ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಕನ್ನಡದ ಕೀರ್ತಿ ವೇದಾ ಕೃಷ್ಣಮೂರ್ತಿ ಬಿಗ್ ಬ್ಯಾಷ್ ಲೀಗ್ ಮಹಿಳಾ ಟಿ20 ಟೂರ್ನಿಯಲ್ಲಿ ಆಡಲಿದ್ದಾರೆ.
ಹೋಬರ್ಟ್ ಹರಿಕೇನ್ಸ್ ಪರ ಕಣಕ್ಕಿಳಿಯಲಿರುವ ನಮ್ಮ ಹೆಮ್ಮೆಯ ಕನ್ನಡತಿ ಬಿಗ್ ಬ್ಯಾಷ್ ನಲ್ಲಿ ಆಡುತ್ತಿರುವ ಭಾರತದ ಮೂರನೇ ಕ್ರಿಕೆಟ್ ಆಟಗಾರ್ತಿ. ಕಳೆದ ಬಿಗ್ ಬ್ಯಾಷ್ ಲೀಗ್ ನಲ್ಲಿ ಭಾರತೀಯ ಆಟಗಾರ್ತಿಯರಾದ ಹರ್ಮನ್ ಪ್ರೀತ್ ಕೌರ್ ಹಾಗೂ ಸ್ಮೃತಿ ಮಂಧಾನ ಆಡಿದ್ದರು.
ಐಸಿಸಿ ಮಹಿಳಾ ವಿಶ್ವಕಪ್ ನಲ್ಲಿ ಉತ್ತಮ ಆಟ ಪ್ರದರ್ಶಿಸಿದ ವೇದಾ ಅವರ ಸಾಮರ್ಥ್ಯ ವನ್ನು ಮನಗಂಡಿರುವ ಹೋಬರ್ಟ್ ಹರಿಕೇನ್ಸ್ ತಮ್ಮ ತಂಡಕ್ಕೆ ಅವರ ಸೇವೆಯನ್ನು ಬಯಸಿದೆ. ವೇದಾ ಅವರು ಈಗಾಗಲೇ ಹರಿಕೇನ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.