ಕನ್ನಡ ಬಿಗ್ ಬಾಸ್ ಸೀಸನ್ 5 ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಈ ವಾರದ ಕ್ಯಾಪ್ಟನ್ ಆಗಿ ಸಮೀರ್ ಆಚಾರ್ಯ ಆಯ್ಕೆಯಾಗಿದ್ದಾರೆ.
ಎರಡನೇ ವಾರದಲ್ಲಿ ಎಲಿಮಿನೇಟ್ ಆದ ಮೇಘ ಮನೆಯಿಂದ ಹೊರಗೆ ಹೋಗುವಾಗ ದಿವಾಕರ್ ಅವರಿಗೆ ವಿಶೇಷ ಅಧಿಕಾರ ನೀಡಿದ್ದರು. ಅದರಂತೆ ದಿವಾಕರ್ ಈ ವಾರದ ಕ್ಯಾಪ್ಟನ್ ಆಗಲು ಸಮೀರ್ ಆಚಾರ್ಯ, ಜಯ ಶ್ರೀನಿವಾಸನ್, ರಿಯಾಜ್, ದಯಾಳ್, ಸಿಹಿಕಹಿ ಚಂದ್ರು, ಚಂದನ್ ಅವರ ಹೆಸರನ್ನು ಸೂಚಿಸಿದ್ದರು. ಇವರುಗಳಲ್ಲಿ ಒಬ್ಬರ ಆಯ್ಕೆಗೆ ಬಿಗ್ ಬಾಸ್ ಟಾಸ್ಕ್ ನೀಡಿದ್ದರು. ಒಂದು ಕಂಬದಲ್ಲಿನ ಹಗ್ಗವನ್ನು ಸೊಂಟಕ್ಕೆ ಸುತ್ಕೊಂಡು ಮತ್ತೊಂದು ಕಂಬಕ್ಕೆ ಹೋಗಿ ಅದನ್ನು ವಾಪಸ್ಸು ಸುತ್ತುವ ಟಾಸ್ಕ್ ನಲ್ಲಿ ಸಮೀರ್ ಆಚಾರ್ಯ ಗೆದ್ದು ಈ ವಾರದ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆದರು. ಇದರೊಂದಿಗೆ ಈ ವಾರದ ನಾಮಿನೇಷನ್ ಪ್ರಕ್ರಿಯೆಯಿಂದ ಅವರು ಹೊರ ಉಳಿದಿದ್ದಾರೆ.