ಬ್ರಾಹ್ಮಣ ವರನಿಗೆ ವಧು ಸಿಗೋದ್ ಭಾರಿ ಕಷ್ಟ. ಅದೂ ಅರ್ಚಕ, ಪುರೋಹಿತ, ಪೂಜಾರಿ ಆಗಿದ್ರಂತೂ ಮದ್ವೆ ಆಗೋದು ತುಂಬಾನೇ ಕಷ್ಟ ಇದೆ..! ತೆಲಂಗಾಣದಲ್ಲಿ ವೇದಪಂಡಿತರು, ಅರ್ಚಕರು, ಪುರೋಹಿತರ ವಿವಾಹಕ್ಕೆ ಅಲ್ಲಿನ ಸರ್ಕಾರ ಸಹಕರಿಸಲು ಮುಂದಾಗಿದೆ..!
ತೆಲಂಗಾಣದಲ್ಲಿ ಪುರೋಹಿತ, ಅರ್ಚಕರ ಮದ್ವೆ ಆದಲ್ಲಿ ದಂಪತಿ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು 3 ಲಕ್ಷ ರೂ ಡೆಪಾಸಿಟ್ ಮಾಡಲು ಸರಕಾರ ಮುಂದಾಗಿದೆ ಅಂತ ತೆಲಂಗಾಣ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಕೆ.ವಿ ರಮಣಾಚಾರಿ ಹೇಳಿದ್ದಾರೆ.
ತೆಲಂಗಾಣ ಸರ್ಕಾರ ಅರ್ಚಕರು, ಪುರೋಹಿತರ ವಿವಾಹಕ್ಕೆ ಬ್ಯಾಂಕ್‍ನಲ್ಲಿ ಡೆಪಾಸಿಟ್ ಇಡುವ ಮೂಲಕ ಪ್ರೋತ್ಸಾಹಿಸಲು ಮುಂದಾಗಿದೆ. ಸರ್ಕಾರದ ಈ ಪ್ಲಾನ್ ಎಷ್ಟರಮಟ್ಟಿಗೆ ಸಕ್ಸಸ್ ಆಗುತ್ತೆ ಅಂತ ಕಾದು ನೋಡಬೇಕಷ್ಟೇ.
ಅರ್ಚಕರನ್ನು ಮದ್ವೆಯಾದ್ರೆ 3 ಲಕ್ಷ ರೂ..!
Date: