ಆ ಭಾನುವಾರ ಮೆಸೇಜ್ ಕಳುಹಿಸಿದ್ದ ಅವನು ಮತ್ತೆ ಮತ್ತೆ ಮೆಸೇಜ್ ಮಾಡ್ತಿದ್ದಾನೆ…!

Date:

ಅವತ್ತು ಕಾಲೇಜು, ಕೆಲಸ ಅಂತ ಯಾವುದೇ ಟೆನ್ಷನ್ ಇಲ್ದೆ ಸಂಡೇ ನನ್ನ ಡೇ…ಲೇಜಿ ಡೇ ಅಂತ ಆರಾಮ್ಸೇ ಮಲಗದವಳಿಗೆ ಎಚ್ಚರವಾದಾಗ ಬೆಳಗಿನ 10 ಗಂಟೆ…! ಎದ್ದ ತಕ್ಷಣ ಖಂಡಿತ ದೇವರ ಫೋಟೋ ನೋಡೋ ಜಾಯಮಾನ ನನ್ನದಲ್ವೇ ಅಲ್..! ಮೊದ್ಲು ನೋಡಿದ್ದು ನನ್ನ ಪ್ರೀತಿಯ ಮೊಬೈಲ್ ಅನ್ನು..!

ಡೇಟಾ ಆನ್ ಮಾಡಿ‌ ವಾಟ್ಸಪ್ ಮೆಸೆಜಗಳು ನೋಡ್ತಿದ್ದೆ, ಅದೇ ಸಮಯಕ್ಕೆ ಸರಿಯಾಗಿ ಫೇಸ್‌ಬುಕ್‌ ಮೆಸೆಂಜರ್ ನಲ್ಲಿ ಅನ್ನೌನ್ ಪರ್ಸನ್ನಿಂದ ಒಂದ್ ಮೆಸೇಜ್ ಬಂದಿತ್ತು. ಮೆಸೆಜ್ ಓದ್ದಾಗ ಗೊತ್ತಾಗಿದ್ದು, ಅದ್ಯಾವದೋ ಕಮ್ಯೂನಿಟಿ ಪೇಜಲ್ಲಿ ಪರಿಚಯ ಗೊಂಡ ವ್ಯಕ್ತಿ ತಮ್ಮ‌ಪರಿಚಯಿಸಿಕೊಂಡು ಮೆಸೆಜ್ ಹಾಕಿದ್ದು..! ಈ ರೀತಿ ಫೇಸ್‌ಬುಕ್‌ ನಲ್ಲಿ ಅಪರಿಚಿತ ವ್ಯಕ್ತಿಗಳಿಂದ ಸುಮಾರು ಮೆಸೇಜ್ ಗಳು ಬಂದರೆ ಅದನ್ನ ಇಗ್ನೋರ್ ಮಾಡೋದು ಇಲ್ವ ಬ್ಲಾಕ್ ಮಾಡೋ ಪರಿಪಾಠ ನಂದು. ಆದ್ರೆ ಯಾಕೋ ಆ ವ್ಯಕ್ತಿ ಮೆಸೇಜ್ ಮೂಲಕ ಸಂಧಿಸಿದ ರೀತಿ ಮಾತ್ರ ಅದಕ್ಕೆ ರಿಪ್ಲೈ ಮಾಡೋ ಹಾಗೆ ಮಾಡಿತ್ತು..!ಹಾಯ್ ಅಂತ ರಿಪ್ಲೇ ಮಾಡ್ದೆ..! ಆದ್ರೆ, ಕಣ್ಣುಜ್ಕೊಂಡು ಎದ್ದವಳಿಗೆ ಹೊಟ್ಟೆತಾಳ ಹಾಕ್ತ ಇತ್ತು. ಡೇಟಾ ಆಫ್ ಮಾಡಿ ಫ್ರಶ್ ಆಗಿ ಹೊಟ್ಟೆಪೂಜೆ ಮಾಡ್ಕೊಂಡು  ಮತ್ತೆ ಮೊಬೈಲ್ ಹಿಡದಾಗ ಮಧ್ಯಾಹ್ನ 1 ಗಂಟೆ ಆಗಿರಬಹುದು..! ಮತ್ತೆ ಫೇಸ್‌ಬುಕ್‌ ನಿಂದ ಅದೇ ವ್ಯಕ್ತಿಯ ಮೆಸೇಜ್ ಕಮ್ಯೂನಿಟಿ ಪೇಜಲ್ಲಿ ನೋಡಿದ್ದೆ..! ಸೋ, ನೀವೇನ್ ಮಾಡ್ಕೊಂಡಿದೀರ ಅಂತೆ ಕನ್ವರ್ಸೆಶನ್ಗಳ ಚಾಟಿಂಗ್ ಶುರು ಆಗಿತ್ತು…!

ಅವನು ಶಾನ್ ಅಂತ, ಟೆಕ್ಕಿ. ನಿತ್ಯ ಇಂಗ್ಲಿಷು, ಹಿಂದಿ ನೋಡಿದ ಹುಡ್ಗನಿಗೆ, ನನ್ನ ಕನ್ನಡ ಭಾಷೆಯ ಟೈಪಿಂಗ್ ಬಗ್ಗೆ ಇಷ್ಟ ಆಗಿ ಎಕ್ಪ್ರೆಸ್ ಮಾಡ್ದ, ಸಂಡೇ ಲೇಜಿ ಡೇ ಶಾನ್ ಗೂ ಕೂಡ ಅಂತ ತಿಳ್ಕೊಳಕೆ ಜಾಸ್ತಿ ಟೈಮ್ ಏನ್ ಹಿಡಿಲಿಲ್ಲ ನನಗೂ..ಹಿಂಗೆ ಗಂಟೆ ಗಟ್ಟಲೆ ಚಾಟಿಂಗ್ ಮಾಡಿ, ಪರಿಚಯ ಅದು ಇದು ಅಂತ ಮುಗಿಸಿ ಇಬ್ಬರೂ ಮತ್ತೆ ಸಿಗೋಣ ಅಂತ ಆಫ್ಲೈನ್ಗೆ ಹೋಗಿದ್ವಿ..!

ಮೊಬೈಲ್ ಇಟ್ಟು ಸಂಜೆ ಫ್ರೆಂಡ್ಸ್ ಜೊತೆ ಶಾಪಿಂಗ್ ರೆಡಿಯಾಗಿದ್ದೆ. ಆಮೇಲೆ ಶಾನ್ ಸೂರ್ಯ ಹುಟ್ಟಿದ ಎರಡು-ಮೂರು ಗಂಟೆಗೆ ಆಫೀಸ್ ಹೋದ್ರೆ ಬರೋದು ಚಂದ್ರ ಮತ್ತೆ ಆಕಾಶಕ್ಕೆ ಏಣಿ ಹಾಕದಾಗಲೇ… ! ನಂದು ಅಸೈನ್ಮೆಂಟ್,‌ಕ್ಲಾಸಸ್ ಅಂತ ಬೆಳಗ್ಗೆ ಹೋದ್ರೆ ಸಂಜೆ ಸೂರ್ಯ ತಣ್ಣಗಾದ ಮೇಲೆನೇ..! ಹಿಂಗೆ ಇಬ್ಬರ ಲೈಫು ಬಿಜಿ ನಿತ್ಯ ಡೇ ಆ್ಯಂಡ್ ನೈಟ್ ವಿಶಸ್ ಮಾತ್ರ  ವಾರಗಳವರೆಗೆ ನಡೆದವು ಅಷ್ಟೇ..

ಈ ಮೆಸೇಜ್ ಗಳಿಗೆ ಟೈಮ್ ಸಿಗಲ್ಲ ಅನ್ಕೊಂಡು ಮಧ್ಯೆ ಒಂದ್ಸಾರಿ ಶಾನ್ ನನ್ನ ಕಾಂಟ್ಯಾಕ್ಟ್ ನಂಬರ್ ಕೇಳಿದ, ಊಹು ಇಷ್ಟ ಬೇಗ ಅನ್ನೌನ್ ವ್ಯಕ್ತಿಗೆ ನಂಬರ್ ಕೊಡೋದು ಅಂದ್ರೆ ಪ್ಲೀಸ್ ಅರ್ಥಮಾಡ್ಕೋತಿರ ಅನ್ಕೊಂಡಿದೀನಿ ಅಂದೆ. ಯಸ್ ಅಷ್ಟೇ ಶಾನ್ ಕೂಡ ಸರಿ ಐ ಅಂಡರಸ್ಟ್ಯಾಂಡ್. ಪರವಾಗಿಲ್ಲ ಫ್ರೀ ಇದ್ದಾಗ ಮೆಸೇಜ್ ಮಾಡು ಮೆಸೆಂಜರನಲ್ಲಿ ಅಂತ ನಯವಾಗಿ ಹೇಳಿದ್ದ…!

ನಂತರ ಫ್ರೀ ಟೈಮಲ್ಲಿ ಆಗಾಗ ಮೆಸೆಜ್ ಶುರು ಆದ್ವು. ಇಬ್ಬರ ಅಭಿರುಚಿ, ಆಸಕ್ತಿ,ಕಾಲಜ್ ಲೈಫ್‌, ಫ್ಯಾಮಿಲಿ ಸದಸ್ಯರ ಬಗ್ಗೆ ಎಲ್ಲ ಮಾತುಕತೆಗಳು ನಡದವು..ಸೋ ಈಗ ಸ್ನೇಹ ಸಂಬಂಧ ಒಂದ ಹಂತಕ್ಕೆ ಮುಂದುವರೆದಿತ್ತು.. ಆಗಲೇ ಶಾನ್ ಮತ್ತೆ ಕಾಂಟ್ಯಾಕ್ಟ್ ನಂಬರ್ ಕೇಳಿದ್ದು…! ಈ ಸಾರಿ ಕೊಡಲಿಕ್ಕೆ ಮನಸ್ಸು ಒಪ್ಪಿತ್ತು. ಆದ್ರೆ, ಸ್ವಲ್ಪ ಆಟ ಆಡಿಸೋಣ ಅನ್ಕೊಂಡು ನನ್ನ ಕಾಂಟ್ಯಾಕ್ಟ್ ನಂಬರ್ ಎರಡು ಡಿಜಿಟ್ ಬಿಟ್ಟು  ಉಳಿದ ಎಂಟು ನಂಬರ್ ಕಳುಹಿಸಿ, ಮನದಲ್ಲಿ ಅವನೆಷ್ಟ ಜನಕ್ಕೆ ಕಾಲ್ ಮಾಡಿ ಊಗಿಸ್ಕೋಬಹುದು? ಇವಾಗ್ಲೇ ಕಾಲ್ ಟ್ರೈ ಮಾಡಬಹುದು?, ಅಂತ ಯೋಚಿಸಿ ಒಂದು ದಿನ ಟೈಮ್ ಕೊಡ್ತೀನಿ ಅಂತ ಚಾಲೆಂಜ್ ಮಾಡದೆ. ಆದ್ರೆ ಶಾನ್ ಹಂಗೆ ಹೇಳಿದ ಐದೇ ನಿಮಿಷದಲ್ಲಿ ಒಂದ ಡಿಜಿಟ್ ಕಳುಹಿಸಿ ಈ ನಂಬರ್ ಅಂತೂ 100% ಸರಿ ಇದೆ..! ಸೋ ಕನ್ಫರ್ಮ ಮಾಡು,ನೀ ಆ ನಂಬರ್ ಅಲ್ಲ ಅಂತ ಒಪ್ಕೊಂಡ್ರೆ ಖಂಡಿತ ಜೀವನದಲ್ಲಿ ಕಾಂಟ್ಯಾಕ್ಟ್ ಮಾಡಲ್ಲ ಅಂದ..!

ಯಸ್ , ಅದು ಕರೆಕ್ಟ್ , ಬಟ್ ಇಷ್ಟು ಬೇಗ ಅದು ಅಷ್ಟು ಕನ್ಫರ್ಮ ಆಗಿ ಹೆಂಗೇ ಅಂತ ಶಾಕ್ ಆಗಿ, ತೋರಸದೆ ಇನ್ನೊಂದು ನಂಬರ್ ಬೇಕಲ್ವ ಇನ್ನೂ ಅಂತ ಯೋಚನೆ ಮಾಡಿ,ನಂಬರ್ ಕನ್ಫರ್ಮ ಮಾಡ್ದೆ,ಅಷ್ಟೇ ನೆಕ್ಸ್ಟ್ ಕ್ಷಣಕ್ಕೆ ಶಾನ್ ಕಾಲ್ ಬಂದಿತ್ತು..! ನಾನ್ ಶಾಕ್ ಆಗಿದ್ದೇ ಇರೋ ಬರೋ ಅಪ್ಲಿಕೇಷನ್ ಗಳಿಂದ ಗೊತ್ತಾಗಬಾರದ ರೀತೀಲಿ ನನ್ನ ನಂಬರ್ ಹೈಡ್ ಮಾಡಿಟ್ಟೋಳಗೆ ಇದು ಹೆಂಗ್ ಸಾಧ್ಯ ಅಂತ ಶಾನ್ ಕೇಳ್ದೆ ಸ್ವಲ್ಪ ದಿನಾ ನನ್ನ ಆಟ ಆಡ್ಸಿ ಶಾನ್ ನನ್ನ ನಂಬರ್ ಕನ್ಫರ್ಮ ಮಾಡಿದ್ದು, ಆ ಕಮ್ಯೂನಿಟಿ ಪೇಜಲ್ಲಿ ಡಿಸ್ ಪ್ಲೇ ಆಗೋ ಮೊದಲ ಮೂರು ಸಂಖ್ಯೆ ಬಗ್ಗೆ ಹೇಳದಾಗ..ಅಯ್ಯೋ!!ಅದೊಂದ ಮರತೆಬಿಟ್ಟಿದ್ದೆ ಅಂತ ಆಟ ಆಡಸೋಣ ಅಂದವಳಿಗೆ ಶಾನ್ ಸ್ಮಾರ್ಟ್ಲಿ ಹ್ಯಾಂಡಲ್ ಮಾಡಿದ್ದ. ಆದಾದ ಮೇಲೆ ವಾಟ್ಸ್ ಆಪ್ ಚಾಟಿಂಗ್, ಫೇಸ್ಬುಕ್, ಇನ್ಸ್ಟ್ರಾಗ್ರಾಂನಲ್ಲಿ ಫೋಟೋಸ್ ಲೈಕಿಂಗ್, ಶೇರಿಂಗ್, ಚಾಟಿಂಗ್ ..! ವಿಕೆಂಡ್ನಲ್ಲಿ ಸಿಕ್ಕಾಪಟ್ಟೆ ಕಾಲ್ ಹಿಂಗೆ ಸ್ನೇಹ ಇನ್ನಷ್ಟು ಗಟ್ಟಿಗೊಂಡಿತ್ತು. ಆದ್ರೆ ಶಾನ್ ಆಗಲೇ ನನ್ನ ಕಂಪನಿ ಇಷ್ಟ ಆಗುತ್ತಾ? ಅಂತ ಪ್ರಶ್ನೆ ಮಾಡದಾಗೆಲ್ಲ ಸುಮಾರು ಫ್ರೆಂಡ್ಸ್ ಇರೋ ನನಗೆ ಹಾ! ಅದರಲ್ಲಿ ನೀನು ಒಬ್ಬ, ಸೋ ಯು ಆರ್ ನೈಸ್ ಅಂತ ಅಂದಿದ್ದೆ..ಆಮೇಲೆ ಹಿಂಗೆ ಮಾತುಕತೆಗಳು ಮುಂದುವರದಿದ್ದವು. ಶಾನ್ ಗೆ ನನ್ನ ಕೇಶರಾಶಿಗೆ ಸೋತಹೋಗಿದ್ದ, ಅದನ್ನ ಹೇಳಿಕೊಂಡಿದ್ದ ಕೂಡ..ಹಂಗೆ ಅವನ ಒಂದ ಕೆನ್ನೆಮೇಲಿನ ಡಿಂಪಲ್ನ ನಾನು ಇಷ್ಟಪಟ್ಟಿರೋದನ್ನ ವ್ಯಕ್ತಪಡಿಸಿದ್ದೆ ಅವನಲ್ಲಿ..ಸೋ ಒಂದಿನ ಶಾನ್ ವಿಡಿಯೋ ಕಾಲ್ ಮಾಡ್ಲ, ನಿನ್ನ ಜೊತೆ ಮಾತಡಬೇಕು ಅಂತ ಹೇಳ್ದಾಗ ನಾನು ಸಮ್ಮತಿಸಿದ್ದೆ..ಆವತ್ತು ಸಂಡೇ, ವಿಡಿಯೋ ಕಾಲ್ನಲ್ಲಿ ಮಾತಡದ್ವಿ ಒಂದು ಹತ್ತು ನಿಮಿಷ ಅಷ್ಟೇ.ಆಮೇಲೆ ಮೆಸೇಜಲ್ಲಿ ನಾ ಅವನ ಗುಳಿಕೆನ್ನೆ ಬಗ್ಗೆ ಹೇಳಿದ್ರೆ ಅವನು ನಿನ್ನ ಕೂದಲು ನೋಡ್ತಿದ್ದೆ ಅಂತ ಖುಷಿ ಪಟ್ಟಿದ್ವಿ..ದಿನಗಳು ಸರೀತ ಹೋಗ್ತಿದ್ವು, ಮಧ್ಯೆ ಶಾನ್ ನಿನ್ನ ಮೀಟ್ ಆಗಬೇಕು ಅಂತ?  ಸೋ ನೀನು ನನ್ನ ಭೇಟಿ ಆಗೋಕೆ ರೆಡಿನಾ ಅಂತ ಕೇಳಿದ್ದ..

ಸರಿ ಬಟ್ ಇಬ್ಬರೂ ಫ್ರೀ ಶೆಡ್ಯೂಲ್ ನೋಡ್ಕೊಂಡ ಮೀಟ್ ಆಗೋಣ ಅಂತ ಮಾತಾಡಿ ಕೊಂಡಿದ್ವಿ..ಹಿಂಗೆ ಪರಿಚಯ ಆಗಿದ್ದು, ಒಂದುವರೆ ತಿಂಗಳಲ್ಲೇ ಮೀಟ್ ಆಗೋಕೆ ರೆಡಿಯಾಗಿದ್ವಿ..ಆದ್ರೆ ಆ ಮೀಟಿಂಗ್ ಮುಂಚೆನೇ ಇಬ್ಬರು ಮೀಟಿಂಗ್ ಬಗ್ಗೆ ಡಿಸ್ಕಶನ್ ಮಾಡ್ತಾನೇ ಬಂದಿದ್ವಿ..ಆದ್ರೆ ಶಾನ್ ನನ್ನ ಇಷ್ಟಪಡೋಕೆ ಶುರು ಮಾಡಿದ್ದ, ಅದನ್ನ ವ್ಯಕ್ತಪಡಿಸಿದ್ದ,ನಾನು ಅದನ್ನ ಸ್ನೇಹದಲ್ಲೇ ಮುಚ್ಚೋ ಪ್ರಯತ್ನಪಟ್ಟಿದ್ದೆ…!

ಯಾಕೋ ಮನೇಲಿ ನನಗೆ ಹುಡಗನ್ನ ಬೇರೆ ನೋಡ್ತೀದಾರೆ ಸೋ ಇವಾಗ ಪ್ರೀತಿನಾ? ಮತ್ತೆ ಪ್ರೀತಿ ಮಾಡಿ ನನ್ನ ಫ್ರೆಂಡ್ಸ್ ಮೋಸ ಹೋದ ರೀತಿಲೇ ನಾನೂ ಮೋಸ ಹೋದ್ರೆ ? ಊಹು, ನನ್ನಲ್ಲಿ ಇದ್ದ ಗೊಂದಲಗಳನ್ನ ಹೇಳದೇನೆ, ಅವನಿಗೆ ಸುಮ್ಮನೆ ಏನೂ ಎಕ್ಸಪೆಕ್ಟೇಶನ್ ಇಟ್ಕೊಳ್ಳದೇ ಮೀಟ್ ಆಗೋಕ ಬರ್ತೀನಿ ಅಂದ್ರೆ ಖಂಡಿತ ಬನ್ನಿ ಒಳ್ಳೆ ಫ್ರೆಂಡ್ ಆಗಿ ಅಂತ ಹೇಳಿದ್ದೆ… !

ಯಾಕೆಂದ್ರೆ ಶಾನ್ ಆಗಲೇ ಎಕ್ಸೈಟಮೆಂಟ್ನಲ್ಲಿದ್ದದ್ದು ನನಗೆ ಮನವರಿಕೆ ಆಗಿತ್ತು.ಆತನ ಎಕ್ಸೈಟ್ಮೆಂಟ್ ತಣ್ಣೀರೆರಚಿ, ನೋವು ಪಡಿಸಿದ್ದೆ..! ಆದ್ರೆ ಆ ಬೇಜಾರು ನನಗೂ ಇತ್ತು ಆದ್ರೆ ತೋರಿಸಿಕೊಳ್ಳದೆ ಸುಮ್ಮನಾದೆ.
ಕಡೆಗೆ ಅವತ್ತು ಅವನು ತನ್ನೂರಿಗೆ ಹೋಗೋ ಮುಂಚೆ ನಿನ್ನ ಮೀಟಾಗ್ತೀನ ಅಂದ, ನಾನು ಸರಿ ಅಂತಾ.ಡಿಸೈಡ್ ಮಾಡಿದ್ವಿ..
ಇತ್ತ ನನ್ನ ಫ್ರೆಂಡ್ಸ್ ಬೇರೆ  ಯಾರೋ ಈಗ ಪರಿಚಯ ಆಗಿದ್ದಾನೆ ಅಂತೀಯ,ಅದು ಆನ್ಲೈನ್ ಫ್ರೆಂಡು,ಮೀಟ್ ಆಗೋಕ ಹೋಗ್ತೀಯ? ಅದು ಒಬ್ಬಳೇ? ಏನಾದ್ರೂ ಹೆಚ್ಚುಕಡಿಮೆ ಆದ್ರೆ ಏನ್ಮಾಡ್ತೀಯ? ಸುಮ್ಮನೆ ಏನಾದ್ರೂ ನೆಪ ಹೇಳಿ ಕಳಚ್ಕೋ ಅಂತ ಹೆದರಿಸ್ತಿದ್ರು.!

ಯಾಕೋ ತುಂಬಾ ಯೋಚನೆ ಮಾಡಿ ಅಷ್ಟಂತೂ ಶಾನ್ ಬಗ್ಗೆ ತಿಳ್ಕೊಂಡೋಳಿಗೆ ಆ ವ್ಯಕ್ತಿ ಆ ತರಹ ಖಂಡಿತ ಇಲ್ಲ, ಮನದಲ್ಲಿ ಅವನ ಬಗ್ಗೆ ಇದ್ದ ವಿಶ್ವಾಸದಿಂದ ಅವನನ್ನ ಕಡೆಗೂ ಒಬ್ಬಳೇ ಮೀಟ್ ಆಗಿದ್ದೆ..ಅದು ನನ್ನೂರಿನ ಬಸ್ ಸ್ಟಾಪ್ ನಲ್ಲಿ ಅರ್ಧಗಂಟೆ ವೇಟ್ ಮಾಡ್ಸಿದ್ದೆ ಅವನನ್ನ, ಆಮೇಲೆ ಒಂದು ಪಾರ್ಕ ಹೋದ್ವಿ. ಮನದಲ್ಲೇನೋ ಆತಂಕ ತೋರಸದೆ ಸುಮ್ಮನೆ ಮಾತು ಶುರು ಮಾಡ್ದೆ ಹೆಂಗಿತ್ತು ಜರ್ನಿ ಅಂತ..ಪರವಾಗಿಲ್ಲ ಬೆಳಗಿನ ಜಾವ ಬಂದೆ ಅಂದ ಶಾನ್ಗೆ ಸಾರಿ ಅರ್ಧ ಗಂಟೆ ಕಾಯಿಸಿದೆ, ಕಾಲೇಜ್ ಹೋಗಿ ಬರಬೇಕಿತ್ತು ಸೋ ಲೇಟ್ ಆಗಿತ್ತು ಅಂತ ಹೇಳ್ದೆ.. ಪರವಾಗಿಲ್ಲ ಬಿಡು, ಅಂತ ಇಬ್ಬರೂ ಹೆಜ್ಜೆ ಹಾಕಿದ್ವಿ..ಮಾತು ಕಡಿಮೆ ಅಂದವ ನನ್ನೂ ಮಾತನಾಡೋಕೆ ಬಿಡ್ದೆ ನಾನಸ್ಟಾಪ್ ಮಾತಡ್ತಿದ್ದ. ಖುಷಿ ಆಯ್ತು, ಅವನ ಮಾತಿನ ಮಧ್ಯೆ ತಮಾಷೆಗಳು ಬೇರೆ, ಸೋ ಆಗಲೇ ಕಂಫರ್ಟೇಬಲ್ ಅನ್ಸಿ ಇಬ್ಬರೂ ನೆನಪಿಗೆ ಸೆಲ್ಫಿ ಕ್ಲಿಕ್ ತಗೊಂಡಿದ್ದು ಆಯ್ತು..!

ಮರಳಿ ಬರಬೇಕಾದ್ರೆ ಜೋರಾಗಿ ಮಳೆ ಸುರಿತಾ ಇತ್ತು, ಆಸರೆಗೆ ಅಂತ ಒಂದ ಮರದ ಕೆಳಗಡೆ ಇದ್ದ ಬೆಂಚ್ಮೇಲೆ ಕೂತ್ಕೊಂಡ್ವಿ, ಮಳೆಗೆ ಸ್ವಲ್ಪ ನೆನೆದದ್ದರಿಂದ ನನ್ನ ಕಣ್ಣಿಗ್ ಹಚ್ಚಿದ ಕಾಡಿಗೆ ಸ್ವಲ್ಪ ಅಳಸಿತ್ತು ಅದನ್ನ ನೋಡಿದ ಶಾನ್ ಒರೆಸಿಕೊಳ್ಳೋಕೆ ಹೇಳಿದ್ದ, ನಾನು ಸ್ಕಾರ್ಫ ತುದಿ ಇಂದ ಕಣ್ಣಂಚು ಒರಸ್ಕೊಂಡು ಹೋಯ್ತಾ ಅಂತ ಮುಖ ಎತ್ತಿ ಕೇಳೋಕು, ಅವನು ನನ್ನ ಎರಡು ಕೆನ್ನೆ ಹಿಡದು ತನ್ನ ಕೈಗಳಿಂದ ಪ್ರೀತಿಯಿಂದ ಚೂಟಿ ಸರಿ ಹೋಯ್ತು ಅಂತ ಕಣ್ಣಲ್ಲಿ ಕಣ್ಣಿಟ್ಟು ನೋಡಿದ ಪರಿಗೆ ನನ್ನ ಕಣ್ಣುಗಳು ನಾಚಿದ್ದವು..! ಆಮೇಲೆ  ಎರಡು ಗಂಟೆಗಳು ಸರಿದು ಸೂರ್ಯ ಇನ್ನೇನೂ ಪೂರ್ವಕ್ಕಿಳೀತಾನೆ ಅನ್ನೋಷ್ಟರಲ್ಲೇ ಶಾನ್ ನನ್ನ ಜೋಪಾನವಾಗಿ ಬಸ್ ಹತ್ತಿಸಿ ಮನೆ ತಲುಪಿಸಿ, ಆತ ಕೂಡ ಊರು ಸೇರಿದ್ದ..ನಂತರ ನನ್ನ ಕೆಲಸಗಳಲ್ಲಿ ವ್ಯಸ್ಥಳಾದವಳಿಗೆ ಊರಲ್ಲಿ ಅಪ್ಪಮ್ಮನ ಜೊತೆ ಕಾಲ ಕಳೆತೀರೋ ಶಾನ್ಗೆ ಯಾಕೆ ತೊಂದರೆ ಮಾಡೋದು ಅಂತ ಮೆಸೇಜ್, ಕಾಲ್ಗಳನ್ನ ಮಾಡ್ದೆ ಸುಮ್ಮನಾದೆ, ಶಾನ್ ಕೂಡ ಅಷ್ಟೇ ಊರಲ್ಲಿದ್ದರಿಂದ ಏನೋ ಒಂದೇ ಸಾರಿ ಮಿಸ್ ಯೂ ಅಂತ ಮೆಸೆಜ್ ಬಂತು.

ಯಾಕೋ ತಲೇಲಿ ಎಲ್ಲಿ ಪ್ರೀತಿ ಫೇಲ್ಯೂರ್ ಆಗಬಿಟ್ಟರೆ, ಅಥವಾ ಇವನನ್ನ ಪ್ರೀತಿಸಿ ಇನ್ನೊಬ್ಬರ ಮದುವೆ ಆಗೋದ…ಊಹು ಯಾಕೋ ನಾನಾ ಗೊಂದಲ ಮನಸ್ಸಲ್ಲಿ ನಾನೇನೂ ರಿಪ್ಲೈ ಮಾಡಲಿಲ್ಲ..ಒಂದು ತಿಂಗಳು ಆಗ್ತ ಬಂತು ಶಾನ್ ಈಗ  ಊರಿಂದ ಬಂದು ತಂಬಾ ವಾರಗಳೇ ಆಗಿರಬೇಕು  ಅದಕ್ಕೆ ಮತ್ತೆ ಮತ್ತೆ ಹೆಚ್ಚೆಚ್ಚು ಮೆಸೇಜ್ಗಳು ಬರ್ತಿವೆ, ಮಿಸ್ ಯೂ ಅಂತ, ಐ ಲವ್ ಯೂ ಅಂತ, ಕರೆಗಳು ಬರ್ತಿವೆ ಊಹು…ಫೋನ್ ಸೈಲೆಂಟ್ ಹಾಕಿ ಸುಮ್ಮನೆ ಮತ್ತೆ ಯಾವ್ದೋ ಯೋಚನೆಗಳಲ್ಲಿ ಕಳದೋಕ್ತಿತೀದೀನಿ…

-ಸುರೇಖಾ ಪಾಟೀಲ,ಹುಬ್ಬಳ್ಳಿ

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...