ಇದು ದೆಹಲಿಯಲ್ಲಿ ನಡೆದಿರೋ ನೈಜ ಘಟನೆ..! ಪ್ರಿಯಕರನಿಗೆ ದುಡ್ಡು ನೀಡೋಕೆ ಅಂತ ಮಹಿಳೆ ತನ್ನ ಕಿಡ್ನಿಯನ್ನೇ ಮಾರಲು ಮುಂದಾಗಿದ್ದರಂತೆ..!
21 ವರ್ಷದ ಆ ಮಹಿಳೆಗೆ ಮುದವೆಯಾಗಿ ವಿಚ್ಚೇದನ ಕೂಡ ಆಗಿತ್ತು..! ಇದೀಗ ತನ್ನ ಪ್ರಿಯಕರನನ್ನು ಮದ್ವೆ ಆಗಲು ನಿರ್ಧರಿಸಿದ್ರು. ಆದ್ರೆ, ಪುಣ್ಯಾತ್ಮ ಪಾಪಿ ಪ್ರಿಯಕರ ನಿನ್ನನ್ನು ಮದ್ವೆ ಆಗಬ್ಬೇಕಂದ್ರೆ 1.8ಲಕ್ಷ ರೂ ಹಣ ನೀಡು ಅಂತ ತನ್ನ ಬೇಡಿಕೆಯನ್ನಿಟ್ಟಿದ್ನಂತೆ..!
ಪ್ರಿಯಕರನಿಗೆ ಆ ಹಣವನ್ನು ನೀಡಿ ಅವನನ್ನು ಮದ್ವೆ ಆಗಲು ಬಿಹಾರ ಮೂಲದ ಈ ಮಹಿಳೆ ದೆಹಲಿಗೆ ಬಂದಿದ್ದಾರೆ..ಆಗ ಕಿಡ್ನಿ ಮಾರಾಟ ಜಾಲದಲ್ಲಿ ಅವರು ಸಿಕ್ಕಾಕಿಕೊಂಡಿದ್ದಾರೆ..! ಇನಿಹನಿಗೆ ಹಣ ನೀಡಲು ಕಿಡ್ನಿ ಮಾರಾಟಕ್ಕೆ ನಿರ್ಧರಿಸಿ ಬಿಟ್ಟಿದ್ದರಂತೆ..! ಅನುಮಾನಗೊಂಡ ಆಸ್ಪತ್ರೆ ಸಿಬ್ಬಂದಿ ಮಹಿಳಾ ಸಹಾಯವಾಣಿಗೆ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ..! ಆಮೇಲೆ ಮಹಿಳಾ ಆಯೋಗದವ್ರೂ ಸಹ ಬಂದು ಮಹಿಳೆಯನ್ನು ವಿಚಾರಿಸಿದ್ದಾರೆ.
ಮಹಿಳೆಯೇ ಹೇಳುವಂತೆ, ಅವರಿಗೆ ಮದ್ವೆಯಾಗಿ ವಿಚ್ಛೇದನವಾಗಿತ್ತು. ಅಪ್ಪ-ಅಮ್ಮನೊಂದಿಗೆ ಬಿಹಾರದಲ್ಲಿ ವಾಸವಿದ್ದು, ಅವರ ಪಕ್ಕದ ಮನೆಯ ವ್ಯಕ್ತಿ ಜೊತೆ ಪ್ರೀತಿ ಹುಟ್ಟಿತ್ತು. ಅವರು ಮದ್ವೆ ಆಗ್ತಾರಂತ ನಂಬಿದ್ರು.. ಮೊರದಾಬಾದ್‍ನಲ್ಲಿ ಆತ ಕೆಲ್ಸ ಮಾಡ್ತಿದ್ದ. ಈಗ ಮದ್ವೆ ಆಗುತ್ತೀಯ ಅಂತ ಕೇಳಿದ್ದಕ್ಕೆ ಹಣದ ಬೇಡಿಕೆ ಇಟ್ಟಿದ್ದ ಅದಕ್ಕಾಗಿ ಕಿಡ್ನಿ ಮಾರಲು ನಿರ್ಧರಿಸಿ ಬಿಟ್ಟಿದ್ದಾರಂತೆ..!
ಮಹಿಳಾ ಆಯೋಗದವರು ಕೌನ್ಸೆಲಿಂಗ್ ನಡೆಸಿದ್ದಾರೆ. ಪ್ರಿಯಕರನ ವಿರುದ್ಧ ಕಂಪ್ಲೆಂಟ್ ನೀಡುವಂತೆ ಸಲಹೆ ನೀಡಿದ್ದಾರೆ. ಆದ್ರೆ, ಮಹಿಳೆ ಮಾತ್ರ ಪ್ರಿಯಕರನ ವಿರುದ್ಧ ದೂರು ನೀಡಿಲ್ಲ..