ನಟ ಸೃಜನ್ ಲೋಕೇಶ್ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ನಡೆಸಿಕೊಡ್ತಿದ್ದ ‘ಮಜಾ ಟಾಕೀಸ್’ ಮತ್ತೆ ಶುರುವಾಗಲಿದೆ…! ಆದರೆ, ಕರ್ನಾಟಕದಲ್ಲಲ್ಲ.. ವಿದೇಶದಲ್ಲಿ…!
ಹೌದು ಮಜಾ ಟಾಕೀಸ್ ಕಾರ್ಯಕ್ರಮ ನಿಂತಿದೆ. ಇದರ ಜಾಗದಲ್ಲಿ ಪ್ರಸಾರವಾಗ್ತಿರೋ ಕಾಮಿಡಿ ಟಾಕೀಸ್ ಕಾರ್ಯಕ್ರಮ ಮಜಾ ಟಾಕೀಸ್‍ಗೆ ಹೋಲಿಸಿದ್ರೆ ತುಂಬಾ ಸಪ್ಪೆ…! ಮತ್ತೆ ಮಜಾ ಟಾಕೀಸ್ ನಡೆಸಬೇಕು ಎಂದು ವೀಕ್ಷಕರು ಒತ್ತಾಯ ಮಾಡ್ತಿದ್ದಾರೆ..!
ಈ ನಡುವೆ ಮಜಾ ತಂಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಮಜಾ ಟಾಕೀಸ್ ಮತ್ತೆ ಆರಂಭವಾಗಲಿದ್ದು, ಈ ಕಾರ್ಯಕ್ರಮವನ್ನು ಮಿಸ್ ಮಾಡಿಕೊಂಡಿರೋ ವಿದೇಶದಲ್ಲಿನ ಕನ್ನಡಿಗರಿಗಾಗಿ ವಿದೇಶದಲ್ಲೇ ಕಾರ್ಯಕ್ರಮ ನಡೆಯಲಿದೆ.
ಮಜಾಟಾಕೀಸ್ ತಂಡ ಈಗಾಗಲೇ ಆಸ್ಟ್ರೇಲಿಯಾದಲ್ಲಿದ್ದು, ಇಂದು ಸೃಜನ್ ಲೋಕೇಶ್ ಆಸ್ಟ್ರೇಲಿಯಾದಲ್ಲಿ ಮಜಾ ಟಾಕೀಸ್ ನಿರೂಪಣೆ ಮಾಡ್ತಿದ್ದಾರೆ. ನವೆಂಬರ್ 12ರಂದು ಪರ್ತ್‍ನಲ್ಲಿ ಕಾರ್ಯಕ್ರಮ ನಡೆಯಲಿದೆ ಈಗಾಗಲೇ ನವೆಂಬರ್ 4 ಮತ್ತು 5ರಂದು ಸಹ ಮಜಾಟಾಕೀಸ್ ನಡೆದಿತ್ತು. ಮುಂದಿನ ದಿನಗಳಲ್ಲಿ ಬೇರೆ ದೇಶಗಳಲ್ಲೂ ನಡೆಯಲಿದೆ.