ಸಹೋದರ ಪ್ರೀತಿಗೆ ಸರಿಸಾಟಿ ಯಾವುದೂ ಇಲ್ಲ..! ಬಾಲ್ಯದಲ್ಲಿ ಸದಾ ಜೊತೆಗಿರೋ ಅಣ್ಣ-ತಮ್ಮಂದಿರಲ್ಲಿ ಎಷ್ಟೋ ಜನ ದೊಡ್ಡವರದ ಮೇಲೆ ದೂರಾಗ್ತಾರೆ..! ಒಬ್ಬರನ್ನ ಕಂಡ್ರೆ ಇನ್ನೊಬ್ಬರಿಗೆ ಆಗಲ್ಲ..! ಅದಕ್ಕೆ ಹೇಳೋದು ಹುಟ್ಟುವಾಗ ಅಣ್ಣ ತಮ್ಮಂದಿರು.. ಬೆಳಿತಾ ಬೆಳಿತಾ ದಾಯಾದಿಗಳು..!
ಅದೇನೇ ಇರಲಿ.. ಈ ಸ್ಟೋರಿ ಓದಿ ಸಹೋದರ ಸಂಬಂಧ ಎಷ್ಟೊಂದು ಚೆಂದ ಅನಿಸುತ್ತೆ..! ಪ್ರೀತಿ ಅಕ್ಕನ ಮೇಲಿನ ತಮ್ಮನ ಅಕ್ಕರೆ ಗೊತ್ತಾಗುತ್ತೆ..! ಅಕ್ಕ-ತಮ್ಮ ಅಂದ್ರೆ ಇವ್ರು ಕಣ್ರೀ ಅಂತೀರಿ..!
ದೀಪಾವಳಿ ಹಬ್ಬದ ಸಡಗರ.. ಸಂಜೆ ಆಗಿತ್ತು. ಜೈಪುರ ನಗರದ ಹೋಂಡಾ ಸ್ಕೂಟರ್ ಶೂಂ ರೂಂನ ಸಿಬ್ಬಂದಿಗಳು ಬಾಗಿಲು ಹಾಕಿ ಮನೆಗೆ ಹೊರಡಬೇಕು, ಅಷ್ಟರಲ್ಲಿ 13 ವರ್ಷದ ಪೋರ ಯಶ್ ತನ್ನ ಅಕ್ಕನನ್ನು ಕರೆದುಕೊಂಡು ಶೋ ರೂಂಗೆ ಬಂದು ಸ್ಕೂಟರ್ ಖರೀದಿಸುವುದಾಗಿ ಹೇಳಿದ..!
ಸರಿ ಎಂದು ಸ್ಕೂಟರ್ ತೋರಿಸಿದ್ರು ಸಿಬ್ಬಂದಿ. ಸ್ಕೂಟರ್ ಓಕೆ ಮಾಡಿ, ತಾನು ತಂದಿದ್ದ 62 ಸಾವಿರ ರೂನಷ್ಟು ಚಿಲ್ಲರೆ ಹಣವನ್ನು ಮಾಲೀಕರ ಮುಂದಿಟ್ಟ..! ಈ ಹಣ ತಗೋಳಕ್ಕೆರ ಆಗಲ್ಲ ಅಂತ ಹೇಳಿದ್ರು ಮಾಲೀಕ..! ಅಕ್ಕನಿಗೆ ಸ್ಕೂಟರ್ ಕೊಡಿಸಬೇಕು ಎಂದ ಆಸೆಪಟ್ಟಿದ್ದ ಬಾಲಕ ಮತ್ತು ಆತನ ಕಥೆ ಕೇಳಿ ಮಾಲೀಕರ ಮನಸ್ಸು ಕರಗಿತು..! ಹಣವನ್ನು ಪಡೆದರು. ಅದನ್ನು ಎಣಿಸಲು ಸಿಬ್ಬಂದಿಗೆ ಬೇಕಾಯ್ತು ಹೆಚ್ಚು ಕಡಿಮೆ ಎರಡುವರೆ ಗಂಟೆ ಎನ್ನುತ್ತಾರೆ ಡೀಲರ್ ಸಂತೋಷ್..!