ದೀಪಿಕಾ ಪಡುಕೋಣೆ… ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿರೋ ನಟಿ..! ಯಾವುದೇ ಪಾತ್ರವಿರ್ಲಿ ಜೀವತುಂಬುವಂತ ಅಭಿನಯ ಚತುರೆ. ಸ್ಯಾಂಡಲ್ ವುಡ್ ನಿಂದ ಹಾಲಿವುಡ್ ವರೆಗೂ ತನ್ನ ಛಾಪು ಮೂಡಿಸಿರುವ ಜನಪ್ರಿಯ ನಟಿ. ಇವರೂ ಕೂಡ ಒಂದ್ ಕಾಲದಲ್ಲಿ ಖಿನ್ನತೆಗೆ ಜಾರಿದ್ರಂತೆ…! ಇದನ್ನ ನಂಬೋಕೆ ಕಷ್ಟವಾದ್ರೂ ಕೂಡ ನೀವು ನಂಬ್ಲೇಬೇಕು…!
ಹೌದು, ನಿನ್ನೆ ದಾವಣಗೆರೆಯ ಪಲ್ಲಾಗಟ್ಟೆ , ಬಿಳಿಚೋಡು ಗ್ರಾಮಕ್ಕೆ ಖಿನ್ನತೆ ಕುರಿತು ಜಾಗೃತಿ ಮೂಡಿಸಲು ದಿಢೀರ್ ಭೇಟಿ ನೀಡಿದ್ದರು. ಈ ವೇಳೆ ಅವರು ತಾವೂ ಕೂಡ ಹಿಂದೆ ಖಿನ್ನತೆಗೆ ಒಳಗಾಗಿದ್ದನ್ನು ಹೇಳಿಕೊಂಡಿದ್ದಾರೆ..!
ಮೂರು ವರ್ಷಗಳ ಹಿಂದೆ ಮುಂಬೈನಲ್ಲಿ ವಿಚಿತ್ರ ಮನೋವೇದನೆ ಅನುಭವಿಸಿದೆ..! ಕೆಲವು ದಿನ ಯಾರಿಗೂ ನಾನು ಮುಖ ತೋರಿಸಿರ್ಲಿಲ್ಲ…! ಶೂಟಿಂಗ್ ಗೆ ಕೂಡ ಭಾಗವಹಿಸಿರ್ಲಿಲ್ಲ…! ಆಮೇಲೆ ವೈದ್ಯರನ್ನು ಸಂಪರ್ಕಿಸಿದಾಗ ಖಿನ್ನತೆಗೆ ಒಳಗಾಗಿದ್ದೇನೆ ಅಂತ ತಿಳೀತು…! ಚಿಕಿತ್ಸೆ ಪಡೆದು ಅದರಿಂದ ಹೊರಬಂದೆ..ಎಂದ ಅವರು ಜನರೊಡನೆ ಸಂವಾದ ನಡೆಸಿ ದೈರ್ಯ ತುಂಬಿದ್ರು..!