2013ರಲ್ಲಿ ಐಪಿಎಲ್‍ನಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದು ಕ್ರಿಕೆಟ್ ಭವಿಷ್ಯವನ್ನು ತಾನಾಗಿಯೇ ಹಾಳುಮಾಡಿಕೊಂಡ ಕ್ರಿಕೆಟಿಗ ಶ್ರೀಶಾಂತ್, ಭಾರತ ಬಿಟ್ಟು ಬೇರೆ ದೇಶದ ಪರ ಆಡುವ ತೀರ್ಮಾನ ತೆಗೆದುಕೊಂಡಿದ್ದಾರೆ..!
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸ್ಪಾಟ್ ಫಿಕ್ಸಿಂಗ್‍ನಲ್ಲಿ ಭಾಗಿಯಾದ ಆರೋಪದಲ್ಲಿ ಶ್ರೀಶಾಂತ್ ಅವರಿಗೆ ಆಜೀವ ನಿಷೇಧ ಏರಿತ್ತು. ದೆಹಲಿ ನ್ಯಾಯಾಲಯ ಶ್ರೀಶಾಂತ್ ಅವರನ್ನು ದೋಷಮುಕ್ತಗೊಳಿಸಿ 2015ರಲ್ಲಿ ತೀರ್ಪು ನೀಡಿತ್ತು. ಆದರೂ ಬಿಸಿಸಿಐ ಜೀವಾವಧಿ ನಿಷೇದವನ್ನು ಹಿಂತೆಗೆದು ಕೊಂಡಿರ್ಲಿಲ್ಲ..! ಇದನ್ನು ಪ್ರಶ್ನಿಸಿ ಶ್ರೀಶಾಂತ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಬಿಸಿಸಿಐ ವಿಧಿಸಿರುವ ಆಜೀವ ನಿಷೇಧವನ್ನು ಹೈಕೋರ್ಟ್ ಎತ್ತಿ ಹಿಡಿದಿರುವುದರಿಂದ ಶ್ರೀಶಾಂತ್ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದೀಗ ಬಿಸಿಸಿಐ ವಿರುದ್ಧ ಸಿಡಿದೆದಿದ್ದಿರುವ 34 ವರ್ಷದ ಶ್ರೀಶಾಂತ್ ನನಗಿನ್ನೂ ಕನಿಷ್ಠ 6 ವರ್ಷ ಕ್ರಿಕೆಟ್ ಆಡುವ ಸಾಮಾಥ್ರ್ಯವಿದೆ. ನನಗೆ ಶಿಕ್ಷೆ ವಿಧಿಸಿದ್ದು ಬಿಸಿಸಿಐ ಯೇ ಹೊರತು ಐಸಿಸಿಯಲ್ಲ..! ಯಾವುದೇ ದೇಶದ ಪರ ಆಡಬಲ್ಲೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ಶ್ರೀಶಾಂತ್‍ಗೆ ಯಾವ ದೇಶ ಆಮಂತ್ರಣ ನೀಡುತ್ತೆ ಎಂಬುದನ್ನು ಕಾದು ನೋಡಬೇಕು.