ಇದೊಂದು ವಿಸ್ಮಯ..! ಇಲ್ಲಿ ಗೋರಿಗಳು ಉಸಿರಾಡ್ತಾ ಇವೆ..! ನಂಬಲು ಕಷ್ಟವಾದ್ರೂ ನಂಬಲೇ ಬೇಕಾಗಿದೆ..! ಸಮಾಧಿಗಳು ಉಸಿರಾಡ್ತಾ ಇವೆ ಎಂಬ ಸುದ್ದಿ ಇದೀಗ ವೈರಲ್ ಆಗಿದ್ದು, ಸುತ್ತಮುತ್ತಲಿನ ಜನ ಉಸಿರಾಡೋ ಸಮಾಧಿಗಳತ್ತ ಓಡೋಡಿ ಬರ್ತಿದ್ದಾರೆ..!
ಹೌದು, ಇದು ರಾಯಚೂರಿನ ಆನೆ ಹೊಸೂರು ಗ್ರಾಮದಲ್ಲಿ ನಡೆಯುತ್ತಿರೋ ವಿಸ್ಮಯ..! ಗ್ರಾಮದಲ್ಲಿ ಮುಸ್ಲೀಂ ಸಮುದಾಯದವರ ಅನಾದಿಕಾಲದ ಗೋರಿಗಳಿವೆ. ಇಲ್ಲಿನ 3 ಗೋರಿಗಳು ಕಳೆದ ಮೂರು ದಿನಗಳಿಂದ ಉಸಿರಾಡ್ತಾ ಇವೆಯಂತೆ..! ಇದನ್ನು ಸ್ವತಃ ಅಲ್ಲಿ ಸಮಾಧಿಯಾಗಿರೋ ಪೂರ್ವಜರ ವಂಶಸ್ಥರೇ ಹೇಳ್ತಿದ್ದಾರೆ..!
ಗೋರಿಗಳಿಗೆ ನಿತ್ಯ ಬಟ್ಟೆ ಬದಲಾಯಿಸಿ, ಊದುಬತ್ತಿ ಎತ್ತಿ ಪ್ರಾರ್ಥನೆ ಮಾಡ್ತಾರೆ ವಂಶಸ್ಥರು. ಎಂದಿನಂತೆ ಮೊನ್ನೆಯೂ ಕೂಡ ಬಟ್ಟೆ ಬದಲಿಸಿ ಊದುಬತ್ತಿ ಎತ್ತಿದ್ದಾರೆ..! ಈ ವೇಳೆ ಬಟ್ಟೆ ಗಾಳಿಯಿಂದ ಅಲ್ಲಾಡಿದಂಗೆ ಆಗಿದೆ..! ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಉಸಿರಾಟದ ಅನುಭವವಾಗಿದೆಯಂತೆ..! ಮರುದಿನ ಬೆಳಗ್ಗೆಯಿಂದ ಸಂಜೆಯವರೆಗೂ ಈ ಉಸಿರಾಟದ ಶಬ್ಧ ಕೇಳಿತ್ತಂತೆ..! ಆಗಾಗ ಉಸಿರಾಡುತ್ತಿರೋ ಈ ಮೂರು ಗೋರಿಗಳು ಇದ್ದಕ್ಕಿದ್ದಂತೆ ಉಸಿರಾಟ ನಿಲ್ಲಿಸ್ತಾವಂತೆ..!
ಇಂದು ಸಂಜೆ ಮುಸ್ಲಿಂ ಧರ್ಮಗುರುಗಳು ಬಂದು ಇದನ್ನು ಪರಿಶೀಲಿಸಿ, ಇದು ಶುಭ ಸೂಚಕವೇ ಅಶುಭ ಸಂಕೇತವೇ ಎಂಬುದನ್ನು ತಿಳಿಸ್ತಾರಂತ ಸ್ಥಳಿಯರು ತಿಳಿಸಿದ್ದಾರೆ. ಗೋರಿಗಳು ಉಸಿರಾಡೋ ಸುದ್ದಿ ವೈರಲ್ ಆಗಿದ್ದು, ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.