ಸಿನಿಮಾ ಚಿತ್ರೀಕರಣದ ವೇಳೆ ನಟಿ ರಾಗಿಣಿ ದ್ವಿವೇದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಗಿಣಿ ಅಭಿನಯದ ಎಮ್‍ಎನ್‍ಸಿಎಚ್ ಚಿತ್ರೀಕರಣ ಮಿನರ್ವ್ ಮಿಲ್ ನಲ್ಲಿ ನಡೆಯುತ್ತಿತ್ತು. ಈ ವೇಳೆಯಲ್ಲಿ ಫೈಟಿಂಗ್ ದೃಶ್ಯದ ಶೂಟಿಂಗ್ ವೇಳೆ ಸಹಕಲಾವಿದರೊಬ್ಬರು ಮಿಸ್ ಆಗಿ ರಾಗಿಣಿ ಅವರ ಕಿವಿಗೆ ಪಂಚ್ ಮಾಡಿದ್ದರಿಂದ ಗಾಯಗೊಂಡಿದ್ದಾರೆ.
ರಾಗಿಣಿ ಅವರ ಕಿವಿಯಲ್ಲಿ ರಕ್ತ ಬಂದಿದ್ದು, ಕೂಡಲೇ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಮ್‍ಎನ್‍ಸಿಎಚ್ ಮುಸ್ಸಂಜೆ ಮಹೇಶ್ ನಿರ್ದೇಶನದ ಸಿನಿಮಾ.