ಹುಷಾರ್ ಇಂಥಾ ಪುಣ್ಯಾತ್ಗಿತ್ತೀರು ಇರ್ತಾರೆ….!!!

Date:

ಅವರಿಬ್ರು‌ ಚಡ್ಡಿ‌ದೋಸ್ತಿಗಳು…! ಇಬ್ರೂ ಅಕ್ಕಪಕ್ಕದ ಊರ್ವರಾದ್ರೂ ಪರಿಚಯವಾಗಿದ್ದು ಡಿಗ್ರಿ ಮಾಡುವಾಗ..! ಒಬ್ಬ ಬಿಕಾಂ, ಇನ್ನೊಬ್ಬ ಬಿಎ.. ಆದರೂ ತುಂಬಾ ಆತ್ಮೀಯ ಗೆಳೆಯರಾಗಿದ್ರು..ಕಾಲೇಜಿನಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳು‌ ನಡೆದಾಗಲೆಲ್ಲಾ ಇವರಿಬ್ಬರದ್ದೇ ಉಸಾಬರಿ…!
ಕಲ್ಚರಲ್ ಡಿಪಾರ್ಟ್ಮೆಂಟ್ ಹೊಣೆಗಾರಿಕೆಯನ್ನು‌ ಬಿಕಾಂ ಹುಡ್ಗೂರು ತಗೊಂಡ್ರೆ ಅದರ ಮುಂದಾಳತ್ವ ಯಾವಾಗ್ಲೂ‌ ಅನಿಲ್ ನದ್ದೇ ಆಗಿರ್ತಿತ್ತು..ಅನಿಲ್ ಅಂದ್ರೆ ಅಲ್ಲಿ ಅನಿರುದ್ಧ್ ಕೂಡ‌ ಇದ್ದೇ ಇರ್ತಿದ್ದ…! ಬಿಎ ಅವ್ರು‌ ಏನೇ‌ ಜವಬ್ದಾರಿವಹಿಸಿಕೊಂಡ್ರೂ ಅದರ ನಾಯಕತ್ವ ಅನಿರುದ್ಧ್ ದಾಗಿರುತ್ತಿತ್ತು..! ಅನಿರುದ್ಧ್ ಇದ್ದಲ್ಲಿ ಗೆಳೆಯ ಅನಿಲ್‌ಕೂಡ‌ ಇದ್ದೇ ಇರ್ತಿದ್ದ…!!!
ಹೀಗೆ ಬೇರೆ ಬೇರೆ‌ ಕಾಂಬಿನೇಷನ್ ಆಗಿದ್ರೂ‌ , ಎರಡೂ‌ ಡಿಪಾರ್ಟ್ಮೆಂಟ್ ಅವ್ರು‌‌ ಕಿತ್ತಾಡ್ಕೊಂಡ್ರೂ ಅನಿಲ್, ಅನಿರುದ್ಧ್ ಮಾತ್ರ ಯಾವತ್ತೂ ಒಬ್ಬರನೊಬ್ಬರು‌ ಬಿಟ್ಟುಕೊಟ್ಟಿರ್ಲಿಲ್ಲ…!
ಯುಜಿ ಮುಗಿಯಿತು, ಮುಂದೇನು ಎನ್ನುವ ಪ್ರಶ್ನೆ‌ ಎಲ್ಲರಂತೆ ಇವರನ್ನು ಕಾಡಿತು.. ಆಗ ಇಬ್ಬರ ಆಯ್ಕೆ ‘ನೀನಾಸಂ’ ಆಗಿತ್ತು…!
ಆದರೆ, ಅದೇನಾಯ್ತೋ ಗೊತ್ತಿಲ್ಲ‌ ರಿಸೆಲ್ಟ್ ಬಂದ‌ಕೂಡ್ಲೇ ನಿನಾಸಂ ಯೋಚ್ನೆ‌ ಬಿಟ್ಟಾಕಿ ಜರ್ನಲಿಸಂನಲ್ಲಿ ಮಾಸ್ಟರ್ ಡಿಗ್ರಿ‌ ಮಾಡಲು ಡಿಸೈಡ್ ಮಾಡಿದ್ರು..!! ಸರಿ, ಶಂಕರಘಟ್ಟದಲ್ಲಿನ ಕುವೆಂಪು ಯೂನಿವರ್ಸಿಟಿ ಕಡೆಗೆ‌ ಶೃಂಗೇರಿ ಯಿಂದ ಪಯಣ ಬೆಳೆಸಿದ್ರು..!
ಎಂಟ್ರೆನ್ಸ್ ಎಕ್ಸಾಮ್ ಬರೆದ್ರು,‌ ಸೀಟು ಸಿಗ್ತು… ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಶುರುವಾಯ್ತು..
ಅನಿಲ್ , ಅನಿರುದ್ಧ್ ಗೆ‌ ಹೊಸ ಗೆಳೆಯರು ಕೂಡ ಸಿಕ್ಕಿದ್ರು. ಒಂದೊಳ್ಳೆ ಬ್ಯಾಚ್ ಇವರದ್ದಾಗಿತ್ತು. ಹೆಚ್ಚು ಕಡಮೆ ಐದಾರು ತಿಂಗಳು ಇವರೆಲ್ಲಾ ಒಟ್ಟಿಗೆ ಇದ್ರು.. ಆದರೆ, ಬರು ಬರುತ್ತಾ ಮಾಲಿನಿ ಎಂಬ ಹುಡುಗಿಯ ಜೊತೆ ಅನಿರುದ್ಧ್ ಕ್ಲೋಸ್ ಆದ. ಅವನಿಗೆ ಅವಳೇ ಪ್ರಪಂಚಬಾಗಿದ್ಲು..ಆದರೆ, ಅನಿಲ್ ಸಂಗಡದಿಂದ ಅನಿರುದ್ಧ್ ದೂರವಿರಲಿಲ್ಲ. ಅದ್ಯಾಕೋ ಗೊತ್ತಿಲ್ಲ ಮಾಲಿನಿ ಅನಿರುದ್ಧ್ ಅನಿಲ್ ನ ಬಿಟ್ಟು ದೂರವಿರಬೇಕು ಎಂದು ಹಠ ಹಿಡಿದ್ಲು. ಅದು ಅನಿರುದ್ಧ್ ಗೆ ಕಷ್ಟವಾದ್ರು, ಅವಳೆದುರು ಅನಿಲ್ ನಿಂದ ದೂರವಿರುವಂತೆಯೇ ಇದ್ದ. ಅನಿಲ್ ಗೆ ಅನಿರುದ್ಧನ ನಡೆ ಅಷ್ಟೊಂದು ಹಿಡಿಸದೇ‌ ಇದ್ರು ಸುಧಾರಿಸಿಕೊಂಡಿದ್ದ.
ಕೆಲವು ದಿನಗಳ‌ ಬಳಿಕ ಮಾಲಿನಿ ತನ್ನೊಡನೆಯಿದ್ದ ಆರತಿಗೆ ಸಲಿಂಗಿ ಪಟ್ಟ ಕಟ್ಟಿ ದೂರಾಮಾಡಿಕೊಂಡಳು. ಮಾಲಿನಿ ನೀ ತಪ್ಪು ಮಾಡ್ತಾ ಇದ್ದೀಯ ಆರತಿಯನ್ನೇಕೆ ಸುಖ ಸುಮ್ಮನೇ ದೂರಮಾಡ್ತೀಯ ಎಂದು ಅನಿರುದ್ಧ್ ಕೇಳಿದ್ರೆ, ಅದಕ್ಕೂ ಕೋಪಿಸಿಕೊಂಡಳು..! ಅನಿರುದ್ಧ್ ಸುಮ್ಮನಾದ…! ಮಾಲಿನಿ‌ದೆಸೆಯಿಂದ ಆರತಿ ಜೊತೆ ಇವನೂ ಕೂಡ ಮಾತನಾಡುವುದನ್ನು ಬಿಟ್ಟ…!
ಮೊದಲ ಸೆಮಿಸ್ಟರ್ ನಲ್ಲಿ ಅನಿರುದ್ಧ್ ಕ್ಲಾಸ್ ಗೆ ಟಾಪರ್ ಆದ. ಮಾಲಿನಿ ಹತ್ತೋ ಹನ್ನೆರಡನೇ ಸ್ಥಾನದಲ್ಲಿದ್ದಳು…! ರಿಸಲ್ಟ್ ಬಂದ ಬಳಿಕ ಮಾಲಿನಿ ಮತ್ತಷ್ಟು ಅನಿರುದ್ಧ್ ಗೆ‌ ಹತ್ತಿರವಾದ್ಲು..! ಅವಳ ಮನೆ ಬಾಗಿಲು‌ ಕೂಡ ಅನಿರುದ್ಧ್ ಗೆ ಮುಕ್ತವಾಗಿ ತೆರೆಯಿತು..! ಒಳ್ಳೆಯ ಫ್ರೆಂಡ್ ಅಂತ ಅನಿರುದ್ಧ್ ಕೂಡ ಅವಳು ಹೇಳಿದಂತೆಲ್ಲಾ ಕುಣಿದ..! ಅವಳ ಅಸೈನ್ಮೆಂಟ್, ಸೆಮಿನರ್ ಪೇಪರ್ ಎಲ್ಲವನ್ನೂ ಅನಿರುದ್ಧೇ ರೆಡಿ‌‌ಮಾಡಿಕೊಡ್ತಿದ್ದ..! ಸೆಮಿನರ್ ಪ್ರಸೆಂಟ್ ಮಾಡುವಾಗ ಯಾರಾದರೂ ಅವಳಿಗೆ ಕ್ವಷನ್ ಕೇಳಿದಾಗ, ಅವಳು ತಡವರಿಸಿದಾಗ ಅದಕ್ಕೆ ಹೇಗೋ ಹಾಗೋ ತೇಪೆ‌ ಹಚ್ಚಿ ಆನ್ಸರ್ ಮಾಡ್ತಿದ್ದ ಅನಿರುದ್ಧ್.
ಮೊದಲ‌ ವರ್ಷದ ಪಿಜಿ ಮುಗಿಯಿತು. ಎರಡನೇ ವರ್ಷಕ್ಕೆ ಕಾಲಿಟ್ಟರು.
ಆಗ ಅನಿತಾ ಎಂಬ ಜೂನಿಯರ್ ಮಾಲಿನಿಗೆ ಆತ್ಮೀಯಳಾದ್ಲು. ಅನಿರುದ್ಧ್ ಗೂ ಸಹಜವಾಗಿ ಮಾಲಿನಿಯಿಂದ ಅನಿತಾ ಕ್ಲೋಸ್ ಆದ್ಲು..! ಪಾಪ, ತುಂಬಾ ಒಳ್ಳೆಯ ಹುಡುಗಿ ಅನಿತಾ…ಆರತಿಗೆ ಸಲಿಂಗಿ ಪಟ್ಟ ಕಟ್ಟಿ ದೂರಮಾಡಿದ್ದ ಮಾಲಿನಿ ಜೂನಿಯರ್ ಅನಿತಾಗೆ ಕಳ್ಳಿ ಪಟ್ಟ ಕಟ್ಟಿ ಸಂಬಂಧವನ್ನು ಕಡಿದುಕೊಂಡ್ಲು…! ಆಗಲೂ ಅನಿರುದ್ಧ್ ಗೆ ಅಸಹಾಯಕನಂತೆ ತೆಪ್ಪಗಿದ್ದ.
ಇದಾಗಿ ಕೆಲವು ದಿನಗಳ‌ ನಂತರ ಮಾಲಿನಿ ತನ್ನ ದೊಡ್ಡಮ್ಮನ ಮಗನೆಂದು ಹಿಂದೊಮ್ಮೆ ಪರಿಚಯಿಸಿಕೊಟ್ಟಿದ್ದ ಸಾತ್ವಿಕ್ ಅನಿರುದ್ಧ್ ಗೆ ಕಾಲ್ ಮಾಡ್ದ…! ಅನಿರುದ್ಧ್ ದಯವಿಟ್ಟು ಈ ಕೂಡಲೇ ಮಾಲಿನಿ ಮನೆಗೆ ಹೋಗಿ, ಅವಳು ಸಾಯ್ತೀನಿ ಅಂತ ಕೈ ಕೊಯ್ದುಕೊಂಡಿದ್ದಾಳೆ ಎಂದ…! ಶಿವಮೊಗ್ಗ ಕ್ಕೆ ಹೋಗಿದ್ದ ಅನಿರುದ್ಧ್ ಆಗಷ್ಟೇ ಶಂಕರಘಟ್ಟದಲ್ಲಿ ಬಸ್ ಇಳಿದು…ತನ್ನ ರೂಂ ಗೆ ಹೋಗುವ ಬದಲು ಸೀದ ಆಟೋ‌ ಏರಿ ಮಾಲಿನಿ ಮನೆಗೆ ಹೋದ..!‌ಮನೆಯಲ್ಲಿ ಅವಳೊಬ್ಬಳೇ ಇದ್ದಳು..! ಮುಸು ಮುಸು ಅಂತ ಕುಳಿತಿದ್ಲು..! ಏನಾಯ್ತೇ ನಿಂಗೆ?‌ಅಂತ ಕೇಳ್ದ ಅನಿರುದ್ಧ್ …ಅಳ್ತಾ ಅಳ್ತಾ ಕತೆ ಹೇಳಿದ್ಲು..! ಸಾತ್ವಿಕ್ ಮತ್ತು ನಂದು ಲವ್ ಇತ್ತು..!‌ಅವನು ನಮ್ಮ ದೊಡ್ಡಮ್ಮನ ಮಗ ಅಂತ‌ ನಿಂಗೆ ಸುಳ್ಳು ಹೇಳಿದ್ದೆ..! ಈಗ ಅದ್ಯಾಕೋ ಅವನು ನಂಗೆ ಇಷ್ಟವಿಲ್ಲ..! ಫೋನ್ ಮಾಡಿ ತಲೆ ತಿನ್ತಾನೆ..ಅದಕ್ಕೆ ತೊಡೆ ಕೊಯ್ಕೊಂಡು ಕೈ ಗೆ ಬ್ಲಡ್ ಹಚ್ಕೊಂಡು ಅವನಿಗೆ‌ ಫೋಟೋ‌ ತೆಗೆದು ಕಳಿಹಿಸಿದೆ ಅಂದ್ಲು..!‌ ಅನಿರುದ್ದ್ ಸುಮ್ಮನಾದ.. ಇವಳು ಕ್ಲೋಸ್ ಆಗಿ ಕೇವಲ 10 ತಿಂಗಳೊಳಗೆ ಇವಳ ಜೊತೆ ಕ್ಲೋಸ್ ಇದ್ದ ಮೂರನೇ ವ್ಯಕ್ತಿಯೂ‌ ದೂರಾಗಿದ್ದ..! ಆಗಲೇ ಅನಿರುದ್ಧ್ ಗೆ ಅನಿಸಿತ್ತು.. ಇವಳು ನನ್ನ ಜೊತೆಯೂ‌ ಬಹುದೂರ ಸಾಗಲ್ಲ ಅಂತ..!
ಮೂರನೇ ಸೆಮಿಸ್ಟರ್ ಮುಗಿದು ಆಗತಾನೆ ನಾಲ್ಕನೇ ಸೆಮಿಸ್ಟರ್ ತರಗತಿಗಳು‌ ಶುರುವಾಗಿದ್ವು..! ಮೊದಲ ಸೆಮಿಸ್ಟರ್ ಲಿ ಟಾಪರ್ ಆಗಿದ್ದ ಅನಿರುದ್ಧ ಮತ್ತೆರಡು ಸೆಮಿಸ್ಟರ್ ಗಳಲ್ಲೂ ಕಡಿಮೆ ಅಂಕ ಗಳಿಸಿದ್ದ …ಮಾಲಿನಿ ಟಾಪರ್ ಆಗಿದ್ಲು…ಅಷ್ಟಾದರೂ ಒಟ್ಟಾರೆ ಮೂರು ಸೆಮಿಸ್ಟರ್ ಅಂಕಗಳನ್ನು ಸೇರಿಸಿದ್ರೆ ಅನಿರುದ್ಧ್ ನದ್ದು ಮಾಲಿನಿಗಿಂತ ಹೆಚ್ಚಿನ ಅಂಕ ಇತ್ತು…! ಅನಿರುದ್ಧ್ ಮೊದಲ‌ ಸೆಮಿಸ್ಟರ್ ಲಿ ಮಾತ್ರ ಟಾಪರ್ ಆಗಿದ್ರೂ ಟೋಟಲ್ ಮಾರ್ಕ್ಸ್ ಅವನದ್ದೇ‌ ಹೈಯಸ್ಟ್.. ನಾಲ್ಕನೆ ಸೆಮಿಸ್ಟರ್ ನಲ್ಲಿ ನಾನು ಅವನಿಗಿಂತ 14 ಅಂಕ ಜಾಸ್ತಿ ತೆಗೆದ್ರೆ ಮಾತ್ರ ಟಾಪರ್ ಆಗೋದು…! ಅವನಿಗಿಂತ ಅಷ್ಟೊಂದು ಮಾರ್ಕ್ಸ್‌ ಜಾಸ್ತಿ ತೆಗೆಯೋದು ಸ್ವಲ್ಪ ಕಷ್ಟವೇ ಎಂದುಕೊಂಡಿದ್ದ ಮಾಲಿನಿ ಫಸ್ಟ್ ರ್ಯಾಂಕಿಗಾಗಿ ತಲೆಕೆಡಿಸಿಕೊಂಡ್ಲು..! ಆದರೆ, ಈಗಲೇ ಅವನಿಂದ ದೂರ ಆದ್ರೆ ಉಪಯೋಗವಿಲ್ಲ..ಅಸೈನ್ಮೆಂಟ್, ‌ಸೆಮಿಮರ್ ಕಷ್ಟ ಆಗುತ್ತೆ..ಅದರಲ್ಲಿ ಅವನು‌ ಜಾಸ್ತಿ ತೆಗೆದು ಆರಾಮ್ಸೆ ಫಸ್ಟ್ ರ್ಯಾಂಕ್ ಪಡೀತಾನೆ ಅಂತ ಅಂದುಕೊಂಡ ಮಾಲೀನಿ ನಗುನಗುತಾ ಕತ್ತಿ ಮಸೆಯಲಾರಂಭಿಸಿದ್ಲು…! ಸೆಮಿಮರ್, ಅಸೈನ್ಮೆಂಟ್ ಎಲ್ಲಾ‌ ಮುಗಿಯಿತು…. ಅದೇ ಸಮಯಕ್ಕೆ ಅನಿರುದ್ಧ್ ನ ಗೆಳೆಯ ಅನಿಲ್ ಗೆ ಹುಷಾರಿಲ್ದೆ‌ ಹೋಯ್ತು…ಆಗ ಅನಿರುದ್ಧ್ ಒಂದು ದಿನ ಬ್ರೆಡ್ ತಗೊಂಡು, ರೂಂ ನಲ್ಲಿ ಹಾಲು ಕಾಯಿಸಿಕೊಂಡು ಹಾಸ್ಟೆಲ್ ಗೆ ಹೋದ…! ಅದನ್ನು ತಿಳಿದ ಮಾಲೀನಿ ಜಗಳ ಕಾಯ್ದಳು..! ಗುಲಾಮನಂತೆ ಕೆಲ್ಸ ಮಾಡಿಕೊಡ್ತೀಯ ಅಂದ್ಲು…!‌ಮಾಲಿನಿ‌ ವಿಚಾರದಲ್ಲಿ ಆದಷ್ಟು ತಾಳ್ಮೆಯಿಂದಲೇ ಇರ್ತಿದ್ದ ಅನಿರುದ್ಧ ಅವತ್ತು ಕೆಂಡಮಂಡಲನಾದ..! ಅವತ್ತಿಂದ ಮಾಲಿನಿ ಅನಿರುದ್ಧ್ ನಡುವಿನ ಜಗಳ ದೊಡ್ಡದಾಗ್ತಾ ಹೋಯ್ತು..! ಒಂದು ದಿನ ಮಾಲಿನಿ ಮಾತಾಡುವುದನ್ನು ಬಿಟ್ಟಳು. ಅನಿರುದ್ಧ್ ಗೆ ಬೇಜಾರಾದ್ರು ಯಾರತ್ರವೂ ಎಂದೂ ಮಾಲಿನಿ ಬಗ್ಗೆ ಕೆಟ್ಟದಾಗಿ ಮಾತಾಡ್ಲಿಲ್ಲ.. ಆದರೆ, ಮಾಲಿನಿ ಅನಿಲ್ ಸೇರಿದಂತೆ ತರಗತಿಯಲ್ಲಿನ ಬಹುತೇಕರ ಬಳಿ ಅಬಿರುದ್ಧ್ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತಾಡಿದ್ಲು..! ಅಷ್ಟೇ ಅಲ್ಲ ಅನಿಲ್ ಗೆ ನಾನು ನಿನ್ನ ಜೊತೆ ಇಷ್ಟು ದಿವಸ ಮಾತಾಡ್ದೆ ಇರೋಕೆ ಕಾರಣವೂ ಅನಿರುದ್ಧ್ ಎಂದು ನಂಬಿಸಿದ್ಲು.. ಅವಳ ವ್ಯವಸ್ಥಿತ ಸಂಚು ಸಕ್ಸಸ್ ಆಯ್ತು..! ಪ್ರತಿಯೊಬ್ಬರೂ ಅನಿರುದ್ಧ್ ನ ದ್ವೇಷಿಸಲಾರಂಭಿಸಿದ್ರು..! ಅನಿರುದ್ಧ್ ಕುಗ್ಗಿದ..!ಅನಿಲ್ ಜೊತೆಯೂ ದೊಡ್ಡ ಜಗಳವಾಯ್ತು. ಅನಿರುದ್ಧ್ ಹೇಳುವಷ್ಟು ಹೇಳಿ ಮೌನಕ್ಕೆ ಶರಣಾದ..! ಕೊನೆಯ ಸೆಮಿಸ್ಟರ್ ಎಕ್ಸಾಮ್ ಕೂಡ ಮುಗಿಯಿತು. ರಿಸೆಲ್ಟ್ ಬಂತು ಅನಿರುದ್ಧ್ ತುಂಬಾನೇ ಕಡಿಮೆ ಅಂಕಗಳಿಸಿದ.. ಫಸ್ಟ್ ರ್ಯಾಂಕ್ ತಪ್ಪೋಯ್ತು..
ಮಾರ್ಕ್ಸ್ ಕಾರ್ಡ್ ತಗೊಂಡು ಬರೋಕೆ ಅನಿರುದ್ಧ್ ಹೋದಾಗ ಕ್ಲರ್ಕ್ ಕೂಡ ಹೇಳಿದ್ರು’ ನಿಮ್ಮ ತಪ್ಪಿನಿಂದ, ನೀವು ಮತ್ತೊಬ್ಬರಿಗಾಗಿ‌ ಕಾಲ ಕಳೆದಿದ್ರಿಂದ ಫಸ್ಟ್ ರ್ಯಾಂಕ್ ತಪ್ಪೋಯ್ತಲ್ಲ’ ಅಂತ..! ಆಗಲೇ ಅನಿರುದ್ಧ್ ಗೆ ಗೊತ್ತಾಗಿದ್ದು ನಾನು ಮಾಲಿನಿ ಜೊತೆ ಸುತ್ತಿದ್ದು, ಅವಳಿಗಾಗಿ ಬದುಕಿದ್ದು ಯೂನಿವರ್ಸಿಟಿಗೆಲ್ಲಾ ಗೊತ್ತಾಗಿದೆ ಅಂತ..! ಬೇರೆ ಡಿಪಾರ್ಟ್ಮೆಂಟ್ ಫ್ರೆಂಡ್ಸ್ ಕೂಡ ಹಂಗಿಸಿದ್ರು.. ಲಕ್ಚರರ್ ಒಬ್ರು’ ಇನ್ನಾದರೂ ‌ನೀವು ನಿಮಗಾಗಿ ಬದುಕುವುದನ್ನ ಕಲೀರಿ. ಅತೀ ತ್ಯಾಗಮಹಿ ಆಗ್ಬೇಡಿ’ ಅಂದ್ರು..!
ಆದರೆ, ಅದಾಗಲೇ ಕಾಲಮಿಂಚಿತ್ತು..
ಅನಿರುದ್ಧ್ ಸೇರಿದಂತೆ ಬಹುತೇಕರು ಬೆಂಗಳೂರಿನತ್ತ ಮುಖಮಾಡಿದ್ರು…ಕೆಲಸವನ್ನೂ ಪಡೆದ್ರು…ಫಸ್ಟ್ ರ್ಯಾಂಕ್ ಮಾಲಿನಿ ಒಂಥರಾ ಕಾಣೆಯಾದಂತಾದ್ಲು..!
ಇದೀಗ ಅನಿಲ್ ಸೇರಿದಂತೆ ಅನಿರುದ್ಧ್ ನಿಂದ ದೂರ ಆದವರೆಲ್ಲಾ ಜೊತೆಗಿದ್ದಾರೆ..!
ಎಲ್ಲದಕ್ಕೂ ಕಾಲವೇ ಉತ್ತರಿಸುತ್ತೆ ಅನ್ನೋದಕ್ಕೆ ಇದೇ ಸಾಕ್ಷಿ..!

  • ಶಶಿಧರ್ ಎಸ್ ದೋಣಿಹಕ್ಲು

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...