ಪ್ರಜ್ವಲ್ ದೇವರಾಜ್ ಚೌಕ ಸಿನಿಮಾದಲ್ಲಿ ಪೊಲೀಸ್ ಡ್ರೆಸ್‍ನಲ್ಲಿ ಮಿಂಚಿದ್ದರು..! ಇದೀಗ ಮತ್ತೆ ಪೊಲೀಸ್ ಖದರ್‍ನಲ್ಲಿ ಸದ್ದು ಮಾಡಲು ರೆಡಿಯಾಗಿದ್ದಾರೆ ಡೈನಾಮಿಕ್ ಪ್ರಿನ್ಸ್…!
ಚೌಕ ಸಿನಿಮಾದ ಬಳಿಕ ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ಳದ ಪ್ರಜ್ವಲ್ ಅವರನ್ನು ಅಭಿಮಾನಿಗಳು ಮತ್ತೆ ಪೊಲೀಸ್ ಪಾತ್ರದಲ್ಲಿ ನೋಡಬಹುದು. ಆದರೆ, ಈ ಸಿನಿಮಾದಲ್ಲಿ ಪ್ರಜ್ವಲ್ ಕೆಂಪೇಗೌಡ ಸುದೀಪ್ ಅಲ್ಲ.. ! ದಬಾಂಗ್ ಸಲ್ಮಾನ್ ಖಾನ್…!
ಹೌದು, ಪವನ್ ಒಡೆಯರ್ ಅವರ ಜೊತೆ ಕೆಲಸ ಮಾಡಿದ ಅನುಭವವಿರೋ ನರಸಿಂಹ ನಿರ್ದೇಶದ ಚಿತ್ರದಲ್ಲಿ ಪ್ರಜ್ವಲ್ ನಟಿಸಲಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಪುಷ್ಪಕ ವಿಮಾನ ನಿರ್ಮಾಣ ತಂಡವೇ ಬಂಡವಾಳ ಹಾಕಲಿದೆಯಂತೆ…!ನಾಯಕಿಯ ಹುಡುಕಾಟ ನಡೆಯುತ್ತಿದ್ದು, ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದೆ ಎಂದು ಹೇಳಲಾಗ್ತಿದೆ. ಚಿತ್ರದಲ್ಲಿ ದಬಾಂಗ್‍ನ ಸಲ್ಮಾನ್ ಖಾನ್ ಅವರಂತೆ ಕಾಮಿಕ್ ಪೊಲೀಸ್ ಅಥವಾ ಫನ್ ಕಾಪ್ ಪಾತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ಕಾಣಿಸುತ್ತಾರಂತೆ…!