ಇಂತಹ ಊರನ್ನು ಎಲ್ಲದರೂ ಕಂಡಿದ್ದೀರಾ..? ಇದನ್ನು ಸಮಾಧಿಗಳ ನಗರ ಎಂದರೆ ತಪ್ಪಿಲ್ಲ..!

Date:

ಆ ಊರನ್ನು ಮೇಲಿನಿಂದ ನೋಡಿದರೆ ಚಿಕ್ಕ ಚಿಕ್ಕ ಕಲ್ಲುಗಳನ್ನು ಜೋಡಿಸಿಟ್ಟ ಹಾಗೆ ಗೋಚರಿಸುತ್ತದೆ. ತಕ್ಷಣವೇ ನೋಡುಗರನ್ನು ತನ್ನೆಡೆಗೆ ಸೆಳೆದುಬಿಡುತ್ತದೆ. ಆದರೆ ಹತ್ತಿರಕ್ಕೆ ಹೋದರೆ ಅಲ್ಲಿ ಕಾಣಿಸುವುದು ಒಂದಕ್ಕೊಂದು ಅಂಟಿಕೊಂಡಂತೆ ನಿರ್ಮಿಸಿರುವ ಮನೆಗಳು ಮತ್ತು ಸಮಾಧಿಗಳು. ಆದರೂ ಆ ಬೃಹತ್ ನಗರದಲ್ಲಿ ಜೀವಿಸುತ್ತಿರುವುದು ಕೇವಲ 5 ಜನರು ಮಾತ್ರ..! ಯೆಸ್ ಕೇವಲ 5 ಜನರು ಮಾತ್ರ ಇಲ್ಲಿ ವಾಸವಿದ್ದಾರೆ.
ವಾದಿ ಉಸ್ ಸಲಾಮ್ ಎಂಬ 1,485 ಎಕರೆಯಷ್ಟು ವಿಸ್ತಾರದಲ್ಲಿ ಹರಡಿಕೊಂಡಿರುವ ಈ ಬೃಹತ್ ನಗರ ಯುದ್ಧಪೀಡಿತ ಇರಾಕ್ ದೇಶದಲ್ಲಿದೆ. ಅಲ್ಲಿನ ಬಹುತೇಕ ಎಲ್ಲಾ ನಾಗರಿಕರು ಉಗ್ರರ ದಾಳಿಗೆ ಉತ್ತರಿಸಲಾಗದೇ ಸಾವನ್ನಪ್ಪಿದ್ದಾರೆ. ಜೀವದ ಬಗ್ಗೆ ಆಸೆ ಇರುವವರು ಓಡಿಹೋಗಿದ್ದಾರೆ. ಆದರೆ ತಮ್ಮ ಊರನ್ನು ಬಿಡಲು ಇಚ್ಛೆ ಇಲ್ಲದ ಒಂದು ಕುಟುಂಬದ ಐದು ಜನರು ಮಾತ್ರ ಅಲ್ಲೇ ಜೀವನ ನಡೆಸುತ್ತಿದೆ.
ಅಚ್ಚರಿ ಎಂದರೆ ವಾದಿ ಉಸ್ ಸಲಾಮ್ ನಲ್ಲಿ ವಿಶ್ವದ ಅತಿ ದೊಡ್ಡ ಸ್ಮಶಾನವೂ ಇದೆ. 1,400 ವರ್ಷಗಳಿಂದ ಈ ಊರು ಶಿಯಾಗಳ ಪವಿತ್ರ ನಗರ ಎಂದೇ ಗುರುತಿಸಿಕೊಂಡು ಬಂದಿದೆ. ಇದನ್ನು ರಕ್ಷಿಸಲೆಂದು ಇದ್ದವರ ಸಮಾಧಿಗಳನ್ನು ಹೊಂದಿರುವ ಗಮ್ಯಸ್ಥಾನ ಎನಿಸಿಕೊಂಡಿದೆ. ಅಲ್ಲದೇ ಇಂದಿಗೂ ಪ್ರತಿ ವರ್ಷ ನೂರಾರು, ಸಾವಿರಾರು ಶಿಯಾಗಳನ್ನು ಇಲ್ಲಿ ತಂದು ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಇದರಿಂದ ದಿನದಿಂದ ದಿನಕ್ಕೆ ಈ ಸ್ಮಶಾನದ ವಿಸ್ತೀರ್ಣ ಹೆಚ್ಚುತ್ತಲೇ ಹೋಗುತ್ತಿದೆ.


ಈ ನಗರದಲ್ಲಿ ವಿಶ್ವದ ಅತಿ ದೊಡ್ಡ ಸ್ಮಶಾನ ನಿರ್ಮಾಣವಾಗಲು ಇರಾಕ್ ಯುದ್ಧವೇ ಕಾರಣ. ಏಕೆಂದರೆ ಇರಾಕ್ ಯುದ್ಧ ಉತ್ತುಂಗದಲ್ಲಿದ್ದಾಗ ಪ್ರತಿದಿನ ಅಂದಾಜು 200ರಿಂದ 250 ಜನ ಯೋಧರು ಸಾವನ್ನಪ್ಪುತ್ತಿದ್ದರು. ಹಾಗೆ ಸಾವನ್ನಪ್ಪಿದ ಯೋಧರ ದೇಹಗಳನ್ನು ಇಲ್ಲೇ ಹೂಳಲಾಗುತ್ತಿತ್ತು. ಬಳಿಕ ಅವುಗಳ ಮೇಲೆ ಸಮಾಧಿಗಳನ್ನು ಕಟ್ಟಲಾಗುತ್ತಿತ್ತು. ಆದ್ದರಿಂದ ಎಲ್ಲಿ ನೋಡಿದರಲ್ಲಿ ಸಮಾಧಿಗಳೇ ಕಾಣಿಸುತ್ತವೆ. ಅಚ್ಚರಿ ಎಂದರೆ ಈ ನಗರ ಈಗ ಪ್ರವಾಸಿಗರ ಹಾಟ್ ಫೆವರಿಟ್ ತಾಣ ಎನಿಸಿದೆ. ಬೈಕ್ ಇಲ್ಲದೇ ಹೋದರೆ ಒಂದು ತಿಂಗಳಾದರೂ ಇಲ್ಲಿನ ಸಮಾಧಿಗಳನ್ನು ನೋಡುವುದು ಕಷ್ಟ ಎಂಬ ಕಾರಣದಿಂದ ಇಲ್ಲಿ ಬೈಕ್ ಗಳು ಬಾಡಿಗೆಗೆ ಸಿಗುತ್ತವೆ. ಅಲ್ಲದೇ ಇಲ್ಲಿ ಚಿಕ್ಕ ಪ್ರಮಾಣದಲ್ಲಿ ಯೋಧರು ಇದ್ದು, ಪ್ರವಾಸಿಗರ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ.
ಆದ್ದರಿಂದ ಇಲ್ಲಿ ಜನಸಂಖ್ಯೆಯನ್ನು ಹೆಚ್ಚಿಸಬೇಕು. ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಬೇಕು ಎಂಬ ಕಾರಣದಿಂದ ಕೆಲ ಸಂಘ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ಅದು ಫಲ ನೀಡುತ್ತಿಲ್ಲವಷ್ಟೇ..! ಇನ್ನೊಂದೆಡೆ ಇಸಿಸ್ ಉಗ್ರರ ಬೆದರಿಕೆ ಬೇರೆ ಎದುರಾಗಿದ್ದು, ಈ ಸ್ಮಾರಕಗಳು ಅವನತಿಯ ಅಂಚಿಗೆ ಬಂದು ತಲುಪಿವೆ.

 

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....