ಪ್ರಧಾನಿ ನರೇಂದ್ರ ಮೋದಿ ಅತ್ಯುತ್ತಮ ವಾಗ್ಮಿ..! ಭಾಷಣ ಮಾಡೋದ್ರಲ್ಲಿ ಇವರನ್ನು ಮೀರಿಸೋ ಜನನಾಯಕ ಇಲ್ಲ ಅಂತಾನೇ ಹೇಳಬಹುದು..! ಮೋದಿ ಪ್ರಧಾನಮಂತ್ರಿಯಾದ ನಂತರದಲ್ಲಿ ಅಂದಿನಿಂದ ಇಲ್ಲಿಯವರೆಗೆ ಮಾಡಿದ ಭಾಷಣ ಎಷ್ಟುಗೊತ್ತಾ..? ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಎಷ್ಟು ಭಾಷಣ ಮಾಡಿದ್ರು ಗೊತ್ತಾ..? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಎರಡೂ ಅವಧಿಯಲ್ಲಿ ಒಟ್ಟು 1,401 ಭಾಷಣಗಳನ್ನು ಮಾಡಿದ್ದರು..! ಮೊದಲ ಅವಧಿಯಲ್ಲಿ 762, ಎರಡನೇ ಅವಧಿಯಲ್ಲಿ 639 ಬಾರಿ ಭಾಷಣ ಮಾಡಿದ್ರು..!
ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ ತಿಂಗಳಿಗೆ ಸರಾಸರಿ 19 ಭಾಷಣ ಮಾಡಿದ್ದು, 41 ತಿಂಗಳಲ್ಲಿ ಬರೊಬ್ಬರಿ 775 ಭಾಷಣಗಳನ್ನು ಮಾಡಿದ್ದಾರೆ..! 775 ಭಾಷಣಗಳಲ್ಲಿ ವಿದೇಶಿ ಭಾಷಣಗಳ ಸಂಖ್ಯೆ 166..
2014ರಲ್ಲಿ 135, 2015ರಲ್ಲಿ 264, 2016ರಲ್ಲಿ 2017 ಮತ್ತು ಈ ವರ್ಷ ಈಗಾಗಲೇ 207 ಭಾಷಣಗಳನ್ನು ಮಾಡಿದ್ದಾರೆ..!
ಮೋದಿ ಭಾಷಣದ ಸರಾಸರಿ ಅವಧಿ 30 ನಿಮಿಷ ಎಂದು ವರದಿ ಆಗಿದೆ..!