No menu items!
19.6 C
Munich
Tuesday, April 28, 2026

ಬೆಂಗಳೂರಲ್ಲಿ ಕಾಮುಕರ ಅಟ್ಟಹಾಸ; ಯುವತಿ ಮೇಲೆ ಗ್ಯಾಂಗ್‍ರೇಪ್…

Must read

ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಕಾಮುಕರ ಅಟ್ಟಹಾಸ ಮಿತಿ ಮೀರಿದೆ. ಕಾಮುಕರು ಸತತ 10 ದಿನಗಳಿಂದ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ನಿರಂತರ ಅತ್ಯಾಚಾರ ನಡೆಸಿರೋ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರಿನ ಕಾಡುಗುಡಿಯ ಕ್ಲಾಸಿಕ್ ಇನ್ ಲಾಡ್ಜ್‍ನಲ್ಲಿ ಈ ಘಟನೆ ನಡೆದಿದ್ದು, ಅದರ ಮಾಲೀಕ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಕ್ಲಾಸ್‍ಮೇಟ್‍ಗಳ ಸಹಾಯದಿಂದ ಪಾರ್ಟಿ ನೆಪದಲ್ಲಿ ಲಾಡ್ಜ್‍ಗೆ ಕರ್ಕೊಂಡು ಹೋಗಿ 10 ದಿನಗಳ ಕಾಲ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನಲಾಗಿದೆ. ಕೆಆರ್‍ಪುರಂ ಪೊಲೀಸರ ಕಾರ್ಯಚರಣೆಯಿಂದ ಪ್ರಕರಣ ಬೆಳಕಿಗೆ ಬಂದಿದೆ.
ಪಶ್ಚಿಮ ಬಂಗಾಳದ ಮನೋರಂಜನ್ ಪಂಡಿತ್, ಉಡುಪಿಯ ರಾಘವೇಂದ್ರ, ಮೈಸೂರಿನ ಮಂಜುರಾಜ್, ದಾವಣಗೆರೆಯ ಸಾಗರ್ ಎಂಬ ಕಾಮುಕರನ್ನು ಬಂಧಿಸಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article