No menu items!
19.2 C
Munich
Friday, May 22, 2026

ದಿಗಂತ್ ನನ್ನ ಪ್ರಾಣ ಎಂದ ಐಂದ್ರಿತಾ ರೈ…!

Must read

ನಟಿ ಐಂದ್ರಿತಾ ರೈ ದಿಗಂತ್ ನನ್ನ ಪ್ರಾಣ ಅಂತ ಹೇಳಿದ್ದಾರೆ…! ಇದು ಯಾವುದೇ ಗಾಳಿ ಸುದ್ದಿಯಲ್ಲ..! ಸ್ವತಃ ಐಂದ್ರಿತಾ ರೈ ಅವರೇ ಹೇಳಿದ ಮಾತು..!


ಅಕುಲ್ ಬಾಲಾಜಿ ನಡೆಸಿಕೊಡುವ ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ ದಿಗಂತ್ ತನಗೇನಾಗಬೇಕು ಎಂದು ಮುಕ್ತವಾಗಿ ಹೇಳಿದ್ದಾರೆ.
ಅಕುಲ್ ಅವರು ಹೇಳಿದ ಸೆಂಟೆನ್ಸ್ ಅನ್ನು ಐಂದ್ರಿತಾ ಸರಿಯಾದ ಉತ್ತರದಿಂದ ಪೂರ್ಣಗೊಳಿಸಬೇಕಿತ್ತು. ಇದರಲ್ಲಿ ಅಕುಲ್, ದಿಗಂತ್ ನನ್ನ—– ಎಂದರು. ಅದಕ್ಕೆ ಉತ್ತರಿಸಿದ ಐಂದ್ರಿತಾ ಪ್ರಾಣ ಎಂದು ಹೇಳಿದರು. ಅಷ್ಟೇ ಅಲ್ಲ..ತಮಾಷೆ ಮಾಡುತ್ತಾ, ನಗುನಗುತ್ತಾ ದಿಗಂತ್ ನನ್ನ ಬಾಯ್‍ಫ್ರೆಂಡ್ ಅಂತ ಹೇಳಿಕೊಂಡಿದ್ದಾರೆ.


ರಮ್ಯಾ ಮತ್ತು ನೀವು ಒಂದು ಕಾಲದಲ್ಲಿ ಕ್ಲೋಸ್ ಫ್ರೆಂಡ್ಸ್ ಆಗಿದ್ರಿ, ಈ ನಡುವೆ ನಿಮ್ಮ ಸ್ನೇಹ ಮೊದಲಿನಂತಿಲ್ಲ ಎಂದು ಅಕುಲ್ ಐಂದ್ರಿತಾ ಅವರನ್ನು ಕೇಳಿದರು. ಅದಕ್ಕೆ ಇತ್ತೀಚೆಗೆ ಅಲ್ಲ, ಬಹುಕಾಲದಿಂದ ನಮ್ಮ ಸ್ನೇಹ ಉಳಿದಿಲ್ಲ ಎಂದು ಐಂದ್ರಿತಾ ಹೇಳಿದರು. ಅಷ್ಟೇ ಅಲ್ಲ ನಾನು ರಮ್ಯಾ ಅವರ ಮೇಲೆ ನಂಬಿಕೆ ಇಟ್ಟಿದ್ದೆ, ಅದನ್ನು ಅವರು ಉಳಿಸಿಕೊಳ್ಳಲಿಲ್ಲ ಎಂದು ಹೇಳಿಕೊಂಡರು. ನಿಮ್ಮ ನಡುವಿನ ಸ್ಪರ್ಧೆ ಇದಕ್ಕೆಲ್ಲ ಕಾರಣವೇ ಎಂದು ಕೇಳಿದಾಗ, ಹಾಗೇನು ಇಲ್ಲ, ಅವರು ನನಗೆ ಸೀನಿಯರ್ ಆರ್ಟಿಸ್ಟ್ ಎಂದು ಐಂದ್ರಿತಾ ಹೇಳಿದರು.

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article