ಸತತ 30 ಬಾರಿ ಪ್ರಶಸ್ತಿ ಸುತ್ತಿಗೆ ಆಯ್ಕೆಯಾದ್ರೂ…ಪ್ರಶಸ್ತಿಗೆ ಮುತ್ತಿಕ್ಕುವ ಆಸೆ ಈಡೇರಿರಲಿಲ್ಲ..! 31ನೇ ಪ್ರಯತ್ನದಲ್ಲಿ ಯಶಸ್ಸು ಸಿಗ್ತು..! ಇದು 27 ವರ್ಷದ ಚಕ್ರಧರ್ ಎಂಬ ಲೋಗೋ ಮ್ಯಾನ್ ಯುವಕನ ಯಶೋಗಾಥೆ..!
ಹೈದರಾಬಾದ್ ಮೂಲದ ಚಕ್ರಧರ್ ಅಹಮದಾಬಾದಿನ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಡಿಸೈನ್‍ನಲ್ಲಿ ಎರಡನೇ ವರ್ಷದ ಪದವಿ ಓದ್ತಿದ್ದಾರೆ..! ಕೇಂದ್ರ ಸರ್ಕಾರ ಆಗಾಗ ಆಯೋಜಿಸೋ ಲೋಗೋ ಸ್ಪರ್ಧೆಯಲ್ಲಿ ಭಾಗವಹಿಸೋದೇ ಇವ್ರ ಹವ್ಯಾಸವಾಗ್ಬಿಟ್ಟಿದೆ ಅಂದ್ರೆ ತಪ್ಪಾಗಲ್ಲ..!
ಸ್ವಚ್ಛಭಾರತ್, ಬೇಟಿ ಬಚಾವೋ ಸೇರಿದಂತೆ ಅನೇಕ ಯೋಜನೆಗಳಿಗೆ ಕೇಂದ್ರ ಸರ್ಕಾರ ಲೋಗೋ ಆಹ್ವಾನಿಸಿದಾಗ ಚಕ್ರಧರ್ ಭಾಗವಹಿಸಿ MY Gov.in ಗೆ ತಾವು ವಿನ್ಯಾಸ ಮಾಡಿರೋ ಲೋಗವನ್ನು ಅಪ್‍ಲೋಡ್ ಮಾಡಿದ್ದಾರೆ..! ಸುಮಾರು 30 ಯೋಜನೆಗಳಿಗೆ ಲೋಗೋ ವಿನ್ಯಾಸಗೊಳಿಸಿ ಅಪ್‍ಲೋಡ್ ಮಾಡಿದ್ರೂ ಯಾವುದಕ್ಕೂ ಪ್ರಶಸ್ತಿ ಸಿಕ್ಕಿರಲಿಲ್ಲ..! ಅಂತಿಮ ಸುತ್ತಿಗೆ ಆಯ್ಕೆಯಾಗಿ, ಪ್ರಶಸ್ತಿ ಸನಿಹ ಹೋಗಿ ಸೋಲುಕಂಡಿದ್ರು..! ಹಾಗಂತ ಪ್ರಯತ್ನ ಕೈ ಬಿಟ್ಟಿರಲಿಲ್ಲ. ಆದರೆ, ಈಗ ಬುಲೆಟ್ ರೈಲು ಯೋಜನೆ ಲೋಗೋದಿಂದ ಇವರಿಗೆ ಯಶಸ್ಸು ಸಿಕ್ಕಿದೆ.
ಬುಲೆಟ್ ರೈಲು ಯೋಜನೆ ಲೋಗೋವನ್ನು ಚಕ್ರಧರ್ MY Gov.in ಗೆ ಅಪ್‍ಲೋಡ್ ಮಾಡಿದ್ರು. ಇದು ಇವರು ರಚಿಸಿದ 31ನೇ ಲೋಗೋ ಅಂತೆ..! ಲೋಗೋ ಆಯ್ಕೆಯ ಅಂತಿಮ ಸುತ್ತಿನಲ್ಲಿ 100 ಲೋಗೋಗಳು ಸ್ಪರ್ಧೆಯಲ್ಲಿದ್ದವು. ಇವುಗಳಲ್ಲಿ ಚಕ್ರಧರ್ ಅವರು ವಿನ್ಯಾಸಗೊಳಿಸಿರೋ ಲೋಗೋ ಆಯ್ಕೆಯಾಗಿದ್ದು ಬುಲೆಟ್ ರೈಲು ಯೋಜನೆ ಮತ್ತು ನ್ಯಾಷನಲ್ ಹೈ ಸ್ಪೀಡ್ ರೈಲು ಕಾರ್ಪೋರೇಷನ್ 1 ಲಕ್ಷ ರೂ ಬಹುಮಾನ ನೀಡಿದೆ.
ಚಕ್ರಧರ್ ವಿನ್ಯಾಸ ಮಾಡಿರೋ ಲೋಗೋ ರೈಲು ಸಂಚಾರ ಮ್ಯಾಪ್‍ನಂತಿದೆ. ಇದರಲ್ಲಿನ ಸಣ್ಣ ಚುಕ್ಕೆಗಳು ರೈಲು ನಿಲ್ದಾಣಗಳನ್ನು ಪ್ರತಿನಿಧಿಸುತ್ತವೆ..! ಮಧ್ಯಭಾಗದಲ್ಲಿನ ಚಿರತೆ ವೇಗ, ವಿಶ್ವಾಸರ್ಹತೆ ಮತ್ತು ನಂಬಿಕೆಯನ್ನು ಪ್ರತಿನಿಧಿಸುತ್ತದೆಯಂತೆ..!