ಕಾಮುಕನೊಬ್ಬ ಫುಟ್ಪಾತ್‍ನಲ್ಲೇ ಹಾಡುಹಗಲೇ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ..! ಸಾರ್ವಜನಿಕರು ಓಡಾಡ್ತಾ ಇದ್ರೂ ಯಾರೂ ಕೂಡ ಮಹಿಳೆಯ ರಕ್ಷಣೆಗೆ ಬರದೇ ಇದ್ದಿದ್ದು ನಿಜಕ್ಕೂ ವಿಪರ್ಯಾಸ..! ರಕ್ಷಣೆ ಮಾಡುವ ಬದಲು ಈ ಅಮಾನವೀಯ ಘಟನೆಯನ್ನು ವೀಡಿಯೋ ಮಾಡಿದ್ದಾರೆ..!
ಈ ದುಷ್ಕೃತ್ಯ ನಡೆದಿದ್ದು ಆಂಧ್ರಪ್ರದೇಶದ ವಿಶಾಪಟ್ಟಣದಲ್ಲಿ..! ಗಂಜಿ ಶಿವ (21)ಎಂಬ ಕಾಮುಕ ಕಂಠಪೂರ್ತಿ ಕುಡಿದು ರೇಪ್ ಮಾಡಿದ್ದಾನೆ. ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ..
ಸಾರ್ವಜನಿಕರು ಆ ಸ್ಥಳದಲ್ಲಿ ಓಡಾಡ್ತಾ ಇದ್ರೂ ತಮಗೇನೂ ಸಂಬಂಧವಿಲ್ಲ ಎಂಬಂತೆ ವರ್ತಿಸಿದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಆಟೋ ಚಾಲಕನೊಬ್ಬ ಕೃತ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದ್ದಾನೆ..! ವೀಡಿಯೋ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.