2ಸಲ ಫೇಲ್ ಎಂಬ ಫಲಿತಾಂಶ ಬಂತು..! ಕೋರ್ಟ್‍ನಲ್ಲಿ ಗೆದ್ದಳು 10 ನೇ ಕ್ಲಾಸ್ ವಿದ್ಯಾರ್ಥಿನಿ..!

Date:

ಇದೊಂದು ಇಂಟ್ರೆಸ್ಟಿಂಗ್ ಸ್ಟೋರಿ..! ತನ್ನ ಮೇಲಿನ ಕಾನ್ಫಿಡೆನ್ಸ್‍ನಿಂದ ವಿದ್ಯಾರ್ಥಿನಿ ಗೆದ್ದಿರುವ ರಿಯಲ್ ಸ್ಟೋರಿ ಇದು..!
ನಿಮಗೆ ನೆನೆಪಿರಬಹುದು 2015ರಲ್ಲಿ ಬಿಹಾರದ ಬೋರ್ಡ್ ಎಕ್ಸಾಮ್ ನಡೆತಾ ಇತ್ತು. ಆಗ, ಪರೀಕ್ಷೆ ಬರೀತಿದ್ದ ವಿದ್ಯಾರ್ಥಿಗಳ ಪೋಷಕರು ಹಾಗೂ ಫ್ರೆಂಡ್ಸ್ ಪರೀಕ್ಷಾ ಕೇಂದ್ರದ ಗೋಡೆಯನ್ನೇರಿ ಕಾಪಿ ಚೀಟಿ ಕೊಟ್ಟಿದ್ದರು..! ಈ ಸುದ್ದಿ ಹಂಗಿಗಲ್ಲ..ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗಿತ್ತು..! ಇದೀಗ ವಿದ್ಯಾರ್ಥಿನಿಯೊಬ್ಬಳು ಫೇಲ್ ಆಗಿದ್ದಾಳೆ ಎಂದು ತಪ್ಪು ರಿಸೇಲ್ಟ್ ನೀಡಿ ಮತ್ತೊಮ್ಮೆ ಸುದ್ದಿಯಾಗಿದೆ..!
ಫೇಲ್ ಫಲಿತಾಂಶ ನೀಡಿ ಸುದ್ದಿಯಾಗಿದೆ ಅನ್ನೋದಕ್ಕಿಂತ ಆ ವಿದ್ಯಾರ್ಥಿನಿ ಕೋರ್ಟ್ ಮೆಟ್ಟಿಲೇರಿ ಗೆದ್ದಿದ್ದಾಳೆ ಅನ್ನೋದು ಸುದ್ದಿ..!
ಆಕೆ ಬಿಹಾರದ ಸಾಹರ್ಸಾ ಜಿಲ್ಲೆಯ ವಿದ್ಯಾರ್ಥಿನಿ. ಹೆಸರು, ಪ್ರಿಯಾಂಕ ಸಿಂಗ್. ಈ ವರ್ಷಾರಂಭದಲ್ಲಿ 10ನೇ ತರಗತಿ ಫಲಿತಾಂಶ ಬಂದಿದ್ದು ನಿಮ್ಗೂ ಗೆತ್ತು. ಡಿಡಿ ಹೈಸ್ಕೂಲ್‍ನ ಈ ಪ್ರಿಯಾಂಕಳ ಫಲಿತಾಂಶ ಕೂಡ ಎಲ್ಲರ ಫಲಿತಾಂಶದ ಜೊತೆ ಬಂತು. ಆದ್ರ, ಆ ಫಲಿತಾಂಶದಿಂದ ಶಾಕ್ ಆಗಿತ್ತು..! ಯಾಕಂದ್ರೆ ಉತ್ತಮ ಅಂಕ ಬರುತ್ತೆ ಎಂದುಕೊಂಡಿದ್ದ ಪ್ರೀಯಾಂಕಗೆ ಫೇಲ್ ಎಂಬ ಫಲಿತಾಂಶ ಬಂತು..! ವಿಜ್ಞಾನದಲ್ಲಿ 29, ಸಂಸ್ಕೃತದಲ್ಲಿ 4..!
ಇಷ್ಟೊಂದು ಕಡಿಮೆ ಅಂಕ ಬರೋಕೆ ಚಾನ್ಸೇ ಇಲ್ಲ..! ಏನೋ ಎಡವಟ್ಟಾಗಿದೆ ಅಂತ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ಲು ಪ್ರಿಯಾಂಕ.


ಮರು ಮೌಲ್ಯಮಾಪನದ ರಿಸೆಲ್ಟ್ ಬಂದಾಗ ಮತ್ತಷ್ಟು ಶಾಕ್ ಎದುರಿತ್ತು..! 4 ಅಂಕ ಬಂದಿದ್ದ ಸಂಸ್ಕೃತದಲ್ಲಿ 5 ಅಂಕ ಹೆಚ್ಚಾಗಿ 9 ಅಂಕ ಮಾತ್ರ ಬಂದಿತ್ತು..! ವಿಜ್ಞಾನದಲ್ಲಿ 29 ಅಂಕದಿಂದ 7 ಅಂಕ ಕಡಿಮೆಯಾಗಿ 22 ಅಂಕ ಸಿಕ್ಕಿತ್ತು..!
ಪ್ರಿಯಾಂಕಗೆ ಯಾಕೀಗೆ ಆಗ್ತಾ ಇದೆ ಅಂತ ತುಂಬಾ ಬೇಜಾರಾಯ್ತು..! ಆದ್ರೆ, ನನಗೆ ಯಾವುದೇ ಕಾರಣಕ್ಕೂ ಇಷ್ಟೊಂದು ಕಡಿಮೆ ಅಂಕ ಬರೋಕೆ ಸಾಧ್ಯವೇ ಇಲ್ಲ..! ಅಂತ ಪಾಟ್ನಾ ಹೈಕೋರ್ಟ್ ಮೆಟ್ಟಿಲೇರಿದ್ಲು..!
40 ಸಾವಿರ ಡೆಪಾಸಿಟ್ ಮಾಡಲು ಹೇಳಿದ ನ್ಯಾಯಾಲಯ, ಇದು ಗಂಭೀರ ಪ್ರಕರಣ ಅಲ್ಲ ಅಂತಾದ್ರೆ ಹಣ ವಾಪಸ್ಸು ನೀಡಲಾಗಲ್ಲ, ಅದನ್ನು ಕಳೆದುಕೊಳ್ಳ ಬೇಕಾಗುತ್ತೆ ಎಂದು ಹೇಳಿತ್ತು.


ತನಗೆ ಕೋರ್ಟ್‍ನಲ್ಲಿ ನ್ಯಾಯ ಸಿಕ್ಕೇ ಸಿಗುತ್ತೆ..! ತಾನು ಗೆದ್ದೇ ಗೆಲ್ತೀನಿ ಎಂಬ ಭರವಸೆಯಿದ್ದ ಪ್ರೀಯಾಂಕ ಮುಂದುವರೆದೇ ಬಿಟ್ಟಳು..! ಆಕೆ ಡೆಪಾಸಿಟ್ ಇಡುತ್ತಿದ್ದಂತೆ ಕೋರ್ಟ್ ಉತ್ತರ ಪತ್ರಿಕೆ ನೀಡುವಂತೆ ಬಿಹಾರದ ಶಾಲಾ ಶಿಕ್ಷಣ ಮಂಡಳಿಗೆ ಕೋರ್ಟ್ ಆದೇಶ ನೀಡಿತು..! ಆದ್ರೆ ಮಂಡಳಿ ನೀಡಿದ ಪತ್ರಿಕೆ ಪ್ರೀಯಾಂಕಳದ್ದಾಗಿರಲಿಲ್ಲ..! ಪ್ರೀಯಾಂಕಳ ಬರವಣಿಗೆಗೂ, ಉತ್ತರ ಪತ್ರಿಕೆಯಲ್ಲಿದ್ದ ಬರವಣಿಗೆಗೆ ವ್ಯತ್ಯಾಸವಿತ್ತು. ಆಗ ಕೋರ್ಟ್ ಪ್ರಿಯಾಂಕಳ ನಿಜವಾದ ಉತ್ತರ ಪತ್ರಿಕೆಯನ್ನು ನೀಡುವಂತೆ ಮತ್ತೊಮ್ಮೆ ಆದೇಶ ಹೊರಡಿಸಿತು..! ಆಕೆಯ ನೈಜ ಉತ್ತರ ಪತ್ರಿಕೆ ಸಿಕ್ಕಾಗ ವಿಜ್ಞಾನದಲ್ಲಿ 80 ಅಂಕ, ಸಂಸ್ಕøತದಲ್ಲಿ 61 ಅಂಕ ನೀಡಲಾಗಿದೆ..!
ವಿದ್ಯಾರ್ಥಿನಿಗೆ ಮಾಡಿದ ಅನ್ಯಾಯಕ್ಕಾಗಿ ಆಕೆಗೆ 5 ಲಕ್ಷ ರೂ ಪರಿಹಾರ ನೀಡಲು ಮಂಡಳಿಗೆ ಸೂಚಿಸಿದೆ.
ಪ್ರಿಯಾಂಕಳಿಗೆ ತನ್ನ ಮೇಲಿದ್ದ ಆತ್ಮವಿಶ್ವಾಸ, ನಂಬಿಕೆಯೇ ಗೆಲುವಿಗೆ ಕಾರಣವಾಯ್ತು. ಒಂದುವೇಳೆ ಕೋರ್ಟ್ ಮೆಟ್ಟಿಲೇರದೇ ಇದ್ದಿದ್ದರೆ ಮತ್ತೆ ಎಕ್ಸಾಮ್ ಬರೆದು ಪಾಸ್ ಆಗ್ಬೇಕಿತ್ತು…ಅನ್ಯಾಯಾವಾಗಿ ಸೋಲೊಪ್ಪಿಕೊಳ್ಳ ಬೇಕಾಗಿತ್ತು.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...