ಬಾಲಿವುಡ್ ನಟ ರಣವೀರ್ ಸಿಂಗ್ ಪೊಲೀಸ್ ಪೇದೆಯೊಬ್ಬರಿಗೆ ಪಬ್ಲಿಕ್ ಪ್ಲೇಸ್‍ನಲ್ಲಿ ಮುತ್ತುಕೊಟ್ಟಿದ್ದಾರೆ..! ಅಷ್ಟಕ್ಕೂ ರಣವೀರ್‍ಸಿಂಗ್ ಪೊಲೀಸ್‍ಗೆ ಮುತ್ತುಕೊಟ್ಟಿದ್ದೇಕೆ ಗೊತ್ತಾ..?
ಮುಂಬೈನಲ್ಲಿ ರಣವೀರ್ ಜಿಮ್ ಮುಗಿಸಿಕೊಂಡು ಹೊರ ಬರುವಾಗ ಪೊಲೀಸ್ ಪೇದೆ ಒಬ್ಬರು ಅವರನ್ನು ಭೇಟಿಯಾಗಿ ನಾನು ನಿಮ್ಮ ಅಭಿಮಾನಿ ಅಂತ ಹೇಳಿಕೊಂಡಿದ್ದಾರೆ. ಅಭಿಮಾನಿ ಪೇದೆ ಜೊತೆ ಮಾತಾನಡಿದ ರಣವೀರ್ ಕೊನೆಗೆ ಹೊರಡುವಾಗ ಮುತ್ತುಕೊಟ್ಟಿದ್ದಾರೆ.
ರಣವೀರ್ ಪೊಲೀಸ್‍ಗೆ ಮುತ್ತುಕೊಟ್ಟ ಚಿತ್ರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಣವೀರ್ ಡಿಸೆಂಬರ್ 1ರಂದು ಬಿಡುಗಡೆಯಾಗಲಿರೋ ಬಹುನಿರೀಕ್ಷಿತ ‘ಪದ್ಮಾವತಿ’ ಚಿತ್ರದ ಪ್ರಮೋಷನ್‍ನಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ಇವರು ಅಲ್ಲಾವುದ್ಧೀನ್ ಖಿಲ್ಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪೇದೆಗೆ ಮುತ್ತುಕೊಟ್ಟ ರಣವೀರ್ ಸಿಂಗ್…!
Date: