ತೀವ್ರ ವಿರೋಧದದ ನಡುವೆಯೂ ರಾಜ್ಯ ಸರ್ಕಾರ ಬಿಗಿ ಬಂದೋ ಬಸ್ತಿನಲ್ಲಿ ಟಿಪ್ಪು ಜಯಂತಿ ಆಚರಿಸ್ತಾ ಇದೆ..! ಮಡಿಕೇರಿ ಒಳಗೊಂಡಂತೆ ರಾಜ್ಯದ ನಾನಾ ಕಡೆಗಳಲ್ಲಿ ಪ್ರತಿಭಟನೆಯ ಕಾವು ಹೆಚ್ಚಿದೆ.
ಮಡಿಕೇರಿ ತಾಲೂಕಿನ ಗಾಳಿಬೀಡು ಬಳಿ ಕಾಲೂಕು ಕಟ್ಟೆಕಲ್ಲು ಎಂಬಲ್ಲಿ ಕಿಡಿಗೇಡಿಗಳು ್ಲ ಕೆಎಸ್‍ಆರ್‍ಟಿಸಿ ಬಸ್‍ವೊಂದರ ಮೇಲೆ ಕಲ್ಲು
ತೂರಾಟ ನಡೆಸಿದ್ದಾರೆ. ಇದೆರಿಂದ ಮುಂಭಾಗದ ಗ್ಲಾಸ್ ಮತ್ತು ಬದಿಯ ಎರಡು ಗ್ಲಾಸ್‍ಗಳು ಪುಡಿಯಾಗಿವೆ.
ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಮುಂದಾಗಿದ್ದು, ಶಾಸಕ ಅಪ್ಪಚ್ಚುರಂಜನ್ , ವಿಧಾನಪರಿಷತ್ ಸದಸ್ಯ ಸುನೀಲ್ ಸುಬ್ರಹ್ಮಣಿ ಅವರನ್ನು ಬಂಧಿಸಿದ್ದಾರೆ. ಹಿಂದೂ ಸಂಘಟನೆಯ ಅನೇಕ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.