ಬಾರ್ಬಿ ಡಾಲ್ ನಿವೇದಿತಾ ಗೌಡಗೆ ಎಂಥಾ ಹುಡುಗ ಇಷ್ಟವಾಗ್ತಾನಂತೆ? ಈಕೆಯನ್ನು ಮದುವೆ ಆಗುವ ಹುಡುಗ ಹೇಗಿರಬೇಕಂತೆ ಗೊತ್ತಾ..? ನಿವೇದಿತ ತನ್ನ ಹುಡಗ ಹೇಗಿರಬೇಕು ಎಂದು ಬಿಗ್ ಬಾಸ್‍ಮನೆಯಲ್ಲಿ ಹೇಳಿಕೊಂಡಿದ್ದಾಳೆ.
ಕನ್ನಡ ಬಿಗ್ ಬಾಸ್‍ನ ಅತ್ಯಂತ ಕಿರಿಯ ಸ್ಪರ್ಧಿ ನಿವೇದಿತಾ ಗೌಡ. ಬಿಗ್ ಬಾಸ್ ಮನೆಯ ಮುದ್ದುಮಗಳು. ಆದರೆ, ಈಗ ಅನಗತ್ಯವಾಗಿ ಕೆಲವು ಸ್ಪರ್ಧಿಗಳು ಈಕೆ ಬಗ್ಗೆ ಗುಸು ಗುಸು ಮಾತಾಡ್ತಾ ಇದ್ದಾರೆ. ಅದೇನೇ ಇದ್ದರೂ ನಿವೇದಿತಾ ಅವಳಾಗಿಯೇ ಇದ್ದಾಳೆ. ಇವತ್ತು ತನ್ನನ್ನು ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ದಿವಾಕರ್, ಜೆಕೆ, ಜಗನ್ ಜೊತೆ ಮಾತನಾಡುವಾಗ ಮನಬಿಚ್ಚಿ ಹೇಳಿದ್ದಾಳೆ..!
ಈಕೆಯನ್ನು ಮದುವೆ ಆಗುವ ಹುಡುಗ ತುಂಬಾನೇ ಪ್ರೀತಿಸಬೇಕಂತೆ. ಈಕೆಗೆ ಹೆಚ್ಚು ಸಮಯ ನೀಡಬೇಕಂತೆ. ಯಾರಿಗೂ ಇಲ್ಲಿಯವರೆಗೂ ಮುತ್ತು ಕೊಟ್ಟಿರಬಾರದಂತೆ, ಯಾರಿಂದಲೂ ಮುತ್ತು ತೆಗೆದುಕೊಂಡಿರಬಾರದಂತೆ..! ತನಗಿಂತ ಸ್ವಲ್ಪ ಎತ್ತರವಾಗಿರಬೇಕಂತೆ. ಸಂಜೆ ಬೇಗ ಮನೆಗೆ ಬರಬೇಕಂತೆ. ಹೀಗೆ ತನ್ನ ಕನಸಿನ ಹುಡುಗನ ಬಗ್ಗೆ ಹೇಳಿಕೊಂಡಿದ್ದಾಳೆ.