ನನಸಾಗದ ಕನಸು…

Date:

ಬಡತನದಲ್ಲಿ ಬೆಳೆದ ಅನಾಥ ಹುಡುಗ. ಅವನ ಕನಸು, ಜೀವನ ಎಲ್ಲವೂ ಬಾಲ್ಯದ ಗೆಳತಿ. ಇದ್ದಕ್ಕಿದ್ದಂತೆ ಇಬ್ಬರೂ ದೂರಾಗಬೇಕಾದ ಅನಿವಾರ್ಯತೆ. ಅಸಲಿ ಇಬ್ಬರದ್ದು ತಪ್ಪಿರಲಿಲ್ಲ.‌ ಇವರಿಬ್ಬರ ನಡುವೆ ಇನ್ನೊಬ್ಬ ಹುಡುಗನ ಎಂಟ್ರಿ. ಆಮೇಲೇನಾಗುತ್ತೆ ಎನ್ನುವ ಸುಂದರ ಪ್ರೇಮಕಥೆಯೇ ‘ಡ್ರೀಮ್ ಗರ್ಲ್’.

ಸದ್ದುಗದ್ದಲ್ಲ ಇಲ್ಲದೆ ಪರದೆ ಮೇಲೆ ಬಂದ ಸಿನಿ ಚೆಲುವೆ‌ ನಿರ್ದೇಶಕರ ಕನಸಿನ ರಾಣಿ.‌ ಈ ರಾಣಿಯನ್ನು (ಸಿನಿಮಾವನ್ನು) ಇನ್ನಷ್ಟು ಸಿಂಗರಿಸಬೇಕಿತ್ತು. ಒಂದೊಳ್ಳೆ ಕಥೆ. ಆದ್ರೆ, ವೀಕ್ಷಕನ ಮುಂದೆ ಬರುವ ಮೊದಲು ಸ್ವಲ್ಪ ಉಪ್ಪು ಹುಳಿ ಖಾರ ಹಾಕ್ಬೇಕಿತ್ತು.‌ ಬರೀ ಸಪ್ಪೆಯಾಗಿ ಉಣಬಡಿಸಿದ್ದಾರೆ ನಿರ್ದೇಶಕರು.


ಅಜಿತ್ ಪಟ್ರೆ, ರಘುಭಟ್ ಚಿತ್ರದ ನಾಯಕರು.‌ ದೀಪಿಕ ದಾಸ್, ಅಮೃತ ರಾವ್ ನಾಯಕಿಯರು.‌


ಮೋಹನ್ ಪಾತ್ರದಾರಿ ನಾಯಕ ಅಜಿತ್ ಅನಾತ‌‌. ಶಿಕ್ಷಕರೊಬ್ಬರು ಇವನನ್ನು ಬೆಳೆಸ್ತಾರೆ. ಶಾಲಾ ದಿನಗಳಿಂದ ಜೊತೆಗಿದ್ದ ಸ್ನೇಹಿತೆ‌ ದೀಪಾಳ ಜೊತೆ ಬೆಳೀತಾ ಬೆಳೀತ ಲವ್ ಆಗುತ್ತೆ. ಆಮೇಲೆ ಕೆಲಸ ಹುಡುಕಿಕೊಂಡು ಹಳ್ಳಿ ಬಿಟ್ಟು ಬಂದ ನಾಯಕ ಅಜಿತ್ ಗೆ ರಘುಭಟ್ ಪರಿಚಯ ಆಗುತ್ತೆ. ಅವರ ಮನೆಯ ಕಷ್ಟಕಂಡು ತನಗೆ ಸಿಗಬೇಕಿದ್ದ ಕೆಲಸವನ್ನು ರಘುಗೆ ತ್ಯಾಗ ಮಾಡ್ತಾನೆ.‌


ನಾನು ಕೆಲಸ ಹಿಡಿದೇ ಗೆಳತಿ ದೀಪಾಗೆ ಮುಖತೋರಿಸೋದು, ಪುನಃ ಭೇಟಿ ಆಗೋದು ಅಂತ‌ ಡಿಸೈಡ್ ಮಾಡಿ ಆಕೆಯಿಂದ ದೂರಾಗ್ತಾನೆ.  ಅತ್ತ ಅಪ್ಪ-ಅಮ್ಮನ ಒತ್ತಾಯಕ್ಕೆ ಮಣಿದು ಅವರು ತೋರಿಸಿದ ಹುಡುಗನನ್ನು ಮದುವೆ ಆಗೋಕೆ‌ ಒಪ್ಪಿಕೊಳ್ತಾಳೆ ದೀಪಾ. ಆ‌ ಹುಡುಗ ರಘು..!


ಇತ್ತ ಅಜಿತ್ ಗೆ ಮತ್ತೊಬ್ಬಳ ಪರಿಚಯ ಆಗುತ್ತೆ, ಅವಳೇ ಅಮೃತಾ. ಅವಳಿಗೂ ಇವಳಿಗೂ ಲವ್ ಆಗುತ್ತಾ ? ಮತ್ತೆ ಅಜಿತ್ ಗೆ ಕನಸಿನ ರಾಣಿ ದೀಪಾ ಸಿಕ್ತಾಳಾ? ಹೇಗೆ ಸಿಕ್ತಾಳೆ..? ಇನ್ನೋರ್ವ ನಾಯಕ ರಘು ಕೈ ಹಿಡಿಯುವ ಚೆಲುವೆ ಇಬ್ಬರಲ್ಲಿ ಯಾರು ಅಂತ ಚಿತ್ರಮಂದಿರದಲ್ಲೇ ನೋಡಿ. ಚಿತ್ರದ ಹಾಡುಗಳು ಪರವಾಗಿಲ್ಲ, ಸಿನಿಮಾ ಅಲ್ಲಲ್ಲಿ  ಬೋರ್ ಹೊಡಿಸುತ್ತೆ. ಕೆಲವು ದೃಶ್ಯಗಳನ್ನು ತುರುಕಿದ್ದಾರೆ ನಿರ್ದೇಶಕ ಲಕ್ಷ್ಮಣ್ ನಾಯಕ್.
ನಾಯಕ ನಟಿ ಅಮೃತಾ ರಾವ್ ಪೋಸ್ಟರ್ ಗಳಲ್ಲಿ ಮಾತ್ರ ಮಿಂಚುತ್ತಿದ್ದಾರೆ. ಸಿನಿಮಾದಲ್ಲಿ ಹೇಳಿಕಳ್ಳುವಂತ ಪಾತ್ರವಿಲ್ಲ. ಚಿತ್ರದ ಪ್ರಮುಖ ಆಕರ್ಷಣೆ ನಾಯಕಿ ದೀಪಿಕಾ ದಾಸ್. ಸಿನಿಮಾ ಪೋಸ್ಟರ್ ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ದೀಪಿಕಾ ಇಡೀ‌ ಚಿತ್ರದಲ್ಲಿ ಆವರಸಿಕೊಂಡಿದ್ದಾರೆ. ಅವರ ನಟನೆಯೂ ಸೂಪರ್.


ಅಜಿತ್ ಹಾಗೂ ರಘುಭಟ್ ಅವರಿಂದ ನಿರ್ದೇಶಕರು ಇನ್ನೂ ಹೆಚ್ಚಿನ ದನ್ನು ನಿರೀಕ್ಷಿಸಬಹುದಿತ್ತು. ಇತ್ತೀಚಿಗೆ ತೆರೆಕಂಡ ದಾದ ಈಸ್ ಬ್ಯಾಕ್ ನಲ್ಲಿ‌ ಅತ್ಯುತ್ತಮವಾಗಿ ನಟಿಸಿದ್ದ ರಘುಭಟ್ ಅವರಿಂದಲಂತೂ ನಟನೆಯನ್ನು ಹೊರತರುವ ಕೆಲಸ ಮಾಡಿಲ್ಲ ಅನಿಸುತ್ತೆ.‌
ಸಿನಿಮಾದಲ್ಲಿ ನಾಯಕನ ಕನಸು ಕೊನೆಗೂ ಈಡೇರಿರಬಹುದು…! ಆದ್ರೆ, ಡೈರೆಕ್ಟರ್, ಪ್ರೊಡ್ಯುಸರ್ ಎಲ್ಲವೂ ಆಗಿರೋ ಲಕ್ಷ್ಮಣ್ ನಾಯಕ್ ಅವರು ಚಿತ್ರದ ಬಗ್ಗೆ ಕಂಡಿದ್ದ ಕನಸು ಈಡೇರಿಲ್ಲ ಅನ್ನೋದಂತು ಸ್ಪಷ್ಟ.


ಒಟ್ಟಾರೆಯಾಗಿ ಕಥೆ ಓಕೆ, ಅದಕ್ಕೆ ಸಿನಿಮಾ ರೂಪ ನೀಡುವಾಗ ಎಡವಿದ್ದಾರೆ. ಗಡಿಬಿಡಿಲೇ ಚಿತ್ರೀಕರಣ ಮುಗಿಸಿದಂತಿದೆ. ಒಂದ್ಸಲ ಸಿನಿಮಾ ನೋಡಬಹುದು. ಮೊದಲೇ ಹೇಳಿದಂತೆ ಅಲಲ್ಲಿ ಬೋರ್ ಅನಿಸಿದ್ರೂ ಕೊನೆತನಕ ಏನ್ ಆಗುತ್ತೆ ಅನ್ನೋ ಕುತೂಹಲ ಕಾಯ್ದಿರಿಸುತ್ತೆ ಎನ್ನುವುದರಲ್ಲಿ ಡೌಟೇ ಇಲ್ಲ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...