ಕರ್ನಾಟಕದಲ್ಲಿ ಕನ್ನಡ ಮಾತಾಡ್ರೋ ಅಂತ ಬಡ್ಕೋಬೇಕು. ಕನ್ನಡ ಬಂದ್ರೂ ಕನ್ನಡ ಮಾತಾಡದ ಪರಭಾಷಾ ಪ್ರಿಯರು ಸಿಕ್ಕಾಪಟ್ಟೆ ಇದ್ದಾರೆ..! ಬೇರೆ ಭಾಷೆ ಬರುತ್ತೆ ಅಂತ ತೋರಿಸಿಕೊಳ್ಳೋ ಹಪಹಪಿಲೀ ಮಾತೃಭಾಷೆ ಕನ್ನಡನ್ನ ಬಳಸೋದೇ ಇಲ್ಲ..! ತಮ್ ಮಕ್ಕಳು ಕನ್ನಡದ ಅ, ಆ, ಇ, ಈ ಕಲೀದೇ ಇದ್ರೂ ಪರವಾಗಿಲ್ಲ, ಇಂಗ್ಷಿಷ್ ಕಲೀಲೇ ಬೇಕು..! ಅನ್ನೋ ಪೋಷಕರು..! ಕನ್ನಡ ಕನ್ನಡ ಕನ್ನಡ ಎಂಬ ಕೂಗು ಹೆಚ್ಚಾಗಿ ಪ್ರತಿಧ್ವನಿಸುವುದು ಬಹುಶಃ ನವೆಂಬರಲ್ಲೇ ಇರ್ಬೇಕು..! ಇನ್ನೇನು ನವೆಂಬರ್ ಕನ್ನಡಿಗರು ಹೆಚ್ಚಾಗೋ ಟೈಮ್ ಕೂಡ ಬಂದಿದೆ..! ಬಂದೇ ಬಿಡ್ತು ನವೆಂಬರ್..!
ಈಗ ವಿಷ್ಯಾ ಅದಲ್ಲ.. ಕನ್ನಡಿಗರು ಹೆಮ್ಮೆ ಪಡುವ ಸುದ್ದಿಯೊಂದಿದೆ ಓದಿ..
ಆಸ್ಟ್ರೇಲಿಯಾದ ಶಾಲೆಗಳಲ್ಲಿ ಇನ್ನು ಕನ್ನಡ ಪಾಠ ಶುರುವಾಗುತ್ತೆ..!
ಮೇಲ್ಬೋರ್ನ್ ನ ಸರ್ಕಾರಿ ಶಾಲೆಯ 12ನೇ ಕ್ಲಾಸ್ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಎರಡನೇ ಭಾಷೆಯಾಗಿ ತೆಗೆದುಕೊಳ್ಳೋ ಅವಕಾಶವನ್ನು ಅಲ್ಲಿನ ವಿಕ್ಟೋರಿಯಾ ಸರ್ಕಾರ ತಿಳಿಸಿದ್ದು, ಇನ್ನು ಆಸ್ಟ್ರೇಲಿಯಾದಲ್ಲೂ ಕನ್ನಡ ಸದ್ದು ಮಾಡುತ್ತೆ..! ಮೇಲ್ಬೋರ್ನ್ ಕನ್ನಡ ಸಂಘದ ಮನವಿಗೆ ಸ್ಪಂದಿಸಿ ಕನ್ನಡವನ್ನು ಸೆಕೆಂಡ್ ಲಾಂಗ್ವೇಜಾಗಿ ಪಠ್ಯಕ್ಕೆ ಅಳವಡಿಸಿದ್ದಕ್ಕೆ ಅಲ್ಲಿನ ಸರ್ಕಾರಕ್ಕೆ ಧನ್ಯವಾದ ಹೇಳೋಣ.. ನಾವು ಹೆಮ್ಮೆಯಿಂದ ಹೇಳಿಕೊಳ್ಳೋಣ.. ನಾವು ಹೆಮ್ಮೆಯ ಕನ್ನಡಿಗರು ಅಂತ.