ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೋರಾಟ ವ್ಯರ್ಥವಾಗಿದ್ದು, ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 40 ರನ್‍ಗಳ ಸೂಲುಕಂಡಿದೆ.
ರಾಜ್‍ಕೋಟ್‍ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಪ್ರವಾಸಿ ನ್ಯೂಜಿಲೆಂಡ್ ನಿಗಧಿತ 20 ಓವರ್‍ಗಳಲ್ಲಿ ಕೇವಲ ಎರಡು ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ಕೊಲಿನ್ ಮನ್ರೋ ಅಜೇಯ ಶತಕ (109) ಹಾಗೂ ಗುಪ್ಟಿಲ್ (45) ಆಟದ ನೆರವಿನಿಂದ ಬೃಹತ್ ಮೊತ್ತಗಳಿಸಿತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಭಾರತಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ರೋಹಿತ್ ಶರ್ಮಾ (5), ಶಿಖರ್ ಧವನ್ (1) ವಿಫಲವಾದರು. ಇವರ ಬೆನ್ನಲ್ಲೇ ಶ್ರೇಯಸ್ ಅಯ್ಯರ್ (23) ಫೆವಿಲಿಯನ್ ಸೇರಿದ್ರು. ಹಾರ್ಧಿಕ್ ಪಾಂಡ್ಯ (1) ಕೂಡ ವಿಫಲರಾದರು. ಬಳಿಕ ನಾಯಕ ವಿರಾಟ್ ಕೊಹ್ಲಿ (65), ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (49) ತಂಡವನ್ನು ಮೇಲೆತ್ತಲು ಪ್ರಯತ್ನಿಸಿದರೂ ಗೆಲುವಿನ ದಡ ಸೇರಿಸಲು ಸಾಧ್ಯವಾಗಿಲ್ಲ.