ಒಂದೆಡೆ ಖಾಸಗಿ ಆಸ್ಪತ್ರೆ ವೈದ್ಯರು ಹಾಗೂ ಸರ್ಕಾರದ ನಡುವೆ ಹಗ್ಗಜಗ್ಗಾಟ ನಡೀತಿದೆ…ಸದ್ಯ ಬೆಳಗಾವಿ ಸರ್ಕಾರ ಮತ್ತು ಖಾಸಗಿ ವೈದ್ಯರ ನಡುವಿನ ಪ್ರತಿಷ್ಠಿಯ ಕಣವಾಗಿದೆ. ಈ ನಡುವೆ ಇದೇ ಬೆಳಗಾವಿಯಲ್ಲಿ ಸರ್ಕಾರಿ ವೈದ್ಯರೊಬ್ಬರು ನಕಲಿ ಪತ್ರಕರ್ತರ ಕಿರುಕುಳದಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ…!
ಬೆಳಗಾವಿಯ ಹುಕ್ಕೇರಿ ತಾಲೂಕು ಆಸ್ಪತ್ರೆ ವೈದ್ಯ ದೀಪಕ್ ಅಂಬಲಿ ರಾಜೀನಾಮೆ ನೀಡಿರು ವೈದ್ಯರು. ಕೊಟಬಾಗಿ ಗ್ರಾಮದ 13 ವರ್ಷದ ಬಾಲಕಿ ತಾಯವ್ವ ಕಾಮಶೆಟ್ಟಿ ಎಂಬಾಕೆ ಅಸ್ತಮ, ಹೃದಯ ಸಂಬಂಧಿ ತೊಂದರೆಯಿಂದ ಬಳಲ್ತಾ ಇದ್ದಳು. ಈಕೆಯನ್ನು ನವೆಂಬರ್ 5ರಂದು ಈಕೆಯನ್ನು ತಾಲೂಕು ಆಸ್ಪತ್ರೆಗೆ ಸೇರಿಸಲಾಗಿತ್ತು. ಮೂರು ದಿನದ ನಂತರ ಈಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ವೈದ್ಯರು ತಿಳಿಸಿದ್ರು.
ಅವರ ಸಲಹೆಯಂತೆ ಬೆಳಗಾವಿಗೆ ಕರೆತರುತ್ತಿರುವಾಗ ಮಾರ್ಗಮಧ್ಯೆ ಬಾಲಕಿ ಸಾವನ್ನಪ್ಪಿದ್ದಳು..ಹುಕ್ಕೇರಿ ವೈದ್ಯರೇ ಬಾಲಕಿ ಸಾವಿಗೆ ಕಾರಣ ಅಂತ ಪೋಷಕರು ಆರೋಪಿಸಿ, ಒಂದೆರಡು ದಿನ ಗಲಾಟೆ ಮಾಡಿ ಸುಮ್ಮನಾಗಿದ್ರು. ಆದ್ರೆ, ಕೆಲವು ನಕಲಿ ಪತ್ರಕರ್ತರು ಹಾಗೂ ಸಂಘಟನೆಯವರು ಬೆದರಿಸ್ತಿದ್ದಾರೆ, ಹಣಕ್ಕೆ ಬೇಡಿಕೆ ಇಡ್ತಿದ್ದಾರೆ ಎಂಬ ಕಾರಣಕ್ಕಾಗಿ ವೈದ್ಯ ರಾಜೀನಾಮೆ ನೀಡಿದ್ದಾರೆ ಅಂತ ಹೇಳಲಾಗ್ತಿದೆ.