ವಿಶ್ವಶ್ರೇಷ್ಠ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಇಂದು 29ನೇ ಹುಟ್ಟುಹಬ್ಬದ ಸಂಭ್ರಮ. ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದ ಸೋಲಿನ ನೋವಿನಲ್ಲೇ ವಿರಾಟ್ ಇಂದು ಹುಟ್ಟುಹಬ್ಬ ಆಚರಿಸಿಕೊಂಡು, ಮುಂದಿನ ಪಂದ್ಯದ ಗೆಲುವಿಗಾಗಿ ಎದುರು ನೋಡ್ತಿದ್ದಾರೆ. ಹಿಂದಿನ ವರ್ಷ ಇಂಗ್ಲೆಂಡ್ ವಿರುದ್ಧ ಆಡಲು ರಾಜ್‍ಕೋಟ್‍ಗೆ ತೆರಳಿದ್ದ ವಿರಾಟ್, ಈ ವರ್ಷ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಸಲುವಾಗಿ ರಾಜ್‍ಕೋಟ್‍ನಲ್ಲಿದ್ದಾರೆ. ಕಾಕತಾಳಿಯ ಎಂಬಂತೆ ಸತತ ಎರಡು ವರ್ಷ ಹುಟ್ಟುಹಬ್ಬವನ್ನು ವಿರಾಟ್ ರಾಜ್‍ಕೋಟ್‍ನಲ್ಲೇ ಆಚರಿಸಿಕೊಂಡಿದ್ದಾರೆ.
ಟೀಂ ಇಂಡಿಯಾ ಪರ 60 ಟೆಸ್ಟ್ ಪಂದ್ಯಗಳಿಂದ 4658 ರನ್, 202 ಏಕದಿನ ಪಂದ್ಯಗಳಿಂದ 9030 ರನ್ ಹಾಗೂ 53 ಟಿ20 ಪಂದ್ಯಗಳಿಂದ 1878ರನ್ ಗಳಿಸಿರುವ ರನ್ ಮಿಶನ್ ವಿರಾಟ್ ವಿದಾಯದ ಬಗ್ಗೆ ಮಾತನಾಡಿದ್ದಾರೆ..!
ಅತ್ತುತ್ತಮ ಫಾರ್ಮ್‍ನಲ್ಲಿರೋ ಕೊಹ್ಲಿ ಇಷ್ಟು ಬೇಗ ವಿದಾಯದ ಮಾತಾಡ್ತಿರೋದು ಏಕೆ ಅಂತ ಗಾಬರಿ ಆಗ್ಬೇಡಿ..! ವಿರಾಟ್ ಇಷ್ಟು ಬೇಗ ವಿದಾಯ ಹೇಳಲ್ಲ..! ಚಾಟ್ ಶೋ ಬ್ರೇಕ್ ಫಾಸ್ಟ್ ವಿಥ್ ಚಾಂಪಿಯನ್ಸ್‍ನಲ್ಲಿ ಪಾಲ್ಗೊಂಡಿದ್ದ ಕೊಹ್ಲಿ ನಿವೃತ್ತಿ ಬಗ್ಗೆ ಮಾತನಾಡಿ, ತನ್ನಲ್ಲಿರೋ ಕ್ರಿಕೆಟ್ ಉತ್ಸಾಹ ಕಡಿಮೆ ಆಗುತ್ತಿದ್ದಂತೆ ಕ್ರಿಕೆಟ್‍ಗೆ ವಿದಾಯ ಹೇಳ್ತೀನಿ..! ಕ್ರಿಕೆಟ್ ಆಡಲು ದೇಹ ಸದೃಢವಾಗಿರೋ ವರೆಗೂ ನಾನು ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ತೀನಿ ಅಂತ ಹೇಳಿದ್ದಾರೆ.