ದೀಪಿಕಾ ಪಡುಕೋಣೆ ಅಭಿನಯದ ‘ಪದ್ಮಾವತಿ’ ಸಿನಿಮಾ ಬಿಡುಗಡೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಸಿನಿಮಾದಲ್ಲಿ ರಾಣಿ ಪದ್ಮಾವತಿ ಹಾಗೂ ರಜಪೂತ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ವಿವಾದದ ನಡುವೆ ರಿಪಬ್ಲಿಕ್ ಟಿವಿ ಮುಖ್ಯಸ್ಥ, ಪತ್ರಕರ್ತ ಅರ್ನಾಬ್ ಗೋಸ್ವಾಮಿ ಸಿನಿಮಾ ವೀಕ್ಷಿಸಿದ್ದಾರೆ.
ಪದ್ಮಾವತಿ ಸಿನಿಮಾ ಬಗ್ಗೆ ಅರ್ನಾಬ್ ಗೋಸ್ವಾಮಿ ಸಕರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಹೇಳುವಂತೆ ರಾಣಿ ಪದ್ಮಾವತಿಯನ್ನು ಕೆಟ್ಟದಾಗಿ ಬಿಂಬಿಸಿಲ್ಲ. ರಾಣಿ ಪದ್ಮಾವತಿ ಮತ್ತು ರಜಪೂತ ಸಮುದಾಯಕ್ಕೆ ಹೆಮ್ಮೆ ತರುವಂತಿದೆಯಂತೆ. ಈ ಸಿನಿಮಾ ವೀಕ್ಷಣೆ ನಂತರ ರಜಪೂತರ ಮೇಲಿನ ಗೌರವ ಹೆಚ್ಚಲಿದೆಯಂತೆ. ಇದು ರಜಪೂತರಿಗೆ, ರಾಣಿ ಪದ್ಮಾವತಿಗೆ ಸಿಕ್ಕ ಗೌರವ ಅಂದಿದ್ದಾರೆ ಅರ್ನಾಬ್.
ಅಂತೆಯೇ ಖಿಲ್ಜಿ ಮತ್ತು ಪದ್ಮಾವತಿ ನಡುವೆ ಒಂದೇ ಒಂದು ದೃಶ್ಯವೂ ಇಲ್ಲ. ಅಷ್ಟೇ ಏಕೆ ಪದ್ಮಾವತಿಯ ಪತಿ ರತನ್ ಸಿಂಗ್ ಅವರ ನಡುವೆ ಕೂಡ ಅಂಥಾ ದೃಶ್ಯವಿಲ್ಲ ಎಂದು ಅರ್ನಾಬ್ ಹೇಳಿದ್ದಾರೆ. ಸಿನಿಮಾ ವಿಚಾರದಲ್ಲಿ ರಾಜಕೀಯ ಮಾಡದೆ ಬಿಡುಗಡೆ ಅವಕಾಶ ಮಾಡಿಕೊಡಬೇಕು ಎಂಬುದು ಅರ್ನಾಬ್ ಅಭಿಪ್ರಾಯ.