ಈ ವರ್ಷ ಕಿಚ್ಚನ ಟೀಂ ಕೂಡ ಬೆಂಗಳೂರಲ್ಲಿ ಆಡಲ್ಲ…!

Date:

ಸೆಲಬ್ರಿಟಿ ಕ್ರಿಕೆಟ್ ಲೀಗ್‍ಗೆ ದಿನಗಣನೆ ಆರಂಭವಾಗಿದೆ. ಸೆಲಬ್ರಿಟಿಗಳು ಕ್ರಿಕೆಟ್ ಆಡಲು ಸಿದ್ಧತೆ ನಡೆಸಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟರನ್ನು ಕ್ರಿಕೆಟ್ ಮೈದಾನದಲ್ಲಿ ನೋಡಲು ಕಾತುರದಿಂದ ಕಾಯ್ತಿದ್ದಾರೆ…!
ಆದರೆ, ಬೆಂಗಳೂರಲ್ಲಿ ಈ ವರ್ಷ ಸಿಸಿಎಲ್‍ನ ಯಾವುದೇ ಪಂದ್ಯಗಳು ನಡೆಯೋದಿಲ್ಲವಂತೆ…! ಎಲ್ಲಿಲ್ಲಿ ಯಾವ ಯಾವ ಸೆಲಬ್ರಿಟಿ ತಂಡಗಳ ನಡುವಿನ ಪಂದ್ಯಗಳು ನಡೆಯುತ್ತೆ ಎಂಬುದು ನಿರ್ಧಾರವಾಗಿದೆ.
ಕನ್ನಡದ ನಟರು ಮಾತ್ರವಲ್ಲದೆ ಬೇರೆ ಚಿತ್ರರಂಗದ ನಟರೂ ಕ್ರಿಕೆಟ್ ಪ್ರಾಕ್ಟಿಸ್ ಮಾಡ್ತಿದ್ದಾರೆ. ನಮ್ಮ ಕರ್ನಾಟಕ ತಂಡದ ಕ್ಯಾಪ್ಟನ್ ಕಿಚ್ಚ ಸುದೀಪ್ ಸಿನಿಮಾ ಮತ್ತು ಬಿಗ್‍ಬಾಸ್‍ನಲ್ಲಿ ಬ್ಯುಸಿ ಇದ್ದಾರೆ. ಬಿಡುವಿಲ್ಲದ ಸಮಯದಲ್ಲೂ ಕ್ರಿಕೆಟ್ ಪ್ರಾಕ್ಟಿಸ್ ಮಾಡ್ತಿದ್ದಾರೆ. ನಮ್ಮ ಕಿಚ್ಚನ ತಂಡದ ಸ್ಟಾರ್ ಆಟಗಾರ ಧ್ರುವ ಈಗ ನಮ್ಮೊಂದಿಗಲ್ಲ. ಅಕಾಲಿಕ ಮರಣವನ್ನಪ್ಪಿರೋ ಧ್ರುವ ಅವರ ಅನುಪಸ್ಥಿತಿಯಲ್ಲಿ ಕಿಚ್ಚನ ತಂಡ ಆಡಲಿದೆ.


ಇನ್ನು ಇನ್ನೋರ್ವ ಪ್ರಮುಖ ಆಟಗಾರ ಕಾರ್ತಿಕ್ (ಜೆಕೆ) ಬಿಗ್ ಬಾಸ್ ಮನೆಯಲ್ಲಿದ್ದಾರೆ. ಡಿಸೆಂಬರ್ 9ರಿಂದ 24ರವರೆಗೆ ಸಿಸಿಎಲ್ ನಡೆಯಲಿದೆ. ಹೈದರಾಬಾದ್ , ರಾಜ್‍ಕೋಟ್, ಚಂಡಿಘಡ, ಕೊಯಮತ್ತೂರು ಮತ್ತು ಮೈಸೂರಿನಲ್ಲಿ ಪಂದ್ಯಗಳು ನಡೆಯಲಿವೆ. ಈ ವರ್ಷ ಅರಮನೆ ನಗರಿ ಮೈಸೂರಲ್ಲಿ ಪಂದ್ಯ ನಡೆಯುವುದರಿಂದ ಬೆಂಗಳೂರಲ್ಲಿ ಪಂದ್ಯಗಳು ನಡೆಯಲ್ಲ. ಆದ್ದರಿಂದ ಬೆಂಗಳೂರಲ್ಲಿ ನಮ್ಮ ಕಿಚ್ಚನ ತಂಡದ ಆಟವನ್ನು ಸವಿಯುವ ಭಾಗ್ಯವಿಲ್ಲ. ಮೈಸೂರಿಗೇ ಹೋಗಬೇಕು. ಡಿಸೆಂಬರ್ 13 ಮತ್ತು 14ರಂದು ಮೈಸೂರಲ್ಲಿ ಪಂದ್ಯ ನಡೆಯಲಿದೆ.

Share post:

Subscribe

spot_imgspot_img

Popular

More like this
Related

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಅಟ್ಟಹಾಸ: ಕ್ಷುಲ್ಲಕ ಕಾರಣಕ್ಕೆ ಸಹಾಯಕ ಜೈಲರ್ ಮೇಲೆ ಹಲ್ಲೆ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಅಟ್ಟಹಾಸ: ಕ್ಷುಲ್ಲಕ ಕಾರಣಕ್ಕೆ ಸಹಾಯಕ ಜೈಲರ್...

ಬಿಗ್ ಬಾಸ್ ಕನ್ನಡ ಸೀಸನ್ 12: ಗಿಲ್ಲಿ–ಅಶ್ವಿನಿ ಮಧ್ಯೆ ಟೈಟ್ ಫೈಟ್, ಫೈನಲ್ ಗೆಲುವಿಗೆ ಕುತೂಹಲ

ಬಿಗ್ ಬಾಸ್ ಕನ್ನಡ ಸೀಸನ್ 12: ಗಿಲ್ಲಿ–ಅಶ್ವಿನಿ ಮಧ್ಯೆ ಟೈಟ್ ಫೈಟ್,...

ಕಿತ್ತಳೆ ಹಣ್ಣು ತಿಂದು ಸಿಪ್ಪೆ ಬೀಸಾಕೋ ಅಭ್ಯಾಸವಿದ್ರೆ ಈಗ್ಲೆ ಬಿಟ್ಟುಬಿಡಿ; ಇದರಲ್ಲೂ ಅಡಗಿದೆ ನಾನಾ ಲಾಭಗಳು!

ಕಿತ್ತಳೆ ಹಣ್ಣು ತಿಂದು ಸಿಪ್ಪೆ ಬೀಸಾಕೋ ಅಭ್ಯಾಸವಿದ್ರೆ ಈಗ್ಲೆ ಬಿಟ್ಟುಬಿಡಿ; ಇದರಲ್ಲೂ...

ಲಂಚ ಪಡೆಯುವಾಗ ಎಫ್ ಡಿಎ ಲೋಕಾಯುಕ್ತ ಬಲೆಗೆ!

ಲಂಚ ಪಡೆಯುವಾಗ ಎಫ್ ಡಿಎ ಲೋಕಾಯುಕ್ತ ಬಲೆಗೆ! ಕಲಬುರಗಿ: ಜಿಲ್ಲೆಯ ಕಮಲಾಪುರ ತಹಶಿಲ್ದಾರ್...