ಜಾತಿ, ಧರ್ಮದ ಎಲ್ಲೆ ಮೀರಿ ಬೆಳೆಯುತ್ತಿದ್ದಾರೆ ಇಲ್ಲಿನ ಮಕ್ಕಳು. ಹಿಂದೂ, ಮುಸ್ಲೀಂ, ಕ್ರೈಸ್ತ ಎನ್ನುವ ಯಾವುದೇ ಮಿತಿ ಇಲ್ಲದೆ ಮೂರೂ ಧರ್ಮದ ಪವಿತ್ರ ಗ್ರಂಥಗಳನ್ನು ಓದ್ತಾ ಓದ್ತಾ ಬೆಳೆಯುತ್ತಿದ್ದಾರೆ ಈ ಶಾಲೆಯ ಮಕ್ಕಳು..! ಈ ಮಕ್ಕಳನ್ನು ನೋಡಿ ನಾವೆಲ್ಲಾ ಕಲಿಯುವುದು ಸಾಕಷ್ಟಿದೆ ಎಂದೆನಿಸುತ್ತಿದೆ .
ಹೌದು, ಇವರು ಚಿಕ್ಕಮಗಳೂರಿನ ಕದಿಮಿದ್ರಿ ಸರ್ಕಾರಿ ಪ್ರಾಥಮಿಕ ಪಾಠ ಶಾಲೆ ಮಕ್ಕಳು. ಈ ಶಾಲೆಯಲ್ಲಿನ ಅಷ್ಟೂ 150 ಮಕ್ಕಳೂ ಕೂಡ ಜಾತಿ, ಧರ್ಮವನ್ನು ಮೀರಿದ್ದಾರೆ. ಹಿಂದೂ, ಮುಸ್ಲೀಂ, ಕ್ರೈಸ್ತ… ಹೀಗೆ ಯಾವುದೇ ಬೇಧ-ಭಾವವಿಲ್ಲದೆ ಭಗವದ್ಗೀತೆ, ಕುರಾನ್, ಬೈಬಲ್ ಅನ್ನು ಪಠಿಸ್ತಾ ಇದ್ದಾರೆ..!
ಹಿಂದೂ ಮಕ್ಕಳು ಭಗವದ್ಗೀತೆಯನ್ನು, ಕ್ರಿಶ್ಚಿಯನ್ ಮಕ್ಕಳು ಬೈಬಲ್ ಅನ್ನು ಹಾಗೂ ಮುಸ್ಲೀಂ ಮಕ್ಕಳು ಕುರಾನ್ ಅನ್ನು ಹೇಳಿಕೊಡುತ್ತಿದ್ದಾರೆ…! ಮಕ್ಕಳ ಈ ಕಲಿಕೆಗೆ ಶಾಲಾ ಆಡಳಿತ ಮಂಡಳಿಯವರು, ಶಿಕ್ಷಕರು ಸಹ ಪ್ರೋತ್ಸಾಹ ನೀಡುತ್ತಿದ್ದಾರೆ. ಕಳೆದ ಎರಡುವರೆ ವರ್ಷಗಳಿಂದ ಮೂರು ಗ್ರಂಥಗಳ ಪಠಣ ನಡೀತಿದೆಯಂತೆ.
ಈ ಪುಟಾಣಿಗಳಿಗೆ ಶುಭವಾಗಲಿ… ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು