ನಕಲಿ ಛಾಪಾ ಕಾಗದ ಪ್ರಕರಣದ ಪ್ರಮುಖ ಅಪರಾಧಿ ಕರೀಂ ಲಾಲ್ ತೆಲಗಿ ನಿಧನನಾಗಿದ್ದಾನೆ.
ಬಹು ಅಂಗಾಂಗ ವೈಪಲ್ಯದಿಂದ ಬಳಲುತ್ತಿದ್ದ ಕರೀಂ ಲಾಲ್ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಕೊನೆಯುಸಿರೆಳೆದಿದ್ದಾನೆ.
ಬಿಪಿ, ಬಹು ಅಂಗಾಂಗ ವೈಪಲ್ಯವಲ್ಲದೆ ಎಚ್‍ಐವಿ ಸೋಂಕಿನಿಂದಲೂ ತೆಲಗಿ ಬಳಲುತ್ತಿದ್ದ. ನಕಲಿ ಛಾಪಾ ಕಾಗದ ಹಗರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೆ ಗುರಿಯಾಗಿದ್ದ ಈತ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಅನಾರೋಗ್ಯದ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.
ಕರೀಂ ಲಾಲ್ ತೆಲಗಿ ನಿಧನ
Date: