ಅದೇ ಸ್ಕಿನ್ನಿ, ಪೆನ್ಸಿಲ್, ಸ್ಟ್ರೈಟ್ ಕಟ್, ಬೂಟ್ ಕಟ್, ಆ್ಯಂಕಲ್ ಲೆಂತ್ ಜೀನ್ಸ್‍ಗಳನ್ನು ಹಾಕಿ ಬೋರಾಗಿದೀರಾ, ಹಾಗಿದ್ರೆ ನೀವು ಲೇಸಿ ಜೀನ್ಸ್‍ಗಳನ್ನು ಒಂದ್ಸಾರಿ ಟ್ರೈ ಮಾಡಿ ನೋಡಬಹುದು…!
ಹೌದು..ಇದೀಗ ನಿತ್ಯ ಅದೇ ಜೀನ್ಸ್ ಗಳನ್ನು ತೊಡುತ್ತಿದ್ದ ಹುಡುಗಿಯರಿಗ ಲೇಸಿ ಜೀನ್ಸ್‍ಗಳತ್ತ ಮುಖ ಮಾಡಿದ್ದಾರೆ. ಕಾಲೇಜು ಹುಡುಗಿಯರ ಮೋಸ್ಟ್ ಕಂಫರ್ಟ, ಫಂಕಿ, ಸ್ಟೈಲಿಶ್ ಆಗಿ ಕಾಣೋ ಲೇಸಿ ಜೀನ್ಸ್‍ಗಳು ಇದೀಗ ಹುಡಗಿಯರ ಮನಗೆದ್ದಿವೆ.
• ಲೇಸಿ ಜೀನ್ಸ್ ನಲ್ಲಿ ಸಾಮಾನ್ಯ ಡೆನಿಮ್ ಕಲರ್ ಹಾಗೂ ಬ್ಲ್ಯಾಕ್ ಆ್ಯಂಡ್ ವೈಟ್ ಕಲರ್‍ಗಳಲ್ಲಿ ಹೆಚ್ಚು ಲಭ್ಯ.
• ಪ್ಯಾಂಟ್‍ನ ಎರಡು ಬದಿ ಲೇಸ್‍ನ ಡಿಸೈನ್ ಇರುವದರಿಂದ ಜೀನ್ಸ್ ಗಿಂತ ಲೇಸ್‍ನಲ್ಲಿ ನಿಮ್ಮ ಕಾಲುಗಳಿಗೆ ಡಿಫರೆಂಟ್ ಲುಕ್ ನೀಡುತ್ತವೆ.
• ಕೇವಲ ಜೀನ್ಸ್ ಪ್ಯಾಂಟ್‍ಗಳಲ್ಲದೆ ಜೀನ್ಸ್ ಲೇಸಿ ಶಾಟ್ರ್ಸಗಳು ದೊರೆಯುವದರಿಂದ ಶಾಟ್ರ್ಸ್ ಪ್ರಿಯರು ಕೂಡ ಇವನ್ನ ಟ್ರೈ ಮಾಡಬಹುದು.
• ಬೂಟ್ಸ್‍ಗಳನ್ನು ಅವೈಡ್ ಮಾಡಿ ಕಾರಣ ಲೇಸಿ ಜೀನ್ಸ್‍ನ ಡಿಸೈನ್ ಮುಚ್ಚಿ ಹೋಗುವ ಸಾದ್ಯತೆ ಇರುತ್ತದೆ.
• ಲೇಸಿ ಜೀನ್ಸ್ ಧರಿಸುವಾಗ ಕಾಲಿಗೆ ಪಾಯಲ್ ಅಥವಾ ಆ್ಯಂಕಲೆಟ್ಸ್‍ಗಳನ್ನು ಧರಿಸದಿರುವದು ಉತ್ತಮ, ಇದರಿಂದ ಲೇಸ್ ಎಳೆ ಎದ್ದು ಕಿರಿ ಕಿರಿಯುಂಟಾಗುತ್ತದೆ.
• ಈ ಪ್ಯಾಟರ್ನ ಪ್ಯಾಂಟನ ಮೇಲೆ ಆದಷ್ಟು ಶಾರ್ಟ ಟಾಪ್ಸ್, ಶಟ್ರ್ಸ, ಕ್ರಾಪ್ ಟಾಪ್‍ಗಳನ್ನು ಧರಿಸಿದರೆ ಸ್ಟೈಲಿಶ್ ಆಗಿ ಕಾಣಬಹುದು.
• ಈ ರೀತಿಯಾದ ಪ್ಯಾಂಟನ್ನ ಒಗೆಯುವಾಗ ಕೂಡ ತುಂಬಾ ಜಾಗರೂಕತೆಯನ್ನು ವಹಿಸಬೇಕಾಗುವದು ಅವಶ್ಯ, ಆದಷ್ಟು ಡ್ರೈ ಕ್ಲೀನ್ ಮಾಡಿದ್ರೆ ಉತ್ತಮ.
• ಇನ್ನು ಲೇಸಿ ಜೀನ್ಸ್ ಗಳನ್ನು ಕೊಳ್ಳಲು ಅಸಾಧ್ಯವಾದರೆ ನಿಮ್ಮ ರಿಪ್ಡ್ ಜೀನ್ ಧರಿಸುವ ಮುನ್ನ ಲೇಸಿ ಸ್ಟಾಕಿಂಗ್ಸ್ ಧರಿಸಿ ಅದಕ್ಕೆ ಲೇಸಿ ಜೀನ್ಸ್‍ನ ಟಚ್ ನೀಡಬಹುದು.
-ಸುರೇಖಾ ಪಾಟೀಲ, ಹುಬ್ಬಳ್ಳಿ