ಕನ್ನಡ ಬಿಗ್‍ಬಾಸ್ ಸೀಸನ್ 5ರ ನಾಲ್ಕನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ. ನಟಿ ತೇಜಸ್ವಿನಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ..!
ಮೊದಲ ಎರಡು ವಾರದಲ್ಲಿ ಸತತ ಇಬ್ಬರು ಜನಸಾಮಾನ್ಯರು (ಸುಮಾ, ಮೇಘನಾ) ಎಲಿಮಿನೇಟ್ ಆಗಿದ್ದರು. ಮೂರನೇವಾರದ ನಿರ್ದೇಶಕ ದಯಾಳ್ ಪದ್ಮನಾಭನ್ ಎಲಿಮಿನೇಟ್ ಆಗಿದ್ದರು. ಈ ವಾರ ತೇಜಸ್ವಿನಿ ಅವರ ಬಿಗ್ ಬಾಸ್ ಪಯಣ ಕೊನೆಯಾಗಿದೆ. ಈ ಮೂಲಕ ಇಬ್ಬರು ಸೆಲಬ್ರಿಟಿಗಳು ಮತ್ತು ಇಬ್ಬರು ಜನಸಾಮಾನ್ಯ ಸ್ಪರ್ಧಿಗಳು ಬಿಗ್‍ಬಾಸ್ ಮನೆಯಿಂದ ಹೊರಬಂದಿದ್ದಾರೆ.
ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಮೊನ್ನೆ ಬಿಗ್‍ಬಾಸ್ ಮನೆಯಿಂದ ಹೊರಹೋಗಿದ್ದ ತೇಜಸ್ವಿನಿ ನಿನ್ನೆ ವಾಪಸ್ಸು ಮರಳಿದ್ದರು. ಇವತ್ತು ಎಲಿಮಿನೇಟ್ ಆಗಿ ಹೊರ ನಡೆದಿದ್ದಾರೆ.