ಹಗಲಿರುಳೆನ್ನದೆ ದೇಶವನ್ನು ಕಾಯೋ ಸೈನಿಕರಿಗೆ ಕೇಂದ್ರ ಸರ್ಕಾರ ದೀಪಾವಳಿಯಂದು ನೀಡಿದ ಭರ್ಜರಿ ಗಿಫ್ಟೇನ್ ಗೊತ್ತಾ..?
ಗಡಿಯಲ್ಲಿ ಸೇವೆ ಸಲ್ಲಿಸ್ತಾ ಇರೋ ನಮ್ಮ ವೀರ ಯೋಧರು ತಮ್ಮ ಕುಟುಂಬದವರೊಂದಿಗೆ ಸ್ಯಾಟಲೈಟ್ ಫೋನ್ ಮೂಲಕ ಮಾತಾಡ್ತಾರೆ. ಕೇಂದ್ರ ಸರ್ಕಾರ ಈ ಸ್ಯಾಟಲೈಟ್ ಫೋನ್ ಕರೆ ದರವನ್ನು ಕಡಿತಗೊಳಿಸಿದೆ. ಈ ಮೂಲಕ ಸೈನಿಕರೂ ಹೆಚ್ಚು ಹೊತ್ತು ತಮ್ಮ ಫ್ಯಾಮಿಲಿ ಸದಸ್ಯರೊಂದಿಗೆ ಮಾತಾಡುವ ಅವಕಾಶವನ್ನು ಕೇಂದ್ರ ಸರ್ಕಾರ ನೀಡಿದೆ.
ಯಾವುದೇ ಸಂಭ್ರಮ, ಸಡಗರವಿರಲಿ, ಹಬ್ಬಗಳಿರಲಿ ಕುಟುಂಬದವರೊಡನೆ ಕಾಲ ಕಳೆಯೋಕೆ ಸಾಧ್ಯವಾಗದ ಸೈನಿಕರಿಗೆ ಹೆಚ್ಚು ಹೊತ್ತು ಫೋನ್ ಮೂಲಕವಾದ್ರು ಮಾತಾಡುವ ಅವಕಾಶ ಸಿಕ್ಕಿದ್ದು ನಿಜಕ್ಕೂ ಖುಷಿಯ ವಿಚಾರ. ದೀಪಾವಳಿಯಂದು ಕೇಂದ್ರ ಸರ್ಕಾರ ನೀಡಿರುವ ಈ ಗಿಫ್ಟ್‍ನಿಂದ ಯೋಧರು ಮತ್ತವರ ಕುಟುಂಬಸ್ಥರಿಗೆ ಸಂತೋಷವಾಗಿರೋದಂತು ನಿಜ.