ಸಿನಿಮಾ ನಟ-ನಟಿಯರು ಡ್ರೆಸ್‍ಗೆ ಹೆಚ್ಚು ಆದ್ಯತೆ ನೀಡ್ತಾರೆ..! ತೊಟ್ಟ ಬಟ್ಟೆ ಮತ್ತೆ ರಿಪೀಟ್ ಆಗದಂತೆ ನೋಡಿಕೊಳ್ತಾರೆ. ಆದ್ದರಿಂದ ಇವರಲ್ಲಿ ವಿವಿಧ ರೀತಿಯ ಅನೇಕ ಬಟ್ಟೆಗಳ ಸಂಗ್ರಹವಿರುತ್ತೆ…! ಹಾಗಾಗಿ ನಮ್ಮ ಕನ್ನಡದ ನಟಿಯರು ತಮ್ಮ ಬಟ್ಟೆಗಳನ್ನು ಮಾರಾಟಕ್ಕಿಡಲು ನಿರ್ಧರಿಸಿದ್ದಾರೆ.
ತಮ್ಮ ವಾರ್ಡ್ ರೋಬ್ ಅನ್ನು ತೆರೆದಾಗ ರಾಶಿ ರಾಶಿ ಬಟ್ಟೆಗಳನ್ನು ಕಂಡ ನಟಿ ಶ್ರುತಿ ಹರಿಹರನ್‍ಗೆ ಬಟ್ಟೆ ಮಾರಾಟದ ಐಡಿಯಾ ಬಂತಂತೆ..! ಈ ಬಗ್ಗೆ ಇತರೆ ನಟಿಯರ ಜೊತೆ ಮಾತಾಡಿದಾಗ ಅವರಿಂದಲೂ ಪಾಸಿಟೀವ್ ರೆಸ್ಪಾನ್ಸ್ ಬಂದಿದೆ. ಆದ್ದರಿಂದ ಎಲ್ಲಾ ನಟಿಯರು ಸೇರಿ ತಮ್ಮ ಬಟ್ಟೆಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ..!
ನಟಿಯರ ಬಟ್ಟೆ ಖರೀದಿಸ ಬಯಸುವವರು https://insider.in/the-vanity-trunk-sale-nov12-2017/event ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ನವೆಂಬರ್ 12ರಂದು (ನಾಳೆ) ಬೆಳಗ್ಗೆ 11 ಗಂಟೆಯಿಂದ ಸಂಜೆ 5ಗಂಟೆವರೆಗೆ ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿರೋ ಬಿ ಹೈವ್ ವರ್ಕ್ ಶಾಪ್‍ನಲ್ಲಿ ಮಾರಾಟ ನಡಯಲಿದೆ.
ನಟಿಯರು ಬಟ್ಟೆ ಮಾರಾಟ ಮಾಡಿ ಬರೋ ದುಡ್ಡಲ್ಲಿ ಹೊಸ ಬಟ್ಟೆ ಖರೀದಿಸಲ್ಲ..! ಬಟ್ಟೆ ಮಾರಾಟದಿಂದ ಬಂದ ಹಣವನ್ನು ಎನ್‍ಜಿಒಗಳಿಗೆ ಕೊಡ್ತಾರೆ.
ಶ್ರುತಿ ಹರಿಹರನ್ ಅವರಲ್ಲದೆ ಸಂಯುಕ್ತಾ ಹೆಗ್ಡೆ, ಮೇಘನಾ ಗಾಂವ್ಕರ್, ಶಾನ್ವಿ ಶ್ರೀವಾತ್ಸವ್, ಶ್ರದ್ಧಾ ಶ್ರೀನಾಥ್, ಸಂಗೀತಾ ಭಟ್, ಸೋನುಗೌಡ, ಮಾನ್ವಿತಾ ಹರೀಶ್, ಸಂಯುಕ್ತಾ ಹೊರನಾಡು, ಕಾವ್ಯಾ ಶೆಟ್ಟಿ, ಪ್ರಜ್ಞಾ, ಸಂಗೀತಾ ಭಟ್, ಸೋನುಗೌಡ, ಮೇಘನಾ ರಾಜ್, ರಾಜಶ್ರೀ ಪೊನ್ನಪ್ಪ, ನೀತು ಶೆಟ್ಟಿ, ಸಚಿನಾ ಹೆಗ್ಗಾರ್ ಸಹ ಬಟ್ಟೆ ಮಾರಾಟಕ್ಕಿಟ್ಟಿದ್ದಾರೆ.