ಡಿಸೆಂಬರ್ 1ರಿಂದ ರಿಲಯನ್ಸ್ ಕಮ್ಯುನಿಕೇಶನ್ ನ 2ಜಿ ಸೇವೆಗಳು ಸ್ಥಗಿತಗೊಳ್ಳಲಿವೆ..! ಇನ್ನೇನೆ ಇದ್ರು ರಿಲಯನ್ಸ್‍ನ 4 ಜಿ ಸೇವೆಗಳು ಮಾತ್ರ ಲಭ್ಯ..!
ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ 2 ಜಿ ಸೇವೆಯನ್ನು ಸ್ಥಗಿತಗೊಳಿಸಿ 4ಜಿ ಸೇವೆಯನ್ನು ಮಾತ್ರ ನೀಡಲು ನಿರ್ಧರಿಸಿದೆ. ಇದರಿಂದ 4 ಜಿ ಸೇವೆಯನ್ನೇ ಪಡೆಯುತ್ತಿರುವ ಗ್ರಾಹಕರಿಗೆ ತೊಂದರೆ ಏನಿಲ್ಲ. ಆದರೆ, 2 ಸೇವೆ ಪಡೀತಾ ಇರೋರು ಇತರ ನೆಟ್‍ವರ್ಕ ಪೂರೈಕೆದಾರ ಸಂಸ್ಥೆಗೆ ಬದಲಾಯಿಸಿಕೊಳ್ಳಬೇಕು. ಟ್ರಾಯ್ (ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ) ರಿಲಯನ್ಸ್ ಗ್ರಾಹಕರು ಇತರೆ ಸಂಸ್ಥೆಗಳಿಗೆ ಪೋರ್ಟ್ ಮಾಡಲು ಅರ್ಜಿಯನ್ನು ಸ್ವೀಕರಿಸುವಂತೆ ಸೂಚಿಸಿದ್ದು, ಯಾವುದೇ ಅರ್ಜಿಗಳನ್ನು ತಿರಸ್ಕರಿಸೋದಿಲ್ಲ ಎಂದು ತಿಳಿಸಿದೆ.