ಅಪರಿಚಿತ ಮಹಿಳೆಯರು ಆಗಾಗ ಶಾಲೆ ಬಳಿ ಬಂದು ಮಕ್ಕಳಿಗೆ ಹಣ ಮತ್ತು ಚಾಕ್ಲೇಟ್ ಕೊಟ್ಟು ಹೋಗುತ್ತಿರುವ ವಿಷ್ಯ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ..!
ಮಹಾರಾಷ್ಟ್ರ ನೋಂದಣಿ ಇರುವ ಓಮಿನಿಯಲ್ಲಿ ಚಾಲಕ ಮತ್ತು ಮಹಿಳೆಯರಿಬ್ಬರು ರಾಯಭಾಗ ತಾಲೂಕಿನ ಚಿಂಚಣಿ ಪಟ್ಟಣ ಚಿಂಚಣಿ ತೋಟದ ಪ್ರಾರ್ಥಮಿಕ ಶಾಲೆ ಬಳಿ ಬಂದು ಮಕ್ಕಳಿಗೆ ದುಡ್ಡು ಹಾಗೂ ಚಾಕಲೇಟ್ ಕೊಡ್ತಾ ಇದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ಬಂದು ಪರಿಶೀಲಿಸಿದ ಬಳಿಕವೂ ಇವರು ಹೀಗೆಯೇ ಬಂದು ಹೋಗಿದ್ದಾರಂತೆ..! ಇದು ಪೋಷಕರಲ್ಲಿ , ಶಿಕ್ಷಕರಲ್ಲಿ ಆತಂಕ ಮೂಡಿಸಿದೆ. ಮಕ್ಕಳಿಗೆ ಯಾರ ಜೊತೆಯೂ ಹೋಗದಂತೆ ಎಚ್ವರಿಸಿದ್ದಾರೆ. ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಲಾಗಿದೆ. ಚಾಕಲೇಟ್ ದುಡ್ಡು ಕೊಡುತ್ತಿರುವವರು ಮಕ್ಕಳ ಕಳ್ಳರು ಇರಬಹುದು ಎಂಬ ಅನುಮಾನ ಮನೆಮಾಡಿದೆ.