ಆ ಊರು ಸಂಪೂರ್ಣವಾಗಿ ನೆಲದಡಿಯೇ ಇದೆಯಂತೆ..! ಆಸ್ಟ್ರೇಲಿಯಾದಲ್ಲೊಂದು ಅಚ್ಚರಿಯ ನಗರ..!

0
788

ಆ ಊರಿನಲ್ಲಿ ಎಲ್ಲಾ ಸೌಲಭ್ಯಗಳಿವೆ. ವಿದ್ಯುತ್, ನೀರು, ವಸತಿ ಸೇರಿದಂತೆ ಮನುಷ್ಯನ ಜೀವನ ನಡೆಸಲು ಏನೇನು ಬೇಕೋ ಎಲ್ಲಾ ಅಲ್ಲಿವೆ. ಅಲ್ಲದೇ ಆ ಊರಿನ ಜನರೂ ಕೂಡಾ ಸುಖ ಸಂತೋಷದಿಂದ ಬದುಕುತ್ತಿದ್ದಾರೆ. ಆದರೆ ಅವರೆಲ್ಲಾ ವಾಸಿಸುತ್ತಿರುವುದು ಮಾತ್ರ ಮಣ್ಣಿನಲ್ಲಿ..!
ಯೆಸ್.. ಆಸ್ಟ್ರೇಲಿಯಾದ ಅಡಿಲೇಡ್ ನಿಂದ 840 ಕಿಲೋ ಮೀಟರ್ ದೂರದಲ್ಲಿರುವ ಈ ಊಡಿನ ಹೆಸರು ಕೂಬರ್ ಪ್ಯಾಡಿ..! ಈ ಊರು ಒಂದು ಕಾಲದಲ್ಲಿ ಗಣಿ ಪ್ರದೇಶವಾಗಿತ್ತಂತೆ. ಕಾಲಕ್ರಮೇಣ ಜನವಸತಿ ಪ್ರದೇಶವಾಗಿ ಬದಲಾಗಿದೆ. ಈಗ ಈ ಗ್ರಾಮದಲ್ಲಿ 3500ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದು, ಚರ್ಚ್, ಮ್ಯೂಸಿಯಂ, ಆರ್ಟ್ ಗ್ಯಾಲರಿಗಳು, ಹೋಟೆಲ್ ಗಳು ಇವೆ. ಇನ್ನೂ ಇಲ್ಲಿನ ಮನೆಗಳಲ್ಲಿ ಬಹುತೇಕ ಎಲ್ಲಾ ಆಧುನಿಕ ಸೌಲಭ್ಯಗಳಿವೆ. ಟಿವಿ, ಎಸಿ, ಆಧುನಿಕ ಕಿಚನ್ ಸೇರಿದಂತೆ ಹತ್ತಾರು ಸೌಲಭ್ಯಗಳು ಇಲ್ಲಿನ ಜನರಿಗೆ ದೊರೆಯುತ್ತಿವೆ. ಆದರೆ ಇಲ್ಲಿಗೆ ನೀರನ್ನು ಮಾತ್ರ 24 ಕಿಲೋ ಮೀಟರ್ ದೂರದಿಂದ ಭೂಗತ ಮಾರ್ಗದ ಮೂಲಕವೇ ಪೋರೈಸಲಾಗುತ್ತದೆ.
ಕೂಬರ್ ಪಾಡಿಯ ಹವಾಮಾನವೇ ಒಂದು ವಿಚಿತ್ರ. ಏಕೆಂದರೆ ಇಲ್ಲಿ ಹಗಲು ಹೊತ್ತಿನಲ್ಲಿ 50 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದ್ದರೆ, ರಾತ್ರಿ ವೇಳೆ ಸೊನ್ನೆ ಡಿಗ್ರಿಗೆ ಕುಸಿಯುತ್ತದೆ. ಇಲ್ಲಿನ ಜನ ಈ ಹವಾಮಾನಕ್ಕೆ ಹೊಂದಿಕೊಂಡಿದ್ದು, ಪ್ರವಾಸಿಗರಿಗೆ ಮಾತ್ರ ಸ್ವಲ್ಪ ತೊಂದರೆ ಎನಿಸುತ್ತದೆ.
ಕೂಬರ್ ಪ್ಯಾಡಿಯಲ್ಲಿ ಪ್ರತಿ ವರ್ಷ ಹಲವಾರು ಉತ್ಸವಗಳು ನಡೆಯುತ್ತವೆ. ಮೈನರಲ್ ರೇಸ್, ಮುರುಭೂಮಿ ಫೆಸ್ಟಿವಲ್ ಮತ್ತು ಓಪಲ್ ಫೆಸ್ಟಿವಲ್ ಗಳು ನಡೆಯುತ್ತವೆ. ಇನ್ನು ಎಲ್ಲಾ ವಯೋಮಾನದ ಜನರಿಗೂ ವಿವಿಧ ಮಾದರಿಯ ಕ್ರೀಡಾಕೂಟಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ. ಈ ವೇಳೆ ಅಪಾರ ಪ್ರಮಾಣದ ಪ್ರವಾಸಿಗರು ಆಗಮಿಸುತ್ತಾರೆ.
ಸಿನಿಮಾ ನಿರ್ದೇಶಕರ ಪಾಲಿಗೆ ಕೂಬರ್ ಪ್ಯಾಡಿ ಹೇಳಿ ಮಾಡಿಸಿದಂತಹ ತಾಣ. ಆದ್ದರಿಂದ ಇಲ್ಲಿ ಹತ್ತಾರು ಸಿನಿಮಾಗಳ ಶೂಟಿಂಗ್ ನಡೆದಿದೆ. ಫೈರ್ ಇನ್ ದ ಸ್ಟೋನ್, ಪಿಚ್ ಬ್ಲ್ಯಾಕ್, ರೆಡ್ ಪ್ಲ್ಯಾನೆಟ್ ಚಿತ್ರಗಳು ಅವುಗಳಲ್ಲಿ ಪ್ರಮುಖವಾದವು.
ಕೂಬರ್ ಪ್ಯಾಡಿ ಜನರ ಪ್ರಮುಖ ಆದಾಯವೆಂದರೆ ಪ್ರವಾಸೋದ್ಯಮ. ಅದೇ ಹೆಚ್ಚಿನ ಜನರ ಆದಾಯದ ಮೂಲವಾಗಿದೆ. ಆದ್ದರಿಂದ ಇಲ್ಲಿನ ಜನ ಸುಖ ಸಂತೋಷದಿಂದ ಬದುಕುತ್ತಿದ್ದಾರೆ. ಅಂತಹ ಜೀವನ ಎಲ್ಲರಿಗೂ ಸಿಕ್ಕರೆ ಹೇಗಿರುತ್ತದೆ ಅಲ್ಲವೇ..?

1.

house

2.

house-4

3.

1411916238331_Image_galleryImage_C1H0DF_Australia_South_Au

 

LEAVE A REPLY

Please enter your comment!
Please enter your name here