದ ಯಾವ ಕಲ್ಪನೆಗಳೂ ಆ ಕ್ಷಣದಲ್ಲಿ ಇರ್ಲಿಲ್ಲ..! ಅದನ್ನ ಕೇವಲ ಸಾಂಸ್ಕೃತಿಕ ‌ ಕಾರ್ಯಕ್ರಮ ಅಂತ ಪರಿಗಣಿಸಿ ಎಲ್ಲಾ ಸ್ಟೂಡೆಂಟ್ಸ್ ಕೂಡ ಸ್ವಾಗತಿಸಿದ್ದಾರೆ..!
ಈಗ ಇದಕ್ಕೆ ಧರ್ಮ ಲೇಪಿಸುತ್ತಾ ಇರೋರ್ ಮಾಡಕ್ಕೆ ಬೇರೆ ಏನಾದ್ರು ಕೆಲ್ಸ ಇದ್ರೆ ಮಾಡಿ, ಇಲ್ಲ ಅಂತಾದ್ರೆ ತೆಪ್ಪಗೆ ಇದ್ದು ಬಿಡಿ..! ಕಾಲೇಜು ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡ್ಬೇಡಿ..!
ಓಕೆ, ಅಷ್ಟಕ್ಕೂ ಕೇಸರಿ ಧ್ವಜ ಹಿಡಿದು ಡ್ಯಾನ್ಸ್ ಮಾಡಿರದಲ್ಲಿ ತಪ್ಪೇನಿದೆ..!? ಕೇಸರಿ ಧೈರ್ಯ, ಪರಿತ್ಯಾಗ, ದೇಶದ ಒಳಿತಿಗಾಗಿ ನಡೆಯುವ ಬಲಿದಾನಗಳ ಸಂಕೇತ..! ಅದನ್ನು ಬೇರೆ ರೀತಿಯಲ್ಲಿ ನಿರೂಪಿಸುವ ಕೆಟ್ಟ ನಡೆ ಯಾಕ್ ಬೇಕು?
ಶಿವಾಜಿ ಚಿತ್ರ ಇರೋ ಕೇಸರಿ ಧ್ವಜ ಹಿಡಿಯೋ ಬದಲು ಯಾವನೋ ಒಬ್ಬ ಉಗ್ರನ ಚಿತ್ರ ಇರೋ ಐಸಿಸ್ ಧ್ವಜ ಹಿಡ್ಕೊಂಡು ಕುಣಿದಿದ್ರೆ ನೀವು ಪಾಪಾ ಆ ವಿದ್ಯಾರ್ಥಿನಿಯರಿಗೆ ಸ್ಟಾರ್‍ಪಟ್ಟ ಕಟ್ಟಿಕೊಡ್ತಿದ್ರೇನೋ ಅಲ್ವಾ? ನಾಚಿಕೆ ಆಗ್ಬೇಕು…ಕಾಲೇಜು, ಸ್ಟೂಡೆಂಟ್ಸ್ ನ ಅನಗತ್ಯವಾಗಿ ಇಂತಹ ವಿವಾದಗಳಿಗೆ ಸಿಲುಕಿಸೋಕೆ..!
ಕಾಲೇಜು-ವಿಶ್ವವಿದ್ಯಾನಿಲಯಗಳಲ್ಲಿ ದೇಶದ್ರೋಹಿ ಚಟುವಟಿಕೆಗಳನ್ನು ನಡೆಸೋರನ್ನ ಬದುಕುಕೊಟ್ಟ ನಾಡಿನ ವಿರುದ್ಧವೇ ಘೋಷಣೆ ಕೂಗುವವರನ್ನು ರಾತ್ರೋ ಬೆಳಗಾಗುವದರಲ್ಲಿ ಹೀರೋ ಮಾಡ್ತೀರ..? ಯಾವುದೇ ತಪ್ಪು ಮಾಡದೇ ಒಂದು ಡ್ಯಾನ್ಸ್‍ಲ್ಲಿ ಕೇಸರಿ ಧ್ವಜ ಹಿಡಿದವರು ಭಯೋತ್ಪಾದಕ ಕೃತ್ಯ ಎಸಗಿದ್ದಾರೆ ಎನ್ನುವಂತೆ ಹಾರಡೋ ನಿಮ್‍ಗಳ ಜನ್ಮಕ್ಕೆ ಬೆಂಕಿಹಾಕ..ಅಂತ ಹೇಳೋದ್ ಬಿಟ್ರೆ ಮತ್ತೇನ್ ಹೇಳೋಕೆ ಸಾಧ್ಯ ಆಗುತ್ತೆ..!
ಹೀಗೆ ವಿವಾದ ಸೃಷ್ಠಿಸುವುದರಿಂದ ವಿದ್ಯಾರ್ಥಿನಿಯರು ಅವ್ರ ಪೋಷಕರಲ್ಲಿ ಎಂಥಾ ಆತಂಕ ಮೂಡಿದೆ ಅಂತ ಏನಾದ್ರು ಗೊತ್ತಾ..? ಸ್ಟೂಡೆಂಟ್ಸ್‍ನ ದಯವಿಟ್ಟು ಸ್ಟೂಡೆಂಟ್ಸ್ ಆಗಿರೋಕೆ ಬಿಡಿ..!

  • ಶಶಿಧರ್ ಎಸ್ ದೋಣಿಹಕ್ಲು

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...